Breaking News
Home / 2023 / ಫೆಬ್ರವರಿ

Monthly Archives: ಫೆಬ್ರವರಿ 2023

*12 ಕೋಟಿ ರೂಗಳ ವೆಚ್ಚದಲ್ಲಿ ಕೌಜಲಗಿಯಲ್ಲಿ ಅಮೃತ ಸಮುದಾಯ ಆರೋಗ್ಯ ಕೇಂದ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ*

*12 ಕೋಟಿ ರೂಗಳ ವೆಚ್ಚದಲ್ಲಿ ಕೌಜಲಗಿಯಲ್ಲಿ ಅಮೃತ ಸಮುದಾಯ ಆರೋಗ್ಯ ಕೇಂದ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ* ಶೀಘ್ರದಲ್ಲಿಯೇ ಬಹುನಿರೀಕ್ಷಿತ ಕಲ್ಮಡ್ಡಿ ಏತ ನೀರಾವರಿ ಯೋಜನೆ ಲೋಕಾರ್ಪಣೆ-ಬಾಲಚಂದ್ರ ಜಾರಕಿಹೊಳಿ ಗೋಕಾಕ: ಕೌಜಲಗಿ ಮತ್ತು ಸುತ್ತಲಿನ ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಮೃತ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಈ ಹೊಸ ಕಟ್ಟಡ ನಿರ್ಮಾಣಕ್ಕಾಗಿ 12ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅರಭಾವಿ ಶಾಸಕ ಹಾಗೂ …

Read More »

 ‘ಜಾನಪದ ಕಲೆಗಳ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ’

 ‘ಜಾನಪದ ಕಲೆಗಳ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಮೂಡಲಗಿ: ಮುಂದಿನ ಪೀಳಿಗೆಗೆ ಗೊತ್ತಾಗಬೇಕಾಗಿರುವ ಜಾನಪದ ಕಲೆಗಳು ನಶಿಸಿ ಹೋಗುತ್ತಲಿವೆ. ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿಯು ಎಲ್ಲರ ಮೇಲಿದೆ’ ಎಂದು ಕಲ್ಲೋಳಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಹೇಳಿದರು. ತಾಲ್ಲೂಕಿನ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ಬೆಂಗಳೂರಿನ ಕರ್ನಾಟಕ ಜಾನಪದ ಅಕಾಡೆಮಿ ಮತ್ತು ವೀರಭದ್ರೇಶ್ವರ ಜಾನಪದ ಕಲಾ ಪೋಷಕ ಸಂಘ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಗ್ರಾಮೀಣ …

Read More »

ಬೆಟಗೇರಿ ಪತ್ರೇಪ್ಪನ ತೋಟದ ಶಾಲೆಯಲ್ಲಿ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಬೆಟಗೇರಿ ಪತ್ರೇಪ್ಪನ ತೋಟದ ಶಾಲೆಯಲ್ಲಿ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಬೆಟಗೇರಿ:ಅರಭಾಂವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪತ್ರೇಪ್ಪನ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ 1 ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಶಾಲೆಯ ಪ್ರಧಾನಗುರು ಬಿ.ಎ.ಕೋಟಿ ಮಾತನಾಡಿ, ಬೆಳಗಾವಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವತಿಯಿಂದ ಸುಮಾರು …

Read More »

ಹಡಗಿನಾಳದಲ್ಲಿ 15.22 ಕೋಟಿ ರೂಗಳ ವೆಚ್ಚದ 110/11 ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಗುದ್ದಲಿ ಪೂಜೆ

ಹಡಗಿನಾಳದಲ್ಲಿ 15.22 ಕೋಟಿ ರೂಗಳ ವೆಚ್ಚದ 110/11 ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಗುದ್ದಲಿ ಪೂಜೆ ಗೋಕಾಕ: ಹಡಗಿನಾಳ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಗುಣಮಟ್ಟದ ಗೃಹ ಹಾಗೂ ನೀರಾವರಿ ಬಳಕೆಗಾಗಿ ವಿದ್ಯುತ್ತ್ ಬೇಡಿಕೆ ಈಡೇರಿಸಲು ಹಡಗಿನಾಳ ಗ್ರಾಮದಲ್ಲಿ 110/11 ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರವನ್ನು ನಿರ್ಮಿಸಲಾಗುತ್ತಿದ್ದು, ನವೆಂಬರ್ ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಅರಭಾವಿ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸೂಚಿಸಿದರು. ರವಿವಾರದಂದು …

Read More »

