ಗಬೆಟಗೇರಿ:ಗ್ರಾಮದಲ್ಲಿ ಜನ-ಜಾನುವಾರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದ ಕಾರಣ ಮಳೆಗಾಗಿ ಕಟ್ಟಾ ವಾರ ಹಿಡಿದ ಹಿನ್ನಲೆಯಲ್ಲಿ ಗ್ರಾಮದ ಪ್ರಮುಖ ಓಣಿಯ ಬೀದಿ, ಮುಖ್ಯ ಸ್ಥಳಗಳು ಮಂಗಳವಾರ ಜು.5ರಂದು ಬೀಕೂ ಎನ್ನುತ್ತಿದ್ದವು. ಜು.5 ರಂದು ಸಂಜೆ 6 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳಗಳೊಂದಿಗೆ ಪುರ ದೇವರ ಪಲ್ಲಕ್ಕಿ ಉತ್ಸವದ ಮೂಲಕ ಗ್ರಾಮದ ನಾಲ್ಕು ದಿಕ್ಕುಗಳ ಮುಖ್ಯ ರಸ್ತೆಗಳಿಗೆ ಊರಿನ ಸೀಮೆಗೆ ಕರಿ ಕಟ್ಟುವದು ನಡೆಯಿತು. ಸ್ಥಳೀಯರಿಂದ ಪುರದೇವರ …
Read More »Yearly Archives: 2022
ಬಾಲಶೇಖರ ಬಂದಿ ಅವರಿಗೆ ಅಂತರ್‍ರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಪ್ರಶಂಸನಾ ಪ್ರಶಸ್ತಿ
ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಬಾಲಶೇಖರ ಬಂದಿ ಅವರಿಗೆ ಅಂತರ್‍ರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಪ್ರಶಂಸನಾ ಪ್ರಶಸ್ತಿಯನ್ನು ಲಯನ್ಸ್ ಜಿಲ್ಲಾ ಗವರ್ನರ್ ಶ್ರೀಕಾಂತ ಮೋರೆ ಅವರು ಇತ್ತಿಚೆಗೆ ಗೋವಾದಲ್ಲಿ ಜರುಗಿದ ವಾರ್ಷಿಕ ಸಮಾವೇಶದಲ್ಲಿ ಪ್ರದಾನ ಮಾಡಿದರು ಬಾಲಶೇಖರ ಬಂದಿಗೆ ಅಂತರ್‍ರಾಷ್ಟ್ರೀಯ ಲಯನ್ಸ್ ಪ್ರಶಸ್ತಿ ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಬಾಲಶೇಖರ ಬಂದಿ ಅವರು ಅಂತರ್‍ರಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರ ಪ್ರಶಂಸನಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. …
Read More »ಯೋಧ ಮಲ್ಲಪ್ಪ ಕಂಕಣವಾಡಿ ಅವರ ಸೇನಾ ನಿವೃತ್ತಿಯ ಅಭಿನಂದನಾ ಸಮಾರಂಭ
ಮೂಡಲಗಿ: ಅಗ್ನಿಪಥ್ ಯೋಜನೆ ನರೇಂದ್ರ ಮೋದಿ ಸರ್ಕಾರದ ಕ್ರಾಂತಿಕಾರಿ ಯೋಜನೆಯಾಗಿದ್ದು, ಈ ಯೋಜನೆಯ ಮೂಲಕ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಿ ದೇಶ ಸೇವೆ ಮಾಡುವ ಮುಖಾಂತರ ವಿಶ್ವದಲ್ಲಿ ಭಾರತದ ಸೇನೆಯನ್ನು ಬಲಿಷ್ಠಗೊಳಿಸಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು. ಜು.2 ಶನಿವಾರ ರಂದು ಕಲ್ಲೋಳಿ ಪಟ್ಟಣದ ಯೋಧ ಮಲ್ಲಪ್ಪ ಕಂಕಣವಾಡಿ ಅವರ ಸೇನಾ ನಿವೃತ್ತಿಯ ಅಭಿನಂದನಾ ಸಮಾರಂಭದಲ್ಲಿ ಅವರನ್ನು ಸತ್ಕರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರುಅಗ್ನಿಪಥ್ …
Read More »ವಿದ್ಯಾರ್ಥಿ ಜೀವನದಲ್ಲಿಯೇ ಪರೀಕ್ಷೆಗಳು ಅತ್ಯಂತ ಮಹತ್ವದ್ದಾಗಿವೆ- ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ
