Breaking News
Home / 2022 / ಜೂನ್ (page 4)

Monthly Archives: ಜೂನ್ 2022

ಕಾಗಿನೆಲೆಯ ಕನಕಗುರುಪೀಠದ ಬ್ರಹ್ಮಲೀನ ಜಗದ್ಗುರು ಶ್ರೀ ಬೀರೇಂದ್ರಕೇಶವ ತಾರಕಾನಂದ ಪುರಿ ಮಹಾಸ್ವಾಮಿಜಿಯವರ 16 ನೇ ವರ್ಷದ ಪುಣ್ಯಾರಾಧನೆ

ಮೂಡಲಗಿ: ಹಾವೇರಿ ಜಿಲ್ಲೆಯ ಶ್ರೀ ಕ್ಷೇತ್ರ ಕಾಗಿನೆಲೆಯ ಕನಕಗುರುಪೀಠದ ಬ್ರಹ್ಮಲೀನ ಜಗದ್ಗುರು ಶ್ರೀ ಬೀರೇಂದ್ರಕೇಶವ ತಾರಕಾನಂದ ಪುರಿ ಮಹಾಸ್ವಾಮಿಜಿಯವರ 16 ನೇ ವರ್ಷದ ಪುಣ್ಯಾರಾಧನೆ ಹಾಗೂ ಜಗದ್ಗುರು ಶ್ರೀಶ್ರೀಶ್ರೀ ನಿರಂಜನಾನಂದಪುರಿ ಮಹಾಸ್ವಾಜಿಗಳ ಗುರುವಂದನಾ ಮಹೋತ್ಸವವು ಜುಲೈ 13 ರಂದು ಕಾಗಿನೆಲೆಯಲ್ಲಿ ಜರುಗಲಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ತಿಳಿಸಿದರು. ಅವರು ರವಿವಾರ ಪಟ್ಟಣದ ಬೀರೇಶ್ವರ ದೇವಸ್ಥಾನದಲ್ಲಿ ಜರುಗಿದ ತಾಲೂಕಾ ಪ್ರದೇಶ ಕುರುಬರ …

Read More »

ಗೋಕಾಕ ನಗರದ ಶಿವಾ ಫೌಂಡೇಶನ ವಿದ್ಯಾರ್ಥಿಗಳಿಗೆ ಬಂಗಾರ ಪದಕ

ಮೂಡಲಗಿ: ಹರಿಯಾಣದಲ್ಲಿ ನಡೆದ ಯೂತ್ ಗೇಮ್ಸ್ ನ್ಯಾಷನಲ್ ಗೋಲ್ಡನ್ ಕಪ್ 2022ರ ಕರಾಟೆ ಸ್ಪರ್ಧೆಯಲ್ಲಿ ಗೋಕಾಕ ನಗರದ ಶಿವಾ ಫೌಂಡೇಶನ ವಿದ್ಯಾರ್ಥಿಗಳು ಬಂಗಾರ ಪದಕ ಹಾಗೂ ಬೆಳ್ಳಿ ಪದಕ ಪಡೆದು ವಿಜೇತರಾದ ಹಿನ್ನಲೆಯಲ್ಲಿ ರಾಜ್ಯಸಭಾ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ಸಂಸದ ಈರಣ್ಣ ಕಡಾಡಿ ಅವರು ಸತ್ಕಾರ ಮಾಡಿ, ಸಿಹಿ ವಿತರಿಸಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಖ್ಯಸ್ಥ ಶಾನೂರ ಹಿರೇಹೊಳಿ, ತರಬೇತುದಾರ ದುರ್ಯೋಧನ …

Read More »