ವಿದ್ಯಾರ್ಥಿಗಳಿಗೆ ಅಕ್ಷರದ ಜೊತೆಗೆ ಸಂಸ್ಕಾರವೂ ಮುಖ್ಯ: ಗಿರೆಣ್ಣವರ

ವಿದ್ಯಾರ್ಥಿಗಳಿಗೆ ಅಕ್ಷರದ ಜೊತೆಗೆ ಸಂಸ್ಕಾರವೂ ಮುಖ್ಯ: ಗಿರೆಣ್ಣವರ ಮೂಡಲಗಿ: ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದ ಅಭ್ಯಾಸದ ಜೊತೆಗೆ ಉತ್ತಮ ಸಂಸ್ಕøತಿ, ಸಂಸ್ಕಾರ ಬೆಳೆಸಿಕೊಂಡು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಅಕ್ಷರದೊಂದಿಗೆ ಉತ್ತಮ ಸಂಸ್ಕಾರವೂ ದೊರೆಯಬೇಕೆಂದು ಮುಖ್ಯಾಧ್ಯಾಪಕ ಎ.ವ್ಹಿ. ಗಿರೆಣ್ಣವರ ಹೇಳಿದರು. ಅವರು ತಾಲೂಕಿನ ತುಕ್ಕಾನಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ತಾಯಂದಿರ ಸಭೆ ಹಾಗೂ ತಾಯಂದಿರ ಪಾದ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ದ್ಯಾರ್ಥಿಗಳು ಸಮಯವನ್ನು ವ್ಯರ್ಥಗೊಳಿಸದೆ ಶೃದ್ಧೆಯಿಂದ ಪಾಠ …

Read More »

ಬೆಟಗೇರಿ;ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಬೆಟಗೇರಿ;ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ಬೆಟಗೇರಿ:ಅರಭಾಂವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಂತೆ ಗೋಕಾಕ ತಾಲೂಕಿನ ಬೆಟಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಆವರಣದಲ್ಲಿ ನೂತನ 2 ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮ ಫೆ. 24ರಂದು ನಡೆಯಿತು. ಸ್ಥಳೀಯ ಕೆಬಿಎಸ್ ಶಾಲೆಯ ಪ್ರಧಾನಗುರುಗಳಾದ ವೈ.ಸಿ.ಶೀಗಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಳಗಾವಿ ಗಣಿ ಮತ್ತು ಭೂವಿಜ್ಞಾನ …

Read More »

ಯುಟ್ಯೂಬ್ ಸುದ್ದಿ ವಾಹಿನಿಯ ಮುಖ್ಯಸ್ಥರನ್ನು ಕೂಡಲೇ ಸರಕಾರ ಬಂದಿಸಿ ಸೂಕ್ತ ಕಾನುನು ಕ್ರಮ ಜರುಗಿಸಿ- ಉಪ್ಪಾರ ಸಮಾಜದ ಮುಖಂಡ ಭೀಮಪ್ಪ ಬಿ.ಹಂದಿಗುಂದ

23ಎಮ್‍ಡಿಎಲ್‍ಜಿ1 ಮೂಡಲಗಿ: ಉಪ್ಪಾರ ಸಮಾಜದ ಧರ್ಮ ಗುರುಗಳು ಹಾಗೂ ಗಂಗೆಯನ್ನು ಧರೆಗಿಳಿಸಿದ ಮಹರ್ಷಿ ಭಗೀರಥರಿಗೆ ಅಪಮಾನ ಮಾಡಿ ಇಡಿ ಉಪ್ಪಾರರಿಗೆ ನೋವುಂಟು ಮಾಡಿ ಸಮಾಜ-ಸಮಾಜದಲ್ಲಿ ಸಾಮರಸ್ಯ ಕದಡುವ ಕೆಲಸವನ್ನು ಮಾಡಿರುವ ಘಟಪ್ರಭಾದ ಖಾಸಗಿ ನಂ.1 ಯುಟ್ಯೂಬ್ ಸುದ್ದಿ ವಾಹಿನಿಯ ಮುಖ್ಯಸ್ಥ ಸಯ್ಯದ ಅವರನ್ನು ಕೂಡಲೇ ಸರಕಾರ ಬಂದಿಸಿ ಸೂಕ್ತ ಕಾನುನು ಕ್ರಮ ಜರುಗಿಸಿ ಗಡಿಪಾರು ಮಾಡಬೇಕೆಂದು ಮೂಡಲಗಿ ಉಪ್ಪಾರ ಸಮಾಜದ ಮುಖಂಡ ಭೀಮಪ್ಪ ಬಿ.ಹಂದಿಗುಂದ ಅವರು ಆಗ್ರಹಿಸಿದರು. ಗುರುವಾರದಂದು ಪಟ್ಟಣದ …