ಮೂಡಲಗಿ : ವಿದ್ಯಾರ್ಥಿ ಜೀವನದಲ್ಲಿಯೇ ಪರೀಕ್ಷೆಗಳು ಅತ್ಯಂತ ಮಹತ್ವದ್ದಾಗಿವೆ. ಅತೀ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಯಶಸ್ವಿ ದಿಕ್ಕಿನಲ್ಲಿ ಸಾಗಿದಾಗ ಮಾತ್ರ ಉಜ್ವಲವಾದ ಭವಿಷ್ಯವನ್ನು ನಿರ್ಮಿಸಿಕೋಳ್ಳಲು ಸಾದ್ಯ ಎಂದು ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಶನಿವಾರ ಪಟ್ಟಣದ ಬಾಗೋಜಿ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ೨೦೨೨-೨೩ ನೇ ಸಾಲಿನ ಎಸ್.ಎಸ್.ಎಲ್.ಸಿ ತರಗತಿ ಶಿಕ್ಷಕರ ಹಾಗೂ ಎನ್.ಎನ್.ಎಮ್.ಎಸ್ ಪ್ರತಿಭಾನ್ವೇಷನೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ …
Read More »ಕೃಷಿ ಉಡಾನ್ 2.0 ಯೋಜನೆಯಡಿ ಬೆಳಗಾವಿ ವಿಮಾನ ನಿಲ್ದಾಣ ಆಯ್ಕೆ
ಮೂಡಲಗಿ: ಕೃಷಿ ಉಡಾನ್ 2.0 ಯೋಜನೆಯಡಿ ಬೆಳಗಾವಿ ವಿಮಾನ ನಿಲ್ದಾಣ ಆಯ್ಕೆಯಾಗಿದ್ದು, ಇದರಿಂದಾಗಿ ಈ ಭಾಗದ ಕೃಷಿ ಉತ್ಪನ್ನಗಳ ಸಾಗಾಟ-ಮಾರಾಟಕ್ಕೆ ಹೆಚ್ಚಿನ ಉತ್ತೇಜನೆ ಸಿಗಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ. ಕೇಂದ್ರ ವಿಮಾನಯಾನ ಸಚಿವಾಲಯವು ಕೃಷಿ ಉಡಾನ್ 2.0 ಯೋಜನೆಯಡಿ ಮೊದಲ ಹಂತದಲ್ಲಿ ಒಟ್ಟು 53 ವಿಮಾನ ನಿಲ್ದಾಣಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಎರಡನೆಯ ಹಂತದಲ್ಲಿ ಹೊಸ 5 ವಿಮಾನ ನಿಲ್ದಾಣಗಳನ್ನು ಆಯ್ಕೆ ಮಾಡಿದೆ. ಅದರಲ್ಲಿ …
Read More »ಸಕ್ಕರೆ ತಂತ್ರಜ್ಞಾನ ಪದವಿ ಅಧ್ಯಯನಕ್ಕೆ ಅವಕಾಶ
ಮೂಡಲಗಿ: ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಸಕ್ಕರೆ ವಿಜ್ಞಾನ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಥಮ ಬಿ.ಎಸ್‍ಸಿ ಸಕ್ಕರೆ ವಿಜ್ಞಾನ ಓದುವುದಕ್ಕೆ ವಿದ್ಯಾರ್ಥಿಗಳಿಗೆ ಪ್ರವೇಶ ಆರಂಭವಾಗಿದೆ. ಪಿ.ಯು.ಸಿ ವಿಜ್ಞಾನ ಪರೀಕ್ಷೆ ಪಾಸಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರವೇಶ ಪಡೆದು ಇದರ ಉಪಯೋಗ ಪಡೆದುಕೊಳ್ಳಬಹುದು ಎಂದು ಸಕ್ಕರೆ ಸಂಸ್ಥೆಯ ನಿರ್ದೇಶಕ ಡಾ. ಬಿ.ಆರ್ ಖಾಂಡಗಾವೆ ಹೇಳಿದರು. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕರ್ನಾಟಕದಲ್ಲಿ 70 ಸಕ್ಕರೆ ಕಾರಖಾನೆಗಳು ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿ 600ಕ್ಕೂ …
Read More »ಪಟ್ಟಣದ ಬಿಇಒ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸ್ವಾಗತ ಹಾಗೂ ಬೀಳ್ಕೋಡುವ ಸಮಾರಂಭದ
