Breaking News
Home / 2023 (page 25)

Yearly Archives: 2023

ನಾಗನೂರ ಪಟ್ಟಣದಲ್ಲಿ ಅರಭಾವಿ ಮತಕ್ಷೇತ್ರದ ಕಾರ್ಯಕರ್ತರನ್ನು ಅಭಿನಂದಿಸಿದ ನೂತನ ಶಾಸಕ ಬಾಲಚಂದ್ರ ಜಾರಕಿಹೊಳಿ

ಕಾರ್ಯಕರ್ತರಿಗೆ ಕೋಟಿ ಕೋಟಿ ನಮನ ಸಲ್ಲಿಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಹೃದಯಿ, ನಿಷ್ಠಾವಂತ ಕಾರ್ಯಕರ್ತರನ್ನು ಪಡೆದಿರುವುದು ನನ್ನ ಪುಣ್ಯ : ಬಾಲಚಂದ್ರ ಜಾರಕಿಹೊಳಿ ನಾಗನೂರ ಪಟ್ಟಣದಲ್ಲಿ ಅರಭಾವಿ ಮತಕ್ಷೇತ್ರದ ಕಾರ್ಯಕರ್ತರನ್ನು ಅಭಿನಂದಿಸಿದ ನೂತನ ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ : ರಾಜ್ಯದ 224 ಕ್ಷೇತ್ರಗಳಲ್ಲಿಯೇ ನಮ್ಮ ಅರಭಾವಿ ಕ್ಷೇತ್ರವು ಬಹು ವಿಶೇಷತೆಗಳಿಂದ ಕೂಡಿದ್ದು, ಯಾವ ಹಳ್ಳಿಗಳಿಗೂ ಪ್ರಚಾರವನ್ನು ಮಾಡದೇ ಪ್ರತಿ ಮತಗಟ್ಟೆಗಳಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ನನ್ನ ಆಯ್ಕೆಗೆ …

Read More »

17 ಹಾಗೂ 18ಂದು ವಿದ್ಯುತ್ ವ್ಯತ್ಯಯ

17 ಹಾಗೂ 18ಂದು ವಿದ್ಯುತ್ ವ್ಯತ್ಯಯ ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 110/11 ಕೆವಿ ಹಳ್ಳೂರ ಉಪಕೇಂದ್ರದ ವಿದ್ಯುತ ಗೋಪುರ ಅಳವಡಿಸುವ ಕಾಮಗಾರಿಯನ್ನು ಕೈಗೊಂಡಿರುವ ಕಾರಣ 110 ಕೆವಿ ಸೈದಾಪೂರ, ಕುಲಗೋಡ ಹಾಗೂ ಮೂಡಲಗಿ ಲೈನ್ ಮೇಲೆ ಮಾರ್ಗ ಮುಕ್ತತೆ ಅವಶ್ಯಕತೆ ಇದ್ದು ದಿ.17 ಹಾಗೂ 18ರಂದು ಮಂಜಾನೆ ಹಾಗೂ ಸಾಯಂಕಾಲ 6ರಿಂದ 8ಗಂಟೆ ವರೆಗೆ ಕುಲಗೋಡ ಉಪ ಕೇಂದ್ರದಿಂದ ಹೊರಹೋಗುವ ಮಾರ್ಗದಲ್ಲಿ ಮತ್ತು 33/11 ಕೆವಿ …

Read More »

ವೀರಣ್ಣ ಈಶ್ವರಪ್ಪ ಹೊಸೂರ ನಿಧನ

*ವೀರಣ್ಣ ಈಶ್ವರಪ್ಪ ಹೊಸೂರ ನಿಧನ * ಮೂಡಲಗಿ: ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕರು ಮತ್ತು ವ್ಹಿ. ಬಿ. ಸೋನವಾಲಕರ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರು ಹಾಗೂ ಮೂಡಲಗಿ ಪುರಸಭೆ ಮಾಜಿ ಅಧ್ಯಕ್ಷರಾದ ಶ್ರೀ *ವೀರಣ್ಣ ಈಶ್ವರಪ್ಪ ಹೊಸೂರ* ಅವರು ತಮ್ಮ 56ನೇ ವಯಸ್ಸಿನಲ್ಲಿ ಇಂದು ರವಿವಾರ ದಿ.14-5-2023 ರಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ *ಮೃತರ ಅಂತ್ಯಕ್ರಿಯೇಯು ಇಂದು …

