Breaking News

Daily Archives: ಸೆಪ್ಟೆಂಬರ್ 23, 2023

‘ಪೌರ ಕಾರ್ಮಿಕರನ್ನು ಸಮಾಜವು ಗೌರವಿಸಬೇಕು’

 ‘ಪೌರ ಕಾರ್ಮಿಕರನ್ನು ಸಮಾಜವು ಗೌರವಿಸಬೇಕು’ ಮೂಡಲಗಿ: ‘ಜನರ ಆರೋಗ್ಯ ಕಾಯುವಲ್ಲಿ ಪೌರ ಕಾರ್ಮಿಕರ ಸೇವೆಯು ಅಮೂಲ್ಯವಾಗಿದ್ದು, ಸಮಾಜವು ಪೌರ ಕಾರ್ಮಿಕರವನ್ನು ಗೌರವಿಸಬೇಕು’ ಎಂದು ಪುರಸಭೆ ಸದಸ್ಯ ಈರಣ್ಣ ಕೊಣ್ಣೂರ ಹೇಳಿದರು. ಇಲ್ಲಿಯ ಪುರಸಭೆಯಲ್ಲಿ ಶನಿವಾರ ಆಚರಿಸಿದ ಪೌರ ಕಾರ್ಮಿಕರ ದಿನಾಚರಣೆ ಹಾಗೂ ಹಿರಿಯ ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪೌರ ಕಾರ್ಮಿಕರನ್ನು ನಿರ್ಲಕ್ಷ ಮಾಡಬಾರದು ಎಂದರು. ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ ಕೋವಿಡ್ …

Read More »

ಸೆ. ೨೪ರಂದು ನಿಜಗುಣ ದೇವರ ಷಷ್ಠಬ್ದಿ ಪೂರ್ವಭಾವಿ ಸಭೆ

*ಸೆ. ೨೪ರಂದು ನಿಜಗುಣ ದೇವರ ಷಷ್ಠಬ್ದಿ ಪೂರ್ವಭಾವಿ ಸಭೆ * ಮೂಡಲಗಿ: ತಾಲ್ಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದ ನಿಜಗುಣ ದೇವರ ಷಷ್ಠಬ್ದಿ ಸಂಭ್ರಮ ಕಾರ್ಯಕ್ರಮದ ಸಂಘಟನೆಯ ಕುರಿತು ಚರ್ಚಿಸಲು ಸೆ. ೨೪ರಂದು ಬೆಳಿಗ್ಗೆ ೧೧ಕ್ಕೆ ಆಶ್ರಮದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ಹಲವು ಮಹಾತ್ಮರ ಸಾನ್ನಿಧ್ಯದಲ್ಲಿ ಜರುಗಲಿರುವ ಸಭೆಯಲ್ಲಿ ಶಾಸಕರು, ಸಂಸದರು, ಗಣ್ಯಮಾನ್ಯರು ಭಾಗವಹಿಸಲಿದ್ದಾರೆ. ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಘಟಕರು ತಿಳಿಸಿದ್ದಾರೆ.

Read More »