Breaking News
Home / ತಾಲ್ಲೂಕು / ತುಕ್ಕಾನಟ್ಟಿ ಅಕ್ಷರದಾಸೋಹದಲ್ಲಿ ವಿಶೇಷ ಭೋಜನ ಸವಿದ ಹಳ್ಳಿ ಮಕ್ಕಳು

ತುಕ್ಕಾನಟ್ಟಿ ಅಕ್ಷರದಾಸೋಹದಲ್ಲಿ ವಿಶೇಷ ಭೋಜನ ಸವಿದ ಹಳ್ಳಿ ಮಕ್ಕಳು

Spread the love

ತುಕ್ಕಾನಟ್ಟಿ ಅಕ್ಷರದಾಸೋಹದಲ್ಲಿ ವಿಶೇಷ
ಭೋಜನ ಸವಿದ ಹಳ್ಳಿ ಮಕ್ಕಳು

ಮೂಡಲಗಿ: ತಾಲೂಕಿನ ತುಕ್ಕಾನಟ್ಟಿ ಸರ್ಕಾರಿ ಕನ್ನಡ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು ಏಳುನೂರು ವಿದ್ಯಾರ್ಥಿಗಳು ಶುಕ್ರವಾರದಂದು ಸಜ್ಜಿರೊಟ್ಟಿ., ಅಗಸಿಹಿಂಡಿ, ಬದನೇಕಾಯಿಪಲ್ಯ, ಜುನಕ, ಬಾನ, ಗೋದಿ ಮಾದಲಿ ತುಪ್ಪ, ಹಾಲು, ಮೊಸರು, ಹಾಗೂ ಮಸಾಲೆ ಮಜ್ಜಿಗೆಯನ್ನು ಜೋತೆ ಊಟ ಮಾಡಿ ಖುಷಿಪಟ್ಟರು.


ಸರ್ಕಾರದ ವಿಶೇಷ ಯೋಜನೆಯಾದ ಅದರಲ್ಲೂ ಶಿಕ್ಷಣ ಇಲಾಖೆಯ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಅಕ್ಷರ ದಾಸೋಹದ ಹಿನ್ನೆಲೆಯಲ್ಲಿ ಮದ್ಯಾಹ್ನದ ಬಿಸಿಯೂಟ ಜಾರಿಗೆ ತಂದು ಅನ್ನ ಸಾಂಬಾರು ಉಪ್ಪಿಟ್ಟಿ ಕೊಡುತ್ತಿರುವ ಸಂದರ್ಭದಲ್ಲಿ, ಮೂಡಲಗಿ ವಲಯದ ತುಕ್ಕಾನಟ್ಟಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನಗುರುಗಳು ಹಾಗೂ ಶಿಕ್ಷಕ ಸಿಬ್ಬಂಧಿಯ ಕ್ರಿಯಾಶೀಲತೆಯಿಂದಾಗಿ ಇದ್ದ ಸಂಪನ್ಮೂಲಗಳನ್ನೇ ಉಪಯೋಗಿಸಿಕೊಂಡು ಬಡಮಕ್ಕಳನ್ನು ದೃಷ್ಡಿಯಲ್ಲಿಟ್ಟುಕೊಂಡು ವಿದ್ಯಾರ್ಥಿಗಳ ಹಿತಾಸಕ್ತಿಗನುಗುಣವಾಗಿ ವಾರಕ್ಕೊಮ್ಮೆ ವಿವಿಧ ರೀತಿಯ ಪೌಷ್ಟಿಕಾಂಶಗಳನ್ನು ಹೊಂದಿರುವ ಆಹಾರವನ್ನು ತಯಾರಿಸಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಣಬಡಿಸುತ್ತಿರುವದು ವಿಶೇಷ. ಮಕ್ಕಳ ಬಯಕೆಗೆ ಅನುಗುಣವಾಗಿ ಇಡ್ಲಿ ಸಾಂಬಾರ್, ಹೋಳಿಗೆ, ಗುಲಾಬ ಜಾಮೂನ್, ಪುರಿಬಾಜಿ, ಗೆಣಸು, ಬಾದಾಮಿಹಾಲು, ಕೇಸರಿಹಾಲು, ಗೋದಿಪಾಯಸ, ಅಕ್ಕಿದೋಸೆ, ಹುಗ್ಗಿ, ಕರಿಗಡುಬು, ಚಪಾತಿ ಹೀಗೆ ಶಿಕ್ಷಣ ಇಲಾಖೆಯ ಊಟದ ಮೆನುಕ್ಕಿಂತ ಮಕ್ಕಳಿಗೆ ಬೇಕಾದ ಖಾದ್ಯದ ಮೆನುವನ್ನು ಇವರೇ ತಯಾರಿಸಿ ಬಡಮಕ್ಕಳ ಹಸುವು ನೀಗಿಸಿ, ಪ್ರೀತಿಯಿಂದ ಹೊಟ್ಟೆತುಂಬ ಅವರು ಬಯಸಿದ ಊಟ ನೀಡಿ ಮಕ್ಕಳನ್ನು, ಪಾಲಕರನ್ನು, ಸರ್ಕಾರಿ ಶಾಲೆಯತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಶಾಲೆಯ ದಾಖಲಾತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವದಕ್ಕೆ ಬಡ ಮಕ್ಕಳ ತುತ್ತಿನ ಚೀಲ ನೀಗಿಸುವದಷ್ಟೇ ಅಲ್ಲದೆ ರುಚಿಕಟ್ಟಾದ ಕಾರಣ ಅದರಂತೆ ಇವತ್ತು ಇವರ ಕಾರ್ಯನಡೆಯಿಂದ ಅಧಿಕಾರಿಗಳು, ಗ್ರಾಮಸ್ಥರು ಹರ್ಷ ವ್ಯಕ್ತಪಡೆಸಿದ್ದಾರೆ, ಓರ್ವ ಪ್ರಧಾನಗುರುಗಳ ಕ್ರಿಯಾಶೀಲತೆಯಿಂದ ಶಾಲೆಯಲ್ಲಿ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾದರು.

