Breaking News

Daily Archives: ಏಪ್ರಿಲ್ 16, 2021

ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ – ಪ್ರಕಾಶ ಮಾದರ

ಮೂಡಲಗಿ: ಸಮಾನತೆಯ ಹರಿಕಾರ ಡಾ.ಬಾಬಾ ಸಾಹೇಬ ಅಂಬೇಡ್ಕೆರ ಅವರ ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮುಖಂಡ ಪ್ರಕಾಶ ಮಾದರ ಹೇಳಿದರು. ದಲಿತ ಸಂಘರ್ಷ ಸಮಿತಿ(ಸಂಯೋಜಕ) ಕಚೇರಿಯಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕೆರ ಅವರ 130 ನೇ ಜಯಂತಿ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಅಂಬೇಡ್ಕರರು ಬಾಲ್ಯದ ಜೀವನದಲ್ಲಿ ಅನೇಕ ಅವಮಾನಗಳನ್ನು ಎದುರಿಸಿ ಉನ್ನತ ಶಿಕ್ಷಣಪಡೆದು ಹಿಂದುಳಿದ ಜನಾಂಗಕ್ಕಾಗಿ ಶ್ರಮಿಸಿದ ಮಹಾನ ವ್ಯಕ್ತಿ. ಅವರ …

Read More »

ಮಾತೋಶ್ರೀ ದಿ.ತಾಯಮ್ಮ ಭೀಮರಾಯಪ್ಪ ಕಮತ ಅವರ ಶೃದ್ಧಾಂಜಲಿ ಸಭೆ

ಬೆಟಗೇರಿ: ಸಮೀಪದ ಮಮದಾಪೂರ ಶ್ರೀ ಮೌನಮಲ್ಲಿಕಾರ್ಜುನ ಶಿವಯೋಗಿಗಳ ಪೂರ್ವಾಶ್ರಮದ ತಾಯಿಯವರಾದ ಶತಾಯುಷಿ, ಮಾತೋಶ್ರೀ ದಿ.ತಾಯಮ್ಮ ಭೀಮರಾಯಪ್ಪ ಕಮತ ಅವರ ಶೃದ್ಧಾಂಜಲಿ ಸಭೆ ಮಮದಾಪೂರದ ಶ್ರೀಮಠದಲ್ಲಿ ರವಿವಾರ ಏ.18ರಂದು ಮುಂಜಾನೆ 11 ಗಂಟೆಗೆ ನಡೆಯಲಿದೆ. ಶಿರಹಟ್ಟಿಯ ಶ್ರೀ.ನಿ.ಜ.ಫಕೀರಸಿದ್ಧರಾಮ ಮಹಾಸ್ವಾಮಿಜಿ ಸಾನಿಧ್ಯ ಹಾಗೂ ನಾಡಿನ ಹರ, ಗುರು, ಚರಮೂರ್ತಿಗಳು ಸಮ್ಮುಖ ವಹಿಸಲಿದ್ದಾರೆ ಎಂದು ಸ್ಥಳೀಯ ಶ್ರೀ ಮೌನಮಲ್ಲಿಕಾರ್ಜುನ ಮಠದ ಸದ್ಬಕ್ತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

Read More »