ರಾಜಾಪೂರ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ ಒಗ್ಗಟ್ಟಿನ ಮಂತ್ರ ಜಪಿಸಿ ಅಭಿವೃದ್ಧಿಗೆ ನಾಂದಿ ಹಾಡಿದ ಗ್ರಾಮಸ್ಥರು : ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ಮೂಡಲಗಿ : ಗ್ರಾಮದ ಹಿರಿಯರು ಒಗ್ಗಟ್ಟಿನಿಂದ ಗ್ರಾಮಾಭಿವೃದ್ಧಿಯನ್ನು ಕೈಗೊಂಡು ರಾಜಾಪೂರ ಗ್ರಾಮದ ಅಭಿವೃದ್ಧಿಗೆ ಕಂಕಣಬದ್ಧರಾಗಿ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರರಾಗಿರುವುದು ಶ್ಲಾಘನೀಯವಾಗಿದೆ. ಒಗ್ಗಟ್ಟಿನ ಮೂಲಕ ಏನು ಬೇಕಾದರೂ ಸಾಧಿಸಬಹುದೆಂಬುದನ್ನು ಹಿರಿಯರು ಹಾಗೂ ಗ್ರಾಪಂ ಸದಸ್ಯರು ತೋರಿಸಿಕೊಟ್ಟಿದ್ದಾರೆ ಎಂದು ಶಾಸಕ ಬಾಲಚಂದ್ರ …
Read More »Monthly Archives: ಅಕ್ಟೋಬರ್ 2023
ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರದಿಂದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಪಾಕ್ಷಿಕ 83ನೇ ಅನ್ನದಾಸೋಹಕ್ಕೆ ಚಾಲನೆ
ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ 83ನೇ ಅನ್ನದಾಸೋಹ ‘ಅನ್ನದಾನವು ಶ್ರೇಷ್ಠ ದಾನವಾಗಿದೆ’ ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ 83ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು. ಅತಿಥಿ ಮೂಡಲಗಿಯ ಸಾಯಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರವೀಣ ಕುಲಗೋಡ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ‘ಅನ್ನದಾನವು ಶ್ರೇಷ್ಠದಾನವಾಗಿದೆ, ಹಸಿದರವರಿಗೆ ಅನ್ನ ನೀಡುವುದು ಮಾನವೀಯತೆಯ ಪ್ರತೀಕವಾಗಿದೆ’ ಎಂದರು. ಲಯನ್ಸ್ ಕ್ಲಬ್‍ವು …
Read More »ದಿ.11ರಂದು ವಿದ್ಯುತ್ ಪೋರೈಕೆಯಲ್ಲಿ ವ್ಯತ್ಯಯ
ದಿ.11ರಂದು ವಿದ್ಯುತ್ ಪೋರೈಕೆಯಲ್ಲಿ ವ್ಯತ್ಯಯ ಮೂಡಲಗಿ : ಈಗಿರುವ ತಿಗಡಿಯ 33ಕೆವಿ ವಿದ್ಯುತ್ ವಿತರಣಾ ಉಪಕೇಂದ್ರವನ್ನು 110ಕೆವಿಯಾಗಿ ಮೇಲ್ದರ್ಜೆಗೆ ಏರಿಸುವ ಕಾಮಗಾರಿಯ ನಿಮಿತ್ತ 110 ಕೆವಿ ಮೂಡಲಗಿ,ನಾಗನೂರ ಲೈನ್ ನಿಂದ ತಿಗಡಿ ಉಪ ಕೇಂದ್ರಕ್ಕೆ ಲಿಲೋ ಲೈನ್ ಮಾಡುವ ಕಾಮಗಾರಿ ಕೆಲಸವನ್ನು ಕೈಗೊಳ್ಳಲು ಉದ್ದೇಶಿಸಿರುವುದರಿಂದ ಅ. 11ರಂದು ಮುಂಜಾನೆ 9 ಘಂಟೆಯಿಂದ ಸಂಜೆ 7 ಘಂಟೆಯವರೆಗೆ ವಿದ್ಯುತ್ ಪೊರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಕಾರಣ ತಿಗಡಿ ಉಪ ಕೇಂದ್ರದಿಂದ ಹೊರಹೋಗುವ ತಿಗಡಿ, ಮಸಗುಪ್ಪಿ, …
Read More »ಹುಣಶ್ಯಾಳ ಪಿಜಿ ನಿಜಗುಣ ದೇವರ ಷಷ್ಠಬ್ಧಿ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ
ಹುಣಶ್ಯಾಳ ಪಿಜಿ : ನಿಜಗುಣ ದೇವರ ಷಷ್ಠಬ್ಧಿ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ರಂಗದಲ್ಲಿ ಶ್ರೀಗಳ ಪಾತ್ರ ಗಣನೀಯ : ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ : ಎಲ್ಲರನ್ನು ಪ್ರೀತಿಸು. ಪ್ರೀತಿಯೇ ದೇವರು ಎಂಬ ತತ್ವವನ್ನು ಸಾರುತ್ತ, ಪಾದರಸದಂತೆ ಸದಾ ಓಡಾಡಿ ನಗುಮುಖದಿಂದಲೇ ತಮ್ಮ ಆತ್ಮೀಯ ವಲಯವೊಂದನ್ನು ಸೃಷ್ಟಿಸಿ ಹುಣಶ್ಯಾಳ ಪಿಜಿ ಕೀರ್ತಿಯನ್ನು ಎಲ್ಲೆಡೆ ಪಸರಿಸಿರುವ ಸಿದ್ಧಲಿಂಗ ಕೈವಲ್ಯಾಶ್ರಮದ ನಿಜಗುಣ ದೇವರ ಷಷ್ಠಬ್ಧಿ ಸಂಭ್ರಮವನ್ನು ಅತೀ …
Read More »ಕೊನೆಗೂ ಕೂಡಿ ಬಂತು ಗೋಕಾಕದ ಗ್ರಾಮದೇವತೆ ಜಾತ್ರೆ. 2025ಕ್ಕೆ ಮುಹೂರ್ತ ಫಿಕ್ಸ್
ಕೊನೆಗೂ ಕೂಡಿ ಬಂತು ಗೋಕಾಕದ ಗ್ರಾಮದೇವತೆ ಜಾತ್ರೆ. 2025ಕ್ಕೆ ಮುಹೂರ್ತ ಫಿಕ್ಸ್ ಮಹಾಲಕ್ಷ್ಮೀ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ 6.80 ಕೋಟಿ ರೂ. ವ್ಯಯ : ಶಾಸಕ ರಮೇಶ ಜಾರಕಿಹೊಳಿ ಗೋಕಾಕ : ಗೋಕಾವಿ ನೆಲದ ಇತಿಹಾಸ ಪ್ರಸಿದ್ಧ ಉಭಯ ಮಹಾಲಕ್ಷ್ಮೀ ದೇವಸ್ಥಾನಗಳನ್ನು ನವೀಕೃತಗೊಳಿಸಿ 2025 ರಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ ಇಡೀ ಜಿಲ್ಲೆಯೇ ಕಣ್ತುಂಬಿ ನೋಡುವಂತಹ ಗ್ರಾಮದೇವತೆ ಜಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ಮಹಾಲಕ್ಷ್ಮೀದೇವಿ ಜಾತ್ರಾ ಕಮೀಟಿ ಅಧ್ಯಕ್ಷರೂ ಆಗಿರುವ ಶಾಸಕ ರಮೇಶ …
Read More »ಬಿಜೆಪಿ ಸಾಮಾಜಿಕ ಜಾಲತಾಣವನ್ನು ಇನ್ನಷ್ಟು ಬಲಗೊಳಿಸಿ : ವಕ್ಕುಂದ
ಬಿಜೆಪಿ ಸಾಮಾಜಿಕ ಜಾಲತಾಣವನ್ನು ಇನ್ನಷ್ಟು ಬಲಗೊಳಿಸಿ : ವಕ್ಕುಂದ ಗೋಕಾಕ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಬಳಿ ತಲುಪಿಸಲು ಸಾಮಾಜಿಕ ಜಾಲತಾಣವನ್ನು ಇನ್ನಷ್ಟು ಬಲಪಡಿಸುವಂತೆ ಸಾಮಾಜಿಕ ಜಾಲತಾಣದ ಸಂಚಾಲಕ ಮಹಾಂತೇಶ ವಕ್ಕುಂದ ಹೇಳಿದರು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಗುರುವಾರದಂದು ಅರಭಾವಿ ಮಂಡಲ ಮಟ್ಟದ ಶಂಖನಾದ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, …
Read More »ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿಧ್ಯಾರ್ಥಿಗಳ ಸನ್ಮಾನ
ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ ಕೀರ್ತಿ ಹೆಚ್ಚಿಸಲಿ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸೋಮವಾರ ಅ. 02ರಂದು ಕಲ್ಲೋಳಿ ಪಟ್ಟಣದ ರಾಜ್ಯಸಭಾ ಸಂಸದರ ಜನ ಸಂಪರ್ಕ ಕಾರ್ಯಾಲಯದಲ್ಲಿ ಹುಣಶ್ಯಾಳ ಪಿಜಿ ಗ್ರಾಮದ ವಿದ್ಯಾರ್ಥಿಗಳಾದ ಅನುಕ್ತ ಮದುರಿ ಮತ್ತು ರಾಜಗುರು ವಾಣಿ ಇವರು ಜಿಲ್ಲಾಮಟ್ಟದ …