ಇಂದಿನ ವಿಶೇಷ ಭೋಜನ ಸಂದರ್ಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಎ.ಸಿ. ಮನ್ನಿಕೇರಿ ಹಾಗೂ ಮದ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕರಾದ ಎ.ಬಿ. ಮಂಜನ್ನವರ ಹಾಗೂ ಸಿ.ಆರ್.ಸಿ ಜಿ.ಕೆ. ಉಪ್ಪಾರ ಭಾಗವಹಿಸಿದರು. ಪ್ರಧಾನ ಗುರುಗಳಾದ ಶ್ರೀ ಎ.ವ್ಹಿ ಗಿರೆನ್ನವರ ಶಿಕ್ಷಕರಾದ ಲಕ್ಷ್ಮೀ ಹೆಬ್ಬಾಳ , ಪುಷ್ಪಾ ಭರಮದೆ, ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ್ಲ, ಎಸ್.ಡಿ.ಲಮಾಣಿ, ಶೀಲಾ ಕುಲಕರ್ಣಿ, ಕೆ.ಆರ. ಭಜಂತ್ರಿ, ಸಂಗೀತಾ ತಳವಾರ, ಎಮ್.ಕೆ.ಕಮ್ಮಾರ, ಎಮ್.ಡಿ. ಗೋಮಾಡಿ, ಉಪಸ್ಥಿತರಿದ್ದರು.

ಮೂಡಲಗಿ: ತುಕ್ಕಾನಟ್ಟಿ ಸರ್ಕಾರಿ ಕನ್ನಡ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶುಕ್ರವಾರದಂದು ವಿಷೇಶ ಊಟ ಸವಿದು ಖುಷಿಪಟ್ಟರು.

ವರದಿ: ಈಶ್ವರ ಢವಳೇಶ್ವರ
ಮೂಡಲಗಿ


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