Breaking News

Daily Archives: ಅಕ್ಟೋಬರ್ 6, 2022

ಅರಭಾವಿ ಮತಕ್ಷೇತ್ರದ ಕಾಂಗ್ರೇಸ್ ಮುಖಂಡರು ಎಲ್ಲರೂ ಬೆಂಬಲ ನೀಡುತ್ತಿವೆ- ಲಕ್ಕನ್ ಸವಸುದ್ದಿ

ಮೂಡಲಗಿ : ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಅ.7ರಂದು ಕಲ್ಲೋಳಿ ಪಟ್ಟಣದಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಬೃಹತ ಸಮಾಮೇಶಕ್ಕೆ ಹಾಗೂ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಕಾಂಗ್ರೇಸ್ ಮುಖಂಡ ಲಕ್ಕನ್ ಸವಸುದ್ದಿ ಹೇಳಿದರು. ಗುರುವಾರದಂದ ಪಟ್ಟಣದ ಪತ್ರಿಕಾ ಕಾರ್ಯಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ 2ಎ ಮೀಸಲಾತಿ ನೀಡಬೇಕೆನ್ನುವ ಉದ್ದೇಶದಿಂದ ಸಾಕಷ್ಟು ಹೋರಾಟಗಳನ್ನು ಮಾಡುತ್ತಿದ್ದು ಅವರ ಹೋರಾಟಕ್ಕೆ ಅರಭಾವಿ …

Read More »

ಸಾವಳಗಿ ಶ್ರೀಪೀಠದಲ್ಲಿ ವಿಜಯದಶಮಿಯ ಸೀಮೋಲ್ಲಂಘನ ಸಂಭ್ರಮ

  ಸಾವಳಗಿ ಶ್ರೀಪೀಠದಲ್ಲಿ ವಿಜಯದಶಮಿಯ ಸೀಮೋಲ್ಲಂಘನ ಸಂಭ್ರಮ ಗೋಕಾಕ: ಬುಧವಾರ ಸಂಜೆ ಕುಂಭಹೊತ್ತ ಮತ್ತು ಆರತಿಗಳನ್ನು ಹಿಡಿದ ಸುಮಂಗಲಿಯರ ಸಾಲು, ವಿವಿಧ ವಾದ್ಯ ವೃಂದಗಳ ನಿನಾದ, ಭಕ್ತಿಯ ಜಯಘೋಷಗಳೊಂದಿಗೆ ಹಿಂದೂ-ಮುಸ್ಲಿಂ ಭಾವ್ಯೆಕ್ಯತೆಗೆ ಹೆಸರಾಗಿರುವ ಸಾವಳಗಿಯ ಶಿವಲಿಂಗೇಶ್ವರ ಮಠದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಪಲ್ಲಕ್ಕಿ ಮೆರವಣಿಗೆಯೊಂದಿಗೆ ದಸರಾ ಉತ್ಸವದ ಸೀಮೋಲ್ಲಂಘನ ಕಾರ್ಯಕ್ರಮವು ಸಹಸ್ರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಸಂಜೆ ಶ್ರೀಪೀಠದಿಂದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಹಿಂದೂ, …

Read More »

ಅ.7 ರಂದು ವಿದ್ಯುತ್ ವ್ಯತ್ಯಯ

 ವಿದ್ಯುತ್ ವ್ಯತ್ಯಯ ಮೂಡಲಗಿ: 110 ಕೆವಿ ಮೂಡಲಗಿಯಿಂದ ಹೋಗುವ 11ಕೆವಿ ಎಫ್1 ಮೂಡಲಗಿ ಪಟ್ಟಣ ಹಾಗೂ ಎಫ್3 ಗುರ್ಲಾಪೂರ ಐಪಿ ಫೀಡರಗಳ 11ಕೆವಿ ಕಂಬಗಳ ದುರಸ್ಥಿ ಹಾಗೂ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯವನ್ನು ಕೈಗೊಂಡಿರುವದರಿಂದ ಗುರ್ಲಾಪೂರ ಹಾಗೂ ಮೂಡಲಗಿಯಲ್ಲಿ ಅ.7 ರಂದು ಬೆಳಿಗ್ಗೆ 10 ರಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಮ್. ಎಸ್. ನಾಗನ್ನವರ ಹಾಗೂ ಶಾಖಾಧಿಕಾರಿ …

Read More »

