ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2025-26ನೇ ಸಾಲಿನ ಅಧ್ಯಕ್ರರಾಗಿ ವಿಶಾಲ ಶೀಲವಂತ ಅವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಗಿರೀಶ ಆಸಂಗಿ ಹಾಗೂ ಖಜಾಂಚಿಯಾಗಿ ಡಾ. ಪ್ರಶಾಂತ ಬಾಬಣ್ಣವರ ಅವರು ಅಯ್ಕೆಯಾಗಿರುವರು.
ಪದಗ್ರಹಣ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2025-26 ಸಾಲಿನ ಪದಗ್ರಹಣ ಕಾರ್ಯಕ್ರಮವು ಜೂ.28ರಂದು ಸಂಜೆ 5 ಗಂಟೆಗೆ ಸ್ಥಳೀಯ ಎಸ್‍ಎಸ್‍ಆರ್ ಕಾಲೇಜದ ಕಲ್ಮೇಶ್ವರಬೋಧ ಸ್ವಾಮಿ ಸಭಾಭವನದಲ್ಲಿ ಜರುಗಲಿದೆ. ಪದಗ್ರಹಣ ಅಧಿಕಾರಿಯಾಗಿ ಲಯನ್ಸ್ ಫಸ್ಟ್ ಡಿಸ್ಟ್ರೀಕ್ಟ ಗವರ್ನರ್ ಬೆಳಗಾವಿಯ ರಾಜಶೇಖರ ಹಿರೇಮಠ ಅವರು ಭಾಗವಹಿಸಲಿದ್ದಾರೆ ಎಂದು ಲಯನ್ಸ್ ಅಧ್ಯಕ್ಷ ಸಂಜಯ ಮೋಕಾಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
IN MUDALGI Latest Kannada News