ಆರ್.ಡಿ.ಎಸ್. ಪಿ.ಯು ಕಾಲೇಜು ಶೇಕಡ 69 ರಷ್ಟು ಫಲಿತಾಂಶ

ಆರ್.ಡಿ.ಎಸ್. ಪಿ.ಯು ಕಾಲೇಜು ಶೇಕಡ 69 ರಷ್ಟು ಫಲಿತಾಂಶ ಮೂಡಲಗಿ : ಇಲ್ಲಿಯ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯವು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಶೇ69ರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ ಎಂದು ಕಾಲೇಜು ಪ್ರಾಚಾರ್ಯರು ತಿಳಿಸಿರುತ್ತಾರೆ ವಾಣಿಜ್ಯ ವಿಭಾಗದಲ್ಲಿ ವಾಣಿ ಕುಲಕರ್ಣಿ 578 ( ಶೇ 97) ಅಂಕ ಪಡೆದು ಕಾಲೇಜಿಗೆ ಪ್ರಥಮ, ಪವನ ಜಕ್ಕನ್ನವರ 539 (ಶೇ 90) ಅಂಕ ಪಡೆದು ದ್ವೀತಿಯ ಸ್ಥಾನ ಪಡೆದುಕೊಂಡಿದ್ದು, ಕಲಾ ವಿಭಾಗದಲ್ಲಿ ಸೌಜನ್ಯ …

Read More »

*ಮೂಡಲಗಿ ತಾಲೂಕು ಭೂಮಿ ಶಾಖೆಯನ್ನು ಉದ್ಘಾಟಿಸಿದ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ* *ರಾಜ್ಯ ಸಭೆ ಸದಸ್ಯ ಈರಣ್ಣ ಕಡಾಡಿ, ಜಿಲ್ಲಾಧಿಕಾರಿ ನೀತೇಶ ಪಾಟೀಲ್, ಎಸಿ ಬಗಲಿ ಭಾಗಿ*

ಮೂಡಲಗಿ: ಮೂಡಲಗಿ ತಾಲೂಕಿನ ರೈತರ ಮತ್ತು ಜನಸಾಮಾನ್ಯರ ಅನುಕೂಲಕ್ಕಾಗಿ ಮೂಡಲಗಿಯಲ್ಲಿ ಹೊಸದಾಗಿ ಭೂಮಿ ಶಾಖೆಯನ್ನು ಆರಂಭಿಸಲಾಗಿದೆ ಎಂದು ಕೆಎಮ್‌ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಶನಿವಾರದಂದು ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ನೂತನವಾಗಿ ಮೂಡಲಗಿ ತಾಲೂಕಿನ ಭೂಮಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೋಕಾಕ ತಾಲೂಕಿನಲ್ಲಿದ್ದ ಭೂಮಿ ಶಾಖೆಯನ್ನು ಬೇರ್ಪಡಿಸಿ ಮೂಡಲಗಿ ಹೊಸ ತಾಲೂಕಿಗೆ ಭೂಮಿ ಶಾಖೆಯನ್ನು ತೆರೆದಿದ್ದು, ಮೂಡಲಗಿ ತಾಲೂಕಿನ ಎಲ್ಲ ರೈತ ಭಾಂಧವರು ಇದರ …

Read More »

ಬೆಟಗೇರಿ ಪ್ರೌಢ ಶಾಲೆಯಲ್ಲಿ ಹೈಟೆಕ್ ಶೌಚಾಲಯ ಹಾಗೂ ಅಡುಗೆ ಕೋಣೆ ನಿರ್ಮಾಣಕ್ಕೆ ಭೂಮಿ ಪೂಜೆ

ಬೆಟಗೇರಿ:ಗ್ರಾಮದ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಸ್ಥಳೀಯ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸುಮಾರು 9 ಲಕ್ಷ ರೂ.ಗಳÀಲ್ಲಿ ಹೈಟೆಕ್ ಶೌಚಾಲಯ ಹಾಗೂ ಸುಮಾರು 9 ಲಕ್ಷ ರೂ.ಗಳ ಅನುದಾನದಡಿಯಲ್ಲಿ ಅಡುಗೆ ಕೋಣೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ಜೂ.17ರಂದು ನಡೆಯಿತು. ಸ್ಥಳೀಯ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಗುದ್ದಲಿ ಪೂಜೆ ನೆರವೇರಿಸಿದರು. ಶಾಲೆಯ ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ಶ್ರೀಶೈಲ ಗಾಣಗಿ …

