Breaking News
Home / Recent Posts / ಗ್ರಾಮದ ಧ್ವಾರ ಬಾಗಿಲುಗಳು ಗ್ರಾಮೀಣ ಜನಜೀವನದ ನೈಜ ಪ್ರತಿಬಿಂಬಗಳಾಗಿವೆ – ರಾಜ್ಯಸಭಾ ಸಂಸದ ಈರಣ್ಣ ಕಡಾಡಿ

ಗ್ರಾಮದ ಧ್ವಾರ ಬಾಗಿಲುಗಳು ಗ್ರಾಮೀಣ ಜನಜೀವನದ ನೈಜ ಪ್ರತಿಬಿಂಬಗಳಾಗಿವೆ – ರಾಜ್ಯಸಭಾ ಸಂಸದ ಈರಣ್ಣ ಕಡಾಡಿ

Spread the love

ಮೂಡಲಗಿ: ಗ್ರಾಮದ ಧ್ವಾರ ಬಾಗಿಲುಗಳು ಗ್ರಾಮೀಣ ಜನಜೀವನದ ನೈಜ ಪ್ರತಿಬಿಂಬಗಳಾಗಿವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ತಾಲೂಕಿನ ವೆಂಕಟಾಪೂರ ಗ್ರಾಮದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ ಯೋಜನೆಯಡಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ, ನೂತನವಾಗಿ ನಿರ್ಮಾಣಗೊಂಡ ಧ್ವಾರ ಬಾಗಿಲ ಕಾಮಗಾರಿಯನ್ನು ವಿಕ್ಷಣೆ ಮಾಡಿ ಮಾತನಾಡಿದ ಅವರು ಪುರಾತನ ಕಾಲದಿಂದಲೂ ಪ್ರತಿ ಗ್ರಾಮಕ್ಕೂ ಧ್ವಾರ ಬಾಗಿಲುಗಳು ಇರುವುದು ರೂಡಿಗತವಾಗಿತ್ತು. ಗ್ರಾಮದ ಹಿರಿಯರೂ ಬಂದು ಕೂಡುತ್ತಿದ್ದರು ಗ್ರಾಮಕ್ಕೆ ಹೊಸಬರು ಬಂದರೇ ಅಥವಾ ಗ್ರಾಮದಿಂದ ಹೊರಗಡೆ ಹೊದರೆ ಗ್ರಾಮದ ಹಿರಿಯರಿಗೆ ಗೋತ್ತಾಗುತಿತ್ತು ಎಂದರು.
ಆಧುನಿಕತೆಯ ಭರದಲ್ಲಿ ಈ ಪದ್ದತಿ ನಶಿಸಿ ಹೋಗಿದೆ. ಆದರೆ ವೆಂಕಟಾಪೂರ ಗ್ರಾಮಸ್ಥರು ಶಿಥಿಲಗೊಂಡಿರುವ ಧ್ವಾರ ಬಾಗಿಲುನ್ನು ಇದ್ದ ಸ್ಥಳದಲ್ಲಿಯೇ ಮತ್ತೋಮ್ಮೆ ಅಭಿವೃದ್ಧಿ ಪಡಿಸಿ ಪ್ರಾರಂಭಿಸುತ್ತಿರುವುದು ಗ್ರಾಮೀಣ ಸಂಸ್ಕøತಿ ಸೋಗಡಿನ ಪ್ರತಿಕವಾಗಿದೆ ಎಂದರಲ್ಲದೇ ಈ ಕಾಮಗಾರಿಯನ್ನು ಅಂದಾಜು 15 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಗ್ರಾಮದ ಹಿರಿಯರ ವಿಶಾಲ ಕಲ್ಪನೆ, ನಿರ್ಮಾಣ ಮಾಡಲು ಪಟ್ಟ ಪರಿಶ್ರಮ ಹಾಗೂ ಗ್ರಾಮಸ್ಥರ ಸಹಕಾರವನ್ನು ಕೊಂಡಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಅವರಾಧಿ-ವೆಂಕಟಾಪೂರ ರಸ್ತೆಯ ಕೆ.ಎಂ.ಎಫ್ ಡೈರಿ ಹತ್ತಿರ ಬಸ್ ಪ್ರಯಾಣಿಕರ ನೂತನ ತಂಗುದಾಣ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಗ್ರಾಮದ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಸಂಸದರ ಪ್ರದೇಶಾಭಿವೃದ್ದಿ ನಿಧಿಯನ್ನು ಸಾಧ್ಯವಾದಷ್ಟು ಜನರ, ಗ್ರಾಮದ ಕಲ್ಯಾಣ ಕಾರ್ಯಕ್ಕೆ ಮಂಜೂರಾತಿ ನೀಡಿದ್ದೇನೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಪ್ರಮುಖರಾದ ತಮ್ಮಣ್ಣ ಹೊರಟ್ಟಿ, ಸಂಗಪ್ಪ ಕಂಠಿಕಾರ, ಭೀಮಶಿ ದಳವಾಯಿ, ಶಾಸಪ್ಪಗೌಡ ಪಾಟೀಲ, ಶ್ರೀಶೈಲ ಪೂಜೇರಿ, ರಂಗನಗೌಡ ಪಾಟೀಲ, ಈರಪ್ಪ ಢವಳೇಶ್ವರ, ವೆಂಕಪ್ಪ ಕೋಳಿಗುಡ್ಡ, ಮಾರುತಿ ಹಳ್ಳೂರ, ಯಲ್ಲಪ್ಪ ಗಾಂಜಿ, ಮಾದೇವ ವಟವಟಿ, ಶ್ರೀಕಾಂತ ಕವಟಕೊಪ್ಪ, ಮಾರುತಿ ನಗಚಟ್ಟಿ ಸೇರಿದಂತೆ ದೇವಸ್ಥಾನ ಸಮಿತಿ ಸದಸ್ಯರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
 


Spread the love

About inmudalgi

Check Also

ಸಾಹಿತಿ ಚಿದಾನಂದ ಹೂಗಾರ ರವರ ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ

Spread the loveಮೂಡಲಗಿಯ ಚೈತನ್ಯ ಸೊಸೈಟಿಯಲ್ಲಿ ಮೂಡಲಗಿ ತಾಲ್ಲೂಕು ಚುಸಾಪ ಮತ್ತು ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ ಚಿದಾನಂದ ಹೂಗಾರ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