ಬನ್ನಿ ವೃಕ್ಷಕ್ಕೆ ಸಿಮೋಲಂಘನೆ ನೆರವೇರಿಸಿದ ಶ್ರೀದತ್ತಾತ್ರೇಯಬೋಧ ಶ್ರೀಗಳು

ಬನ್ನಿ ವೃಕ್ಷಕ್ಕೆ ಸಿಮೋಲಂಘನೆ ನೆರವೇರಿಸಿದ ಶ್ರೀದತ್ತಾತ್ರೇಯಬೋಧ ಶ್ರೀಗಳು ಮೂಡಲಗಿ: ನವರಾತ್ರಿ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಪಟ್ಟಣದ ಶ್ರೀ ಶಿವಬೋಧರಂಗನ ಮಠದಲ್ಲಿ ಶ್ರೀ ಮಠದ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿಗಳು ಬನ್ನಿ ವೃಕ್ಷಕ್ಕೆ ಸಿಮೋಲಂಘನೆ ನೆರವೇರಿಸಿ ಚಾಲನೆ ನೀಡಿದರು. ಶ್ರೀ ಶಿವಬೋಧರಂಗ ಮಠದ ಆವರಣಕ್ಕೆ ಪಟ್ಟಣದ ಶ್ರೀ ರೇಣುಕಾಯಲ್ಲಮ್ಮದೇವಿ, ಶ್ರೀ ಕರೆಮ್ಮಾದೇವಿ, ಶ್ರೀ ದುರ್ಗಮ್ಮಾದೇವಿ, ಶ್ರೀ ಬೀರಪ್ಪ ದೇವರ ವಿವಿಧ ಪಲ್ಲಕ್ಕಿಗಳು ಆಗಮಿಸಿದ ಕೂಡಲೇ ಬನ್ನಿ ವೃಕ್ಷಕ್ಕೆ ಶ್ರೀ ದತ್ತಾತ್ತೇಯಬೋಧ ಸ್ವಾಮೀಜಿ ಮತ್ತು …

Read More »

ಆರ್.ಡಿ.ಎಸ್. ಪಿಯು ಕಾಲೇಜಿನ ವಿದ್ಯಾರ್ಥಿಗಳು ಬಾಲ್ ಬ್ಯಾಡ್ಮಿಂಟನ್ ಸ್ಪರ್ದೇಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ.

ಆರ್.ಡಿ.ಎಸ್. ಪಿಯು ಕಾಲೇಜಿನ ವಿದ್ಯಾರ್ಥಿಗಳು ಬಾಲ್ ಬ್ಯಾಡ್ಮಿಂಟನ್ ಸ್ಪರ್ದೇಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ. ಮೂಡಲಗಿ : ಇಲ್ಲಿನ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಮಹಮ್ಮದ್ ಮುಶರಫ್ ಖಾಜಿ, ಪುನೀತ ಸುತ್ತಾರ, ಲಕ್ಮಣ ಶ್ರೀಶೈಲ್ ಕಳಸನ್ನವರ, ಮುನ್ನಾ ಶೇಖ, ರೋಹಿತ್ ಸಾನವಾಲೆ, ಮುಸ್ತಕೀಮ ಕಲಾರಕೊಪ್ಪ ಈ ವಿದ್ಯಾರ್ಥಿಗಳು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಪದವಿ ಪೂರ್ವ ಕಾಲೇಜು ಕ್ರೀಡಾ ಕೂಟದಲ್ಲಿ ಬಾಲ್ ಬ್ಯಾಡ್ಮಿಂಟನ್ ಸ್ಪರ್ದೇಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು …

Read More »

ಸಂಚಾರಿ ಪಶು ಚಿಕಿತ್ಸಾಲಯ ವಾಹನಕ್ಕೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಸಂಚಾರಿ ಪಶು ಚಿಕಿತ್ಸಾಲಯ ವಾಹನಕ್ಕೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಬಿಜೆಪಿ ಸರ್ಕಾರದಿಂದ ಸಂಚಾರ ಪಶು ಚಿಕಿತ್ಸಾಲಯ ವಾಹನ ಸೌಲಭ್ಯ ಗೋಕಾಕ: ರೈತರ ಜಾನುವಾರುಗಳು ಅನಾರೋಗ್ಯಕ್ಕೀಡಾದಾಗ ರೈತರು ಟೋಲ್ ಫ್ರೀ 1962 ಕ್ಕೆ ಕರೆ ಮಾಡಿದಲ್ಲಿ ಸಂಚಾರಿ ಪಶು ಚಿಕಿತ್ಸಾಲಯ ವಾಹನ ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ನೀಡಲಿದೆ ಎಂದು ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. …

Read More »

ರಾಜ್ಯೋತ್ಸ ಕವಿಗೋಷ್ಠಿಗೆ ಕವನ ಆಹ್ವಾನ

ರಾಜ್ಯೋತ್ಸ ಕವಿಗೋಷ್ಠಿಗೆ ಕವನ ಆಹ್ವಾನ ಮೂಡಲಗಿ: ಮೂಡಲಗಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್‍ದಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ನವಂಬರ ತಿಂಗಳದಲ್ಲಿ ಉದಯೋನ್ಮುಖ ಕವಿಗಳ ಕವಿಗೋಷ್ಠಿಯನ್ನು ಏರ್ಪಡಿಸುವರು. ಕನ್ನಡ ನಾಡು, ನುಡಿ, ಇತಿಹಾಸ, ಸಂಸ್ಕøತಿ, ಪರಂಪರೆಯನ್ನು ಬಿಂಬಿಸುವಂತ ವಿಷಯ ಕುರಿತಾದ ಸ್ವರಚಿತ ಕವನಗಳನ್ನು ಕವಿಗೋಷ್ಠಿಯ ಮುಂಚಿತವಾಗಿ ಆಹ್ವಾನಿಸುವರು. ಕವನವನ್ನು ಕಾಗದದ ಒಂದೆ ಮಗ್ಗುಲಲ್ಲಿ ಬರೆದಿರುವ ಇಲ್ಲವೆ ಡಿಟಿಪಿ ಮಾಡಿಸಿ ವಿಳಾಸ, ಪೋಟೋ ಮೊಬೈಲ್ ಸಂಖ್ಯೆಯೊಂದಿಗೆ ಕಸಾಪ ಗೌರವ ಕಾರ್ಯದರ್ಶಿ ಎ.ಎಚ್. ಒಂಟಗೋಡಿ, …

Read More »