ಮೂಡಲಗಿ: ಶಿಕ್ಷಣ ಇಲಾಖೆಯ ಮಾರ್ಗಸೂಚಿಯನುಸಾರ ಶೈಕ್ಷಣಿಕವಾಗಿ ಗುಣಮಟ್ಟದ ಹಾಗೂ ಗುಣಾತ್ಮಕ ಕಲಿಕೆಯಾಗುವಲ್ಲಿ ಮೇಲುಸ್ತುವಾರಿಗಳ, ಮಾರ್ಗದರ್ಶಕರ ಹಾಗೂ ಕಛೇರಿಯ ಸಿಬ್ಬಂದಿಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು. ಅವರು ಶುಕ್ರವಾರ ಪಟ್ಟಣದ ಬಿಇಒ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸ್ವಾಗತ ಹಾಗೂ ಬೀಳ್ಕೋಡುವ ಸಮಾರಂಭದಲ್ಲಿ ಮಾತನಾಡಿದರು. ಇಲಾಖೆಯಿಂದ ದೊರಕಿರುವ ಈ ಅವಕಾಶಗಳನ್ನು ಉಪಯೋಗಿಸಿಕೊಂಡು ಶಿಕ್ಷಣ ಇಲಾಖೆಗೆ ಅವಶ್ಯಕವಿರುವ ಕಾರ್ಯಚಟುವಟಿಕೆಗಳನ್ನು ಯಶಸ್ವಿಗೋಳಿಸಬೇಕು. …
Read More »2 ಕೋಟಿ ರೂ ವೆಚ್ಚದ ಪ್ರಭಾ ಶುಗರ್ಸ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಅಶೋಕ ಪಾಟೀಲ
ಘಟಪ್ರಭಾ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸಮರ್ಥ ನಾಯಕತ್ವದಲ್ಲಿ ಅರಭಾವಿ ಮತಕ್ಷೇತ್ರ ಸರ್ವಾಂಗೀಣ ಪ್ರಗತಿಯತ್ತ ಮುನ್ನಡೆಯುತ್ತಿದ್ದು, ಅದರಂತೆ ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಸಹಕಾರದೊಂದಿಗೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಶೋಕ ಪಾಟೀಲ ಹೇಳಿದರು. ಇಲ್ಲಿಗೆ ಸಮೀಪದ ಅರಭಾವಿ-ಚಳ್ಳಿಕೇರಿ ರಾಹೆ-೪೫ ಯಿಂದ ಪ್ರಭಾಶುಗರವರೆಗಿನ ಲೋಕೋಪಯೋಗಿ ಇಲಾಖೆಯ ಅನುದಾನದಡಿ 2 ಕೋಟಿ ರೂ. ವೆಚ್ಚದ ರಸ್ತೆ ಸುಧಾರಣಾ …
Read More »ಮಗು ಕೇಂದ್ರಿತವಾದ ಕಲಿಕಾ ವಾತಾವರಣ ನಿರ್ಮಾಣವಾಗಬೇಕು
ಮೂಡಲಗಿ : ಶಿಕ್ಷಕರ ಹೊಂದಾಣಿಕೆ, ಶಾಲಾ ಮೌಲ್ಯಮಾಪನ, ವಿದ್ಯಾ ಪ್ರವೇಶ, ಶೈಕ್ಷಣಿಕ ಕಾರ್ಯಚಟುವಟಿಕೆಗಳ ಅನುಷ್ಠಾನ ಹಾಗೂ ಸರಕಾರಿ ಶಾಲೆಗಳ ಸಬಲೀಕರಣಗೊಳಿಸುವಲ್ಲಿ ಮಾರ್ಗದರ್ಶಕರ ಹಾಗೂ ಮೇಲಾಧಿಕಾರಿಗಳ ಪಾತ್ರ ಅಗತ್ಯವಾಗಿದೆ ಎಂದು ಚಿಕ್ಕೋಡಿ ಉಪನಿರ್ದೇಶಕರ ಕಛೇರಿಯ ಶಿಕ್ಷಣಾಧಿಕಾರಿ .ಳಿದರು. ಅವರು ಬುಧವಾರ ಪಟ್ಟಣದ ಬಿಇಒ ಕಛೇರಿಯಲ್ಲಿ ಜರುಗಿದ ಸಿ.ಆರ್.ಪಿಗಳ ಹಾಗೂ ಬಿ.ಆರ್.ಸಿ, ಸರಕಾರಿ ಪ್ರಾಥಮಿಕ ಅತಿಥಿ ಶಿಕ್ಷಕರ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಕಲಿಕಾ ಚೇತರಿಕೆ ತರಬೇತಿಯಲ್ಲಿ ಬಾಗವಹಿಸಿ ಮಾತನಾಡಿ, ಗುಣಮಟ್ಟದ …
Read More »ಹೊನಕುಪ್ಪಿ-ಲಕ್ಷ್ಮೇಶ್ವರ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಗ್ರಾಮಸ್ಥರು
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಹೊನಕುಪ್ಪಿ ರಸ್ತೆ 2.50 ಕೋಟಿ ರೂ. ಅನುದಾನ ಬಿಡುಗಡೆ ಹೊನಕುಪ್ಪಿ-ಲಕ್ಷ್ಮೇಶ್ವರ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಗ್ರಾಮಸ್ಥರು ಮೂಡಲಗಿ : ತಾಲೂಕಿನ ಹೊನಕುಪ್ಪಿಯಿಂದ ಲಕ್ಷ್ಮೇಶ್ವರವರೆಗಿನ ರಸ್ತೆ ಕಾಮಗಾರಿಗೆ ಮಂಗಳವಾರದಂದು ಗುದ್ದಲಿ ಪೂಜೆ ನಡೆಯಿತು. ಸುಣಧೋಳಿ ಗ್ರಾಪಂ ಅಧ್ಯಕ್ಷೆ ಜಮೇಲಾ ಮೋಮಿನ ಮತ್ತು ಉಪಾಧ್ಯಕ್ಷ ಬಸಪ್ಪ ಹೆಗಡೆ ಅವರು 2.50 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಕೆಎಂಎಫ್ …
Read More »