ಬೆಳಗಾವಿಯಲ್ಲಿ ಎಫ್.ಎಂ ರೇಡಿಯೋ ಪ್ರಾರಂಭಿಸಲು ಮಾಹಿತಿ ಮತ್ತು ಪ್ರಸಾರ ಸಚಿವರಿಗೆ- ಸಂಸದ ಈರಣ್ಣ ಕಡಾಡಿ ಒತ್ತಾಯ ಮೂಡಲಗಿ: ನವದೆಹಲಿಯಲ್ಲಿ ಇಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರನ್ನು ಭೇಟಿಯಾಗಿ, ಬೆಳಗಾವಿಯಲ್ಲಿ ಎಫ್.ಎಂ ರೇಡಿಯೋ ಕೇಂದ್ರಗಳು ಮತ್ತು ಚಾನೆಲ್‍ಗಳ ಸ್ಥಾಪನೆಗೆ ಒತ್ತಾಯಿಸಿದರು. ನನ್ನ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನಿನೀಡಿದ್ದಾರೆ ಎಂದರು.
Read More »Daily Archives: ಸೆಪ್ಟೆಂಬರ್ 21, 2023
ಹೈನುಗಾರಿಕೆ ರೈತರ ಜೀವನಾಡಿಯಾಗಿದೆ: ಸುಣಧೋಳಿ ಅಭಿನವ ಶಿವಾನಂದ ಶ್ರೀಗಳು
ಹೈನುಗಾರಿಕೆ ರೈತರ ಜೀವನಾಡಿಯಾಗಿದೆ: ಸುಣಧೋಳಿ ಅಭಿನವ ಶಿವಾನಂದ ಶ್ರೀಗಳು ಬೆಟಗೇರಿ:ಸ್ಥಳೀಯ ರೈತರು ನಿತ್ಯದ ಕೃಷಿ ಚಟುವಟಿಕೆಗಳ ಜೋತೆಗೆ ಹೈನುಗಾರಿಕೆ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಕೆಎಂಎಫ್‍ನಿಂದ ಹೈನುಗಾರಿಕೆ ಅಭಿವೃದ್ಧಿಗಾಗಿ ಹಲವಾರು ಸಹಾಯ, ಸೌಲಭ್ಯಗಳಿವೆ. ರೈತರು ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸುಣಧೋಳಿ ಅಭಿನವ ಶಿವಾನಂದ ಮಹಾಸ್ವಾಮೀಜಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಸೆ.21ರಂದು ನಡೆದ 2022-23ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಮಹಾಸಭೆಯ ಸಾನಿಧ್ಯ …
Read More »ಸೆ.25 ರಂದು ಬೆಟಗೇರಿ ಪಿಕೆಪಿಎಸ್ ಸಂಘದ ವಾರ್ಷಿಕ ಮಹಾಸಭೆ
ಸೆ.25 ರಂದು ಬೆಟಗೇರಿ ಪಿಕೆಪಿಎಸ್ ಸಂಘದ ವಾರ್ಷಿಕ ಮಹಾಸಭೆ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸನ್ 2022-23ನೇಯ ಸಾಲಿನ ವಾರ್ಷಿಕ ಸರ್ವ ಸಾಧಾರಣ ಮಹಾಸಭೆ ಸಂಘದ ಕಾರ್ಯಾಲಯದಲ್ಲಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸೋಮಗೌಡ್ರ ಅಧ್ಯಕ್ಷತೆಯಲ್ಲಿ ಸೆ.25ರಂದು ಮುಂಜಾನೆ 11 ಗಂಟೆಗೆ ನಡೆಯಲಿದೆ. ಸಂಘದ ವಾರ್ಷಿಕ ಆಯಾ-ವ್ಯಯ ಅನುಮೋದನೆ, ನಿವ್ಹಳ ಲಾಭಗಳ ವಿಂಗಡನೆ, ಕಾರ್ಯ ಚಟುವಟಿಕೆಗಳ ಅನುಮೋದನೆ, ವಾರ್ಷಿಕ ವರದಿ ಸೇರಿದಂತೆ ಸಂಘದ ಸಮಗ್ರ …
Read More »ಅ.1ರಂದು ಉಪ್ಪಾರ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ ಸಮಾರಂಭ- ಲಾತೂರ್
ಅ.1ರಂದು ಉಪ್ಪಾರ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ ಸಮಾರಂಭ- ಲಾತೂರ್ ಮೂಡಲಗಿ: ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದಿಂದ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿಯವರಿಗೆ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಅ.1 ರಂದು ಹುಬ್ಬಳ್ಳಿ ಅಮರಗೋಳದಲ್ಲಿನ ವಿದ್ಯಾಧಿರಾಜ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲ್ಲಾಗಿದೆ ಎಂದು ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ಲಾತೂರ ತಿಳಿಸಿದರು. ಅವರು ಗುರುವಾರದಂದು ಪಟ್ಟಣದ ಪತ್ರಿಕಾ …
Read More »ಚುಟುಕು ಸಾಹಿತ್ಯ ಪರಿಷತ್‍ಗೆ ಅಧ್ಯಕ್ಷರಾಗಿ ಚಿದಾನಂದ ಹೂಗಾರ ನೇಮಕ
ಚುಟುಕು ಸಾಹಿತ್ಯ ಪರಿಷತ್‍ಗೆ ಅಧ್ಯಕ್ಷರಾಗಿ ಚಿದಾನಂದ ಹೂಗಾರ ನೇಮಕ ಮೂಡಲಗಿ: ಮೂಡಲಗಿ ತಾಲ್ಲೂಕಾ ಚುಟುಕು ಸಾಹಿತ್ಯ ಪರಿಷತ್‍ಗೆ ಅಧ್ಯಕ್ಷರಾಗಿ ಶಿವಾಪುರ (ಹ) ಗ್ರಾಮದ ಚಿದಾನಂದ ಹೂಗಾರ ಅವರು ನೇಮಕವಾಗಿದ್ದಾರೆ. ಪದಾಧಿಕಾರಿಗಳು: ಡಾ. ಮಹಾದೇವ ಪೋತರಾಜ (ಕಾರ್ಯಾಧ್ಯಕ್ಷರು), ಪ್ರಕಾಶ ಮೇತ್ರಿ (ಪ್ರಧಾನ ಕಾರ್ಯದರ್ಶಿ), ದುರ್ಗಪ್ಪ ದಾಸನ್ನವರ (ಖಜಾಂಚಿ). ಕಾರ್ಯಕಾರಣಿ ಸದಸ್ಯರು: ಯಾದವಾಡದ ಬಸಪ್ಪ ಇಟ್ಟನ್ನವರ, ವೈ.ಬಿ. ಕಳ್ಳಿಗುದ್ದಿ, ಹಳ್ಳೂರದ ಮಹಾರಾಜ ಸಿದ್ದು, ರಾಜಾಪೂರದ ಸದಾಶಿವ ಯಕ್ಸಂಬಿ, ಶಿವಕುಮಾರ ಕೋಡಿಹಾಳ, ಮೆಹಬೂಬ್ ಶೇಖಬಡೆ, …
Read More »