ಧರ್ಮಟ್ಟಿಯಲ್ಲಿ ಕಾಣಿಸಿಕೊಂಡ ಚಿರತೆ: ಎಚ್ಚರಿಕೆಯಿಂದಿರಲು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ. ಮೂಡಲಗಿ: ಗುರುವಾರದಂದು ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿದ್ದಾರೆ. ಧರ್ಮಟ್ಟಿ ಗ್ರಾಮದ ಅನಿಲ ಮಂದ್ರೋಳ್ಳಿ ಅವರ ತೋಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಚಿಕ್ಕೋಡಿ ತಾಲೂಕಿನಿಂದ ಈ ಚಿರತೆ ಬಂದಿರಬಹುದೆಂದು ಅರಣ್ಯ ಇಲಾಖೆಯಿಂದ ತಿಳಿದು ಬಂದಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಜಾಗೃತೆಯಿಂದ ಇರಬೇಕು. …
Read More »Yearly Archives: 2022
ಹರ ಘರ ತಿರಂಗಾ ಅಭಿಯಾನ: ಮನೆಯ ಮೇಲೆ ಧ್ವಜ ಕಟ್ಟುವಾಗ ವಿದ್ಯುತ್ ವಸ್ತ್ತುಗಳಿಂದ ಎಚ್ಚರಿಕೆ
ಕುಲಗೋಡ: 75 ನೆಯ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ “ಹರ್ ಘರ್ ತಿರಂಗ” ಅಭಿಯಾನ ಹಮ್ಮಿಕೊಂಡಿರುವ ಸಂತಸದ ವಿಷಯ. ಅಗಷ್ಟ 13 ಮುಂಜಾನೆ 8 ಗಂಟೆಯ ಒಳಗೆ ಮನೆಯ ಮೇಲೆ ಹಾರಿಸುವ ರಾಷ್ಟ್ರ ಧ್ವಜ ಕಟ್ಟುವ ಪ್ರತಿಯೊಬ್ಬರೂ ಮನೆಯ ಮೇಲೆ,ಮುಂದೆ ಹಾದು ಹೊಗಿರುವ ವಿದ್ಯುತ್ ತಂತಿ ಹಾಗೂ ನಿಮ್ಮ ಮನೆಗೆ ಬಳಸುವ ಸರ್ವಿಸ್ ತಂತಿಗಳಿಂದ ಜಾಗೃತಿ …
Read More »‘ಜನರ ವಿಶ್ವಾಸ ಮತ್ತು ಉತ್ತಮ ಸೇವೆಯಿಂದ ಸಹಕಾರ ಸಂಸ್ಥೆಗಳು ಪ್ರಗತಿಯಾಗುತ್ತವೆ’
‘ಸಹಕಾರ ಸಂಸ್ಥೆಗಳ ಪ್ರಗತಿಗೆ ವಿಶ್ವಾಸ ಮುಖ್ಯ’ ಮೂಡಲಗಿ: ‘ಜನರ ವಿಶ್ವಾಸ ಮತ್ತು ಉತ್ತಮ ಸೇವೆಯಿಂದ ಸಹಕಾರ ಸಂಸ್ಥೆಗಳು ಪ್ರಗತಿಯಾಗುತ್ತವೆ’ ಎಂದು ಅರಭಾವಿಯ ದುರದುಂಡಿಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಬುಧವಾರ ಇಲ್ಲಿಯ ಮೂಡಲಗಿ ಕೋ.ಆಪ್‍ರೇಟಿವ್ ಬ್ಯಾಂಕ್‍ದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಮೂಡಲಗಿ ಕೋ.ಆಪ್‍ರೇಟಿವ್ ಬ್ಯಾಂಕು ಸಹಕಾರಿ ರಂಗದಲ್ಲಿ ಉತ್ತಮವಾಗಿ ಬೆಳದಿರುವುದು ಶ್ಲಾಘನೀಯವಾಗಿದೆ ಎಂದರು. ಮೂಡಲಗಿಯ ದತ್ತಾತ್ರೇಯಬೋಧ ಸ್ವಾಮೀಜ, ಸುಣಧೋಳಿ ಶಿವಾನಂದ ಸ್ವಾಮೀಜಿ, ಭಾಗೋಜಿಕೊಪ್ಪದ ಡಾ. …
Read More »ಸಂಗೊಳ್ಳಿ ರಾಯಣ್ಣನರ ಕಂಚಿನ ಮೂರ್ತಿಯ ರಥಕ್ಕೆ ಭವ್ಯ ಸ್ವಾಗತ