Read More »

ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ರಾಜಕೀಯವನ್ನು ಬದಲಾವಣೆ ಮಾಡುವ ಶಕ್ತಿ ಆಮ್ ಆದ್ಮಿ ಪಕ್ಷಕ್ಕಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಬಾಸ್ಕರಾವ

ಮೂಡಲಗಿ; ಇಡೀ ರಾಜಕೀಯ ಬದಲಾವಣೆಗಾಗಿ ಆಮ್ ಆದ್ಮಿ ಪಕ್ಷ ದೆಹಲಿಯಿಂದ ಕರ್ನಾಟಕ್ಕೆ ಬಂದಿದ್ದು, ಅದು ಬೆಂಗಳೂರಿಗೆ ಮಾತ್ರ ಸಿಮೀತವಾಗದೇ ಇಡೀ ರಾಜ್ಯದ ಪ್ರತಿಯೊಂದು ಹಳ್ಳಿಗಳಲ್ಲಿ ಪಕ್ಷ ಸಂಘಟನೆಯಾಗುವ ಮೂಲಕ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ರಾಜಕೀಯವನ್ನು ಬದಲಾವಣೆ ಮಾಡುವ ಶಕ್ತಿ ಆಮ್ ಆದ್ಮಿ ಪಕ್ಷಕ್ಕಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಬಾಸ್ಕರಾವ ಹೇಳಿದರು. ಮೂಡಲಗಿ ಸಮೀಪದ ಸಮರ್ಥ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಸಂಜೆ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ …

Read More »

*ನೆರೆ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಿಕೊಡಿ- ಶಾಸಕ ಬಾಲಚಂದ್ರ ಜಾರಕಿಹೊಳಿ* *ಕೌಜಲಗಿಯಲ್ಲಿಂದು ಜರುಗಿದ ಗೋಕಾಕ್ ಹಾಗೂ ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ*

ಗೋಕಾಕ್- 2019ಮತ್ತು 2021ನೇ ಸಾಲಿನ ನೆರೆ ಸಂತ್ರಸ್ತರ ಕೆಲವು ಮನೆಗಳು ಬ್ಲಾಕ್ ಆಗುತ್ತಿದ್ದು, ಅಂತಹ ಮನೆಗಳ ಬ್ಲಾಕ್ ತೆರವುಗೊಳಿಸಿ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಶುಕ್ರವಾರ ಸಂಜೆ ತಾಲೂಕಿನ ಕೌಜಲಗಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜರುಗಿದ ಮೂಡಲಗಿ ಮತ್ತು ಗೋಕಾಕ್ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರ ಅಹವಾಲುಗಳಿಗೆ ಸ್ಪಂದಿಸಿ …

Read More »

