ಮೂಡಲಗಿ : ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಧರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿಧಾನ ಸ್ಮರಿಸಿ ಗೌರವ ಸಲ್ಲಿಸುವುದರ ಜೊತೆಗೆಅವರ ಕನಸಿನ ಭಾರತವನ್ನು ನನಸು ಮಾಡಲು ಪಣತೋಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಧಾರವಾಡ ಹೈಕೋರ್ಟ ವಕೀಲರಾದಚೇತನ ಲಿಂಬಿಕಾಯಿ ಹೇಳಿದರು.
ಅವರು ಮಂಜುನಾಥ ಸೈನಿಕ ತರಬೇತಿಕೇಂದ್ರ ಹಾಗೂ ಎಲ್. ವಾಯ್. ಅಡಿಹುಡಿಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶ್ರೀ ಮಂಜುನಾಥ ಮೊಟಾರಡ್ರೈವ್ಹಿಂಗ ಸ್ಕೂಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಮೃತ ಮಹೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ಸ್ವಾತಂತ್ರದೊರಕಿ75 ಸಂವತ್ಸರಗಳು ಗÀತಿಸಿದರು ಕೂಡನಮ್ಮ ಭಾರತ ದೇಶ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ. ಅದು ಪೂರ್ಣ ಪ್ರಮಾಣದ ಅಭಿವೃದ್ಧಿ ಹೊಂದಿದ ದೇಶವಾಗಬೇಕಾದರೆ ನಮ್ಮ ಭಾರತ ದೇಶದ ಪ್ರತಿಯೊಬ್ಬ ಪ್ರಜೆಗಳು ಅವರವರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಪೂರ್ಣ ಪ್ರಮಾಣದ ಅರಿವನ್ನು ಹೊಂದಿರಬೇಕು ಮತ್ತು ಅದು ನಮ್ಮ ಸಂವಿಧಾನದ ಮೂಲ ಆಶಯವಾಗಿದೆ ಎಂದರು.
ಪೋಲಿಸ್ ಅಧಿಕಾರಿ ಎ.ಎಸ್.ಆಯ್. ಎಮ್.ಎಸ್.ಬಡಿಗೇರ ಮಾತನಾಡಿ, ಹರ್‍ಘರ್‍ತಿರಂಗಾ ಅಭಿಯಾಣವು ಸಂತೋಷದ ಸಂಗತಿ. ಈ ಅಭಿಯಾಣದಿಂದ ಯುವಕರಲ್ಲಿ ದೇಶ ಭಕ್ತಿಯ ಕಿಚ್ಚು ಹೆಚ್ಚಿದೆಎಂದರು. ಬಿ.ಬಿ.ಹಂದಿಗುಂದ ಮಾತನಾಡಿ, ಶ್ರೇಷ್ಠ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕನೂ ಸಿದ್ಧನಾಗಬೇಕು ಮತ್ತುಭಾರತಮಾತೆಯಸೇವೆ ಮಾಡುವ ಸಂದರ್ಭ ಬಂದೋದಗಿದರೆಎಲ್ಲತ್ಯಾಗಕ್ಕು ಸಿದ್ದನಾಗಬೇಕು ಎಂದು ಭಾವಿ ಸೈನಿಕರಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣಅಡಿಹುಡಿ, ಈಶ್ವರಕಂಕಣವಾಡಿ, ಪಿ.ಎಸ್.ಮಲ್ಲಾಪೂರ, ಹನಮಂತಕಂಕಣವಾಡಿ, ಹಾಲಪ್ಪ ಅಂತರಗಟ್ಟಿ, ಅಜ್ಜಪ್ಪ ಕಂಕಣವಾಡಿ, ಬಿ.ವಾಯ್. ಮಾರಾಪೂರ, ಮಹಾಂತೇಶ ಮನ್ನಿಕೇರಿ, ಶಿಲ್ಪಾ ಗಡಾದ, ಶಶಿಧರ ಆರಾದ್ಯ, ಮೌನೇಶ ಬಡಿಗೇರ, ಮಂಜುನಾಥ ಕುಂಬಾರ, ಬಸವರಾಜ ಹೊಸಮನಿ, ಮಹಾಂತೇಶ ಕೊಟಬಾಗಿ, ಮತ್ತು ಕರ್ನಾಟಕದ ಎಲ್ಲಿ ಜಿಲ್ಲೆಗಳಿಂದ ಆಗಮಿಸಿದ ಸುಮಾರುಎರಡು ನೂರಕ್ಕಿಂತ ಅಧಿಕ ಆರ್ಮಿ ಭಾವಿ ಅಗ್ನೀವಿರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.