Read More »ಶಾಲೆ-ಕಾಲೇಜು ವಿದ್ಯಾರ್ಥಿಗಳು ಕಾನೂನಿನ ಅರಿವು ಹೊಂದುವುದು ಬಹು ಮುಖ್ಯವಾಗಿದೆ – ನ್ಯಾಯವಾದಿ ಎಮ್.ಬಿ. ಭಾಗೋಜಿ
ಮೂಡಲಗಿ: ದೇಶದ ನಾಳಿನ ಭವಿಷ್ಯವಾಗಿರುವ ಶಾಲೆ-ಕಾಲೇಜು ವಿದ್ಯಾರ್ಥಿಗಳು ಕಾನೂನಿನ ಅರಿವು ಹೊಂದುವುದು ಬಹು ಮುಖ್ಯವಾಗಿದೆ ಎಂದು ನ್ಯಾಯವಾದಿ ಎಮ್.ಬಿ. ಭಾಗೋಜಿ ಹೇಳಿದರು. ಇಲ್ಲಿಯ ಚಂದ್ರಿಕಾ ವಸತಿ ಶಾಲೆಯಲ್ಲಿ ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇವಾ ಸಂಘ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ಕಾನೂನು ಅರಿತು ಮುನ್ನಡೆದರೆ ಸಮಸ್ಯೆಗಳನ್ನು ಸರಳವಾಗಿ ನಿಭಾಯಿಸಬಹುದು. ಕಾನೂನಿಗೆ ಗೌರವ ನೀಡಿದರೆ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗುತ್ತದೆ. ಆದ್ದರಿಂದ ಪಠ್ಯದ …
Read More »ಬಿಸಿಯೂಟ ಸಿಬ್ಬಂದಿಯವರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಬಿಸಿಯೂಟ ಸಿಬ್ಬಂದಿಯವರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ತಮ್ಮ ಗೃಹ ಕಛೇರಿಯಲ್ಲಿ ಬಿಸಿಯೂಟ ಸಿಬ್ಬಂದಿಯನ್ನುದ್ಧೇಶಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಬಿಸಿಯೂಟ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳ ಕುರಿತಂತೆ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆದು ಅವರ ಸಮಸ್ಯೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇಲ್ಲಿಯ ಎನ್‍ಎಸ್‍ಎಫ್ ಗೃಹ ಕಛೇರಿಯಲ್ಲಿ ಗೋಕಾಕ-ಮೂಡಲಗಿ ತಾಲೂಕುಗಳ ಮಧ್ಯಾಹ್ನದ ಉಪಹಾರ …
Read More »ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಹೈನುಗಾರ ರೈತರಿಂದ ಬಲ : ಶಾಸಕ ಬಾಲಚಂದ್ರ ಜಾರಕಿಹೊಳಿ
ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಹೈನುಗಾರ ರೈತರಿಂದ ಬಲ : ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ : ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ದಿನನಿತ್ಯ ಹಾಲು ಪೂರೈಕೆ ಮಾಡುವ ಮೂಲಕ ಸಂಘಗಳ ಏಳ್ಗೆಗೆ ಹೈನುಗಾರರು ಶ್ರಮಿಸಬೇಕು. ನಮ್ಮ ಮೂಡಲಗಿ ತಾಲೂಕಿನಿಂದ ಎರಡು ಸಂಘಗಳು ಜಿಲ್ಲೆಯಲ್ಲಿ ಉತ್ತಮ ಸ್ಥಾನ ಗಳಿಸುವ ಮೂಲಕ ತಾಲೂಕಿಗೆ ಹೆಮ್ಮೆಯ ಸಾಧನೆ ಮಾಡಿವೆ ಎಂದು ಕೆಎಂಎಫ್ ನಿರ್ದೇಶಕರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ನಾಗನೂರ …
Read More »