ಯೋಧನಿಗೆ ಸನ್ಮಾನ
ಮೂಡಲಗಿ: ಸಮೀಪದ ಪಟಗುಂದಿ ಗ್ರಾಮದ ನಿವಾಸಿ ಯೋಧ ವಿರೂಪಾಕ್ಷ ಅಂಗಡಿ ಭಾರತೀಯ ಸೇನೆ ವತಿಯಿಂದ ದಕ್ಷಿಣ ಸ್ವೀಡಾನ್ ದೇಶದಲ್ಲಿ ೭ ತಿಂಗಳು ಶಾಂತಿದೂತನಾಗಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿ ಬಂದಿದ್ದರಿದ ಗ್ರಾಮದಲ್ಲಿ ಸನ್ಮಾನಿಸಿ ಸ್ವಾಗತಿಸಲಾಯಿತು. ದೆಹಲಿ, ಬೆಂಗಳೂರು ಸೇರಿದಂತೆ ನಾನಾ ಕಡೆ ಸೇವೆ ಸಲ್ಲಿಸಿ ಅಲ್ಲಿಂದ ದಕ್ಷಿಣ ಸ್ವೀಡಾನ್ ಗೆ ತೆರಳಿ ೭ ತಿಂಗಳ ನಂತರ ಮರಳಿದ್ದಾರೆ. ನಂತರ ಪಂಜಾಬ್ ಗೆ ತೆರಳಿ ಮತ್ತೆ ಸೇವೆ ಮುಂದುವರಿಸಲಿದ್ದಾರೆ. ಬಿಡುವಿನ ಅವಧಿಯಲ್ಲಿ ತವರಿಗೆ ಆಗಮಿಸಿದಾಗ ಸನ್ಮಾನಿಸಿ ಅಭಿನಂದಿಸಲಾಯಿತು.
ಅಕ್ಕಿಮರಡಿ ಶಾಲೆಯ ಸಂಸ್ಕೃತ ಶಿಕ್ಷಕ ಮಹಾಂತೇಶ ಅಂಗಡಿ, ಕಲ್ಲಪ್ಪ ಗದಗ, ವಿವೇಕ ಗದಗ, ನಾಗವ್ವ ಅಂಗಡಿ, ಶಂಕರ ಅಂಗಡಿ, ಕಸ್ತೂರಿ ಅಂಗಡಿ, ಬಸವರಾಜ ಅಂಗಡಿ ಇದ್ದರು.