ಗೋಕಾಕ : ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಿಡಕಲ್ ಜಲಾಶಯದಿಂದ ಮಂಗಳವಾರ ಸಂಜೆಯಿಂದ ಘಟಪ್ರಭಾ ನದಿ ಮತ್ತು ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಹಿಡಕಲ್ ಜಲಾಶಯದಿಂದ ಜಿಎಲ್‍ಬಿಸಿಗೆ 1.50 ಟಿಎಂಸಿ, ಜಿಆರ್‍ಬಿಸಿಗೆ 1.50 ಟಿಎಂಸಿ, ಘಟಪ್ರಭಾ ನದಿಗೆ 1.00 ಟಿಎಂಸಿ ಮತ್ತು ಸಿಬಿಸಿಗೆ 0.50 ಟಿಎಂಸಿ ನೀರನ್ನು ಜೂ.16 ರಿಂದ 23 ರವರೆಗೆ ಹರಿಸಲಾಗುತ್ತಿದೆ ಎಂದು ಅವರು …
Read More »