ಮೂಡಲಗಿ: ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನರ ಕಂಚಿನ ಮೂರ್ತಿಯ ರಥಕ್ಕೆ ಮೂಡಲಗಿ ಪಟ್ಟಣದ ಶ್ರೀ ಕಲ್ಮೇಶ್ವರ ವೃತ್ತದಲ್ಲಿ ಬುಧವಾರದಂದು ಭವ್ಯ ಸ್ವಾಗತ ಕೋರಲಾಯಿತು. ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯ ರಥಕ್ಕೆ ಕಹಾಮಾ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಮಲ್ಲಿಕಾರ್ಜುನ ಯಕ್ಷಂಬಿ ಹಾಗೂ ಮೂಡಲಗಿ ಪುರಸಭೆಯ ಅಧ್ಯಕ್ಷ ಹನುಮಂತ ಗುಡ್ಲಮನಿ, ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಡಾ.ಎಸ್.ಎಸ್.ಪಾಟೀಲ ಮಾಲಾರ್ಪಣೆ ಮಾಡಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ …
Read More »ಮೊಹರಂ ಹಬ್ಬದ ಪ್ರಯುಕ್ತ ಕರ್ಬಲ್ ಮತ್ತು ರಿವಾಯತ್ ಪದಗಳು
ಮೂಡಲಗಿ: ತಾಲೂಕಿನ ಪಿ.ಜಿ.ಹುಣಶ್ಯಾಳ ಗ್ರಾಮದಲ್ಲಿ ಮಂಗಳವಾರ ಸಾಯಂಕಾಲ ಮೊಹರಮ್ ಹಬ್ಬದ ಪ್ರಯುಕ್ತ ವಿವಿಧ ಜಾನಪದ ತಂಡಗಳಿಂದ ಕರ್ಬಲ್ ಮತ್ತು ರಿವಾಯತ್ ಪದಗಳ ಹಾಗೂ ಭಜಂತ್ರಿ ಕಲಾವಿದರಿಂದ ಶಹನಾಯಿ ವಾದನ ಕಾರ್ಯಕ್ರಮ ಜರುಗಿತು. ಪ್ರತಿ ವರ್ಷ ಈ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಬಾಂದವರು ಭಾವೈಕ್ಯತೆಯಿಂದ ಮೊಹರಂ ಹಬ್ಬ ಆಚರಿಸುವ ವಾಡಿಕೆ. ಮೊಹರಂ ಕತ್ತಲ ರಾತ್ರಿ ಅಂಗವಾಗಿ ನಡೆದ ಕರ್ಯಕ್ರಮದಲ್ಲಿ ಲೇಜಿಮ್,ಹಲಗಿ ಕುಣಿತದೊಂದಿಗೆ ಹಾಡುಗಳ ಸ್ಪರ್ದೆಯಲ್ಲಿ ಮೂಡಲಗಿಯ ಎರಡು ಹಾಗೂ ಹುಣಶ್ಯಾಳ …
Read More »ಮೂಡಲಗಿಯ ಸಹಕಾರಿಯ ಸಿರಿ ‘ದಿ. ಮೂಡಲಗಿ ಕೋ.ಆಪರೇಟಿವ ಬ್ಯಾಂಕ್
ಮೂಡಲಗಿಯ ಸಹಕಾರಿಯ ಸಿರಿ ‘ದಿ. ಮೂಡಲಗಿ ಕೋ.ಆಪರೇಟಿವ ಬ್ಯಾಂಕ್’ ಮೂಡಲಗಿ: ದಿ. ಮೂಡಲಗಿ ಕೋ. ಆಪ್‍ರೇಟಿವ ಬ್ಯಾಂಕ್ ಲಿ. ಇದರ ನೂತನ ಕಟ್ಟಡದ ವಾಸ್ತುಶಾಂತಿ ಹಾಗೂ ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಸರಸ್ವತಿ ಪೂಜೆಯು ಆ. 10 ಬುಧವಾರ ಬೆಳಿಗ್ಗೆ 10ಕ್ಕೆ ಜರುಗಲಿದೆ. ಪೂಜಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಮೂಡಲಗಿ ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ, ಅರಭಾವಿಯ ಶ್ರೀ ದುರದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ಸಿದ್ದಲಿಂಗ ಸ್ವಾಮೀಜಿ, ಸುಣಧೋಳಿಯ …
Read More »ಶಂಕ್ರೆಪ್ಪ ಗಂಗಪ್ಪಾ ತಿಪ್ಪಿಮನಿ ನಿಧನ
ಕುಲಗೋಡ:ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ನಿವಾಸಿ ಶಂಕ್ರೆಪ್ಪ ಗಂಗಪ್ಪಾ ತಿಪ್ಪಿಮನಿ (90) ಇವರು ಸೋಮವಾರ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರು. ಮೂವರು ಪುತ್ರಿಯರು ಹಾಗೂ ಮೊಮ್ಮಕಳು, ಮರಿಮೊಮ್ಮಕಳು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