Read More »

ವಿದ್ಯಾರ್ಥಿಗಳಲ್ಲಿ ಓದು, ಆತ್ಮವಿಶ್ವಾಸವು ಯಶಸ್ಸು ತರುತ್ತದೆ

 ವಿದ್ಯಾರ್ಥಿಗಳಲ್ಲಿ ಓದು, ಆತ್ಮವಿಶ್ವಾಸವು ಯಶಸ್ಸು ತರುತ್ತದೆ ಮೂಡಲಗಿ: ‘ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ ಆತ್ಮವಿಶ್ವದೊಂದಿಗೆ ನಿರಂತರವಾಗಿ ಪ್ರಯತ್ನಪಟ್ಟರೆ ಯಶಸ್ಸು ಬೆನ್ನು ಹಿಂದೆ ಬರುತ್ತದೆ’ ಎಂದು ಮೂಡಲಗಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು. ಇಲ್ಲಿಯ ಎಸ್‍ಎಸ್‍ಆರ್ ಪ್ರೌಢ ಶಾಲೆಯ 2022-23ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕೌಶಲತೆಯಲ್ಲಿ ಪರಿಣಿತರಾಗುವ ಮೂಲಕ ದೇಶದ …

Read More »

ಇಡೀ ಉಪ್ಪಾರ ಸಮಾಜನ ಜನರಿಗೆ ನೋವು ಉಂಟಾಗಿದೆ- ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ಲಾತೂರ

ಮೂಡಲಗಿ: ಘಟಪ್ರಭದ ನಂ1 ಯೂಟ್ಯೂಬ್ ಚಾನಲ್ ಒಂದರಲ್ಲಿ ಭಗೀರಥ ಉಪ್ಪಾರ ಸಮಾಜಕ್ಕೆ ಅವಮಾನ ಮಾಡಿದ್ದು ಇಡೀ ಉಪ್ಪಾರ ಸಮಾಜನ ಜನರಿಗೆ ನೋವು ಉಂಟಾಗಿದೆ. ಕೂಡಲೇ ಆ ಯೂಟ್ಯೂಬ್ ಚಾನಲ್ ಮಾಲೀಕ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ಲಾತೂರ ಆಗ್ರಹಿಸಿದ್ದಾರೆ. ಬುಧುವಾರದಂದು ಪತ್ರಿಕಾ ಹೇಳಿಕೆ ನೀಡಿರುವ ಅವರು, ಘಟಪ್ರಭದ ನಂ1 ಯೂಟ್ಯೂಬ್ ಚಾನಲ್ ಮಾಲೀಕ ಸೈಯದ್ ಅವರು ಅಥಿರತ, ಮಹಾರಥ, ಭಗೀರಥ …

Read More »

ಜನರು ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕು

ಜನರು ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕು ಮೂಡಲಗಿ: ‘ಜನರು ರೋಗಗಳು ಬರದಂತೆ ಮುಂಜಾಗೃತೆ ಕ್ರವiಗಳನ್ನು ಅಳವಡಿಸಿಕೊಂಡು ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಬೇಕು’ ಘಟಪ್ರಭಾದ ಹಿರಿಯ ವೈದ್ಯ ಡಾ. ವಿಲಾಸ ನಾಯ್ಕವಾಡಿ ಹೇಳಿದರು. ತಾಲ್ಲೂಕಿನ ಕಲ್ಲೋಳಿಯ ಗೌರಿಶಂಕರ ಅಕ್ಕನ ಬಳಗದ ಆಶ್ರಯದಲ್ಲಿ ಶಿರಢಾಣದ ಶಾಂತಲಿಂಗೇಶ್ವರ ಲೋಕಕಲ್ಯಾಣ ಟ್ರಸ್ಟ್‍ನ ಫಿಜಿಯೋಥೆರಪ ಮತ್ತು ವೆಲ್‍ನೆಸ್ ಕೇಂದ್ರದಿಂದ ಉಚಿತ ಮೊಣಕಾಲು ನೋವು ತಪಾಸಣೆ ಮತ್ತು ಚಿಕಿತ್ಸೆಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಉತ್ತಮ ಆರೋಗ್ಯಕ್ಕಾಗಿ ಸರಿಯಾದ ಆಹಾರ ಕ್ರಮ …

Read More »