ಬೆಟಗೇರಿ ಗ್ರಾಮದಲ್ಲಿ ಕಾರ ಹುಣ್ಣಿಮೆ

ಬೆಟಗೇರಿ: ಗ್ರಾಮದಲ್ಲಿ ಕಳೆದ ಶತ, ಶತಮಾನಗಳಿಂದಲೂ ಸಂಪ್ರದಾಯದಂತೆ ಆಚರಿಸಿಕೊಂಡು ಬರಲಾಗುತ್ತಿರುವ ಕಾರ ಹುಣ್ಣಿಮೆ ಪ್ರಯುಕ್ತ ಜೂನ.14ರಂದು ಜೋಡೆತ್ತುಗಳನ್ನು ವಿವಿಧ ಬಗೆಯ ಬಣ್ಣ ಹಚ್ಚಿ ಕೊಡುಗಳಿಗೆ ರಿಬ್ಬನ್, ಹಣೆಪಟ್ಟಿ, ಗೆಜ್ಜೆ ಕಟ್ಟಿ ಶೃಂಗರಿಸಿ ಜೋಡೆತ್ತುಗಳನ್ನು ಓಡಿಸಿದ ಬಳಿಕ ಗ್ರಾಮದ ಅಗಸಿಯ ಹೆಬ್ಬಾಗಿಲಿಗೆ ಕಟ್ಟಿರುವ ಕರಿ ಹರೆದು ಸಂಭ್ರಮದಿಂದ ಸ್ಥಳೀಯರು ಕಾರಹುಣ್ಣಿಮೆಯನ್ನು ಆಚರಿಸಿದರು. ಗ್ರಾಮದ ಎಲ್ಲ ರೈತರ ಮನೆಗಳಲ್ಲಿ ಮಣ್ಣಿನಿಂದ ಮಾಡಿದ ಎತ್ತುಗಳನ್ನು ಪೂಜಿಸಿ, ಪುರದೇವರ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರ, ನೈವೇದ್ಯ ಸಮರ್ಪನೆ …

Read More »

ಪರಿಸರವಿಲ್ಲದೆ ಮಾನವನ ಬದುಕು ಅಸಾಧ್ಯ – ಗಜಾನನ ಮನ್ನಿಕೇರಿ

ಗೋಕಾಕ: ಪರಿಸರವಿಲ್ಲದೆ ಮಾನವನ ಬದುಕು ಅಸಾಧ್ಯ, ಅರಣ್ಯವನ್ನು ಉಳಿಸಿ, ಬೆಳೆಸಿ ಪರಿಸರ ರಕ್ಷಣೆ ಮಾಡುವಂತೆ ಧಾರವಾಡದ ಅಪರ ಆಯುಕ್ತರ ಕಾರ್ಯಾಲಯದ ಸಹ ನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು. ಅವರು ಶನಿವಾರದಂದು ಅರಣ್ಯ ಇಲಾಖೆಯ ನರ್ಸರಿಯಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಶಿಕ್ಷಣ ಇಲಾಖೆಯವರು ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಬೀಜ ಉಂಡೆ ತಯಾರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ನಿಸರ್ಗ ಎಲ್ಲಾ ಜೀವಿಗಳಿಗೆ ರಕ್ಷಣೆ ನೀಡುತ್ತಿದೆ. ಜೀವಿಗಳು ಬದುಕಲು ಆಮ್ಲಜನಕ ನೀರು ಆಹಾರ …

Read More »

ನಿರಾಣಿ ಅವರಿಗೆ ಸಭಾಪತಿ ಸ್ಥಾನಕ್ಕೆ ಅವಕಾಶವಿದೆ

  ಮೂಡಲಗಿ: ವಾಯುವ್ಯ ಪದವಿಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹನಮಂತ ನಿರಾಣಿ ಅವರಿಗೆ ರಾಜ್ಯ ವಿಧಾನ್ ಪರಿಷತ್ ಸಭಾಪತಿಯಾಗುವ ಅವಕಾಶವಿದೆ. ಸಭಾಪತಿ ಸ್ಥಾನಕ್ಕೆ ಭೂಷಣವಾಗುವ ಸರಳ ವ್ಯಕ್ತತ್ವವನ್ನು ಅವರು ಹೊಂದಿದ್ದಾರೆ. ಅವರೊಬ್ಬ ಅಜಾತಶತ್ರು ಅವರು ಕ್ರಿಯಾಶೀಲ ಸಜ್ಜನ ರಾಜಕಾರಣಿ ಎಂದು ಹೆಸರು ಮಾಡಿದ್ದಾರೆ. ಅವರಿಗೆ ಇದೇ 13 ರಂದು ನಡೆಯುವ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯ ಮತ ನೀಡಬೇಕು ಎಂದು ಕರ್ನಾಟಕ ಸರಕಾರದ ಪ್ರತಿಷ್ಠಿತ ಗಡಿನಾಡ ಕನ್ನಡಿಗ ಡಾ. ಕೆ.ಜಿ ಕುಂದಣಗಾರ …

Read More »