Read More »ಶತಾಯುಷಿ ಭೀಮವ್ವ ರಂಗಪ್ಪ. ಬಿ.ಪಾಟೀಲ್ ನಿಧನ
ಮೂಡಲಗಿ : ತಾಲ್ಲೂಕಿನ ತಿಗಡಿ ಗ್ರಾಮದ ಉಪ್ಪಾರ ಸಮಾಜದ ಹಿರಿಯ ಜೀವ, ಶತಾಯುಷಿ ಭೀಮವ್ವ ರಂಗಪ್ಪ. ಬಿ.ಪಾಟೀಲ್ (೧೦೧) ಅವರು ಸೋಮವಾರದಂದು ನಿಧನರಾದರು. ಮೃತರಿಗೆ ಗುತ್ತಿಗೆದಾರ ವಾಯ್. ಆರ್. ಬಿ.ಪಾಟೀಲ್ ಸೇರಿ ಐದು ಜನ ಮಕ್ಕಳು, ಮೂವರು ಪುತ್ರಿಯರು, ೭೬ ಜನ ಮೊಮ್ಮಕ್ಕಳು, ಮರಿ ಮಕ್ಕಳು, ಗಿರಿ ಮಕ್ಕಳು ಸೇರಿದಂತೆ ಅಪಾರ ಬಂಧು- ಬಳಗವಿದೆ. ಮೃತರ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಅನೇಕ ಗಣ್ಯರು …
Read More »ಆ.10ರಂದು ಮೂಡಲಗಿ ಕೋ. ಆಪ್ ಬ್ಯಾಂಕ್ ನೂತನ ಕಟ್ಟಡದ ವಾಸ್ತುಶಾಂತಿ
ಮೂಡಲಗಿ: ಇಲ್ಲಿಯ ದಿ. ಮೂಡಲಗಿ ಕೋ.ಆಪರೇಟಿವ ಬ್ಯಾಂಕ್ ಲಿ. ದ ನೂತನ ಕಟ್ಟಡದ ವಾಸ್ತುಶಾಂತಿ ಹಾಗೂ ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಸರಸ್ವತಿ ಪೂಜೆಯು ಆ. 10 ಬುಧವಾರ ಬೆಳಿಗ್ಗೆ 10ಕ್ಕೆ ಜರುಗಲಿದೆ. ಪೂಜಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಮೂಡಲಗಿ ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ, ಅರಭಾವಿಯ ಶ್ರೀ ದುರದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ಸಿದ್ದಲಿಂಗ ಸ್ವಾಮೀಜಿ, ಸುಣಧೋಳಿಯ ಶ್ರೀ ಜಡಿಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ, ಭಾಗೋಜಿಕೊಪ್ಪದ ಡಾ. …
Read More »ಶಿಕ್ಷಕರು ಸಂಸ್ಕøತಿಯ ರಾಯಭಾರಿಗಳಾಗಬೇಕು: ಶಿವಲಿಂಗ ಸಿದ್ನಾಳ
ಮೂಡಲಗಿ: ಶಿಕ್ಷಕರು ಮಕ್ಕಳಿಗೆ ನಾಲ್ಕು ಅಕ್ಷರ ಕಡಿಮೆ ಕಲಿಸಿದರೂ ಪರವಾಗಿಲ್ಲ ಸಂಸ್ಕಾರ ಕಲಿಸುವ ಮೂಲಕ ಸಾಂಸ್ಕೃತಿಕ ರಾಯಭಾರಿಗಳಾಗಬೇಕು ಎಂದು ಮಹಾಲಿಂಗಪೂರ ಕೆ.ಎಲ್.ಇ ಪಿಯು ಕಾಲೇಜ್ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು. ತಾಲೂಕಿನ ಅವರಾದಿ ಗ್ರಾಮದ ಶ್ರೀ ಮಹಾಲಕ್ಷ್ಮೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಸ್ಫರ್ಧೆಗಳು ಹಗು ಸಾಂಕೃತಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬೆಳೆಯುವ ಸಿರಿಯನ್ನು ಮೊಳಕೆಯಲ್ಲೇ ಕಂಡು ಪ್ರತಿಭೆಯನ್ನು ಪೆÇ್ರೀತ್ಸಾಹಿಸಿ ಮಕ್ಕಳ ಭವಿಷ್ಯತ್ತು …
Read More »