Read More »

*ರಾಜ್ಯದಲ್ಲಿಯೇ ಆಡಳಿತಾರೂಢ ಬಿಜೆಪಿಯಿಂದ ಅತೀ ಹೆಚ್ಚಿನ ಮತಗಳ ಅಂತರದಿಂದ ಆಯ್ಕೆ ಯಾದ ಹೆಗ್ಗಳಿಕೆಗೆ ಪಾತ್ರರಾದ ಬಾಲಚಂದ್ರ ಜಾರಕಿಹೊಳಿ*

 ಬಾಲಚಂದ್ರ ಜಾರಕಿಹೊಳಿಯವರಿಗೆ ಡಬಲ್ ಹ್ಯಾಟ್ರಿಕ್ ಗರಿ ಗಡಾದ ಅವರನ್ನು 71,540 ಮತಗಳಿಂದ ಸೋಲುಣಿಸಿದ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ. ರಾಜ್ಯದಲ್ಲಿಯೇ ಆಡಳಿತಾರೂಢ ಬಿಜೆಪಿಯಿಂದ ಅತೀ ಹೆಚ್ಚಿನ ಮತಗಳ ಅಂತರದಿಂದ ಆಯ್ಕೆ ಯಾದ ಹೆಗ್ಗಳಿಕೆಗೆ ಪಾತ್ರರಾದ ಬಾಲಚಂದ್ರ ಜಾರಕಿಹೊಳಿ ಗೋಕಾಕ್- ಅರಭಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾಗಿದ್ದ ಬಾಲಚಂದ್ರ ಜಾರಕಿಹೊಳಿಯವರು ಸತತ ಆರನೇ ಬಾರಿಗೆ ವಿಜಯಶಾಲಿಯಾಗಿ ದಾಖಲೆಯ ಮತಗಳಿಂದ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಪಕ್ಷೇತರ …

Read More »

ಬೆಟಗೇರಿ ಗ್ರಾಮದಲ್ಲಿ ಚುನಾವಣೆಯ ಭಾರಿ ಅಂತರದ ಜಯ ಸಾಧಿಸಿದರ ಹಿನ್ನಲೆಯಲ್ಲಿ  ವಿಜೇಯ್ಯೋತ್ಸವ

ಬೆಟಗೇರಿ:ಅರಭಾಂವಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರು ವಿಧಾನಸಭಾ ಚುನಾವಣೆಯಲ್ಲಿ ಭಾರಿ ಅಂತರದ ಜಯ ಸಾಧಿಸಿದರ ಹಿನ್ನಲೆಯಲ್ಲಿ  ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ಗ್ರಾಮದಲ್ಲಿ ಬಿಜೆಪಿ ಮುಖಂಡ ಲಕ್ಷ್ಮಣ ಚಂದರಗಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಒಬ್ಬರಿಗೊಬ್ಬರೂ ಸಿಹಿ ವಿತರಿಸಿ, ಗುಲಾಲು ಎರಚಿಕೊಂಡು ವಿಜೇಯ್ಯೋತ್ಸವ ಆಚರಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಈಶ್ವರ ಮುಧೋಳ, ಬಸವರಾಜ ದಂಡಿನ, ಈರಪ್ಪ ದೇಯಣ್ಣವರ, ಈರಣ್ಣ ಬಳಿಗಾರ, ಅಶೋಕ …

Read More »

ಸಾವಳಗಿಯ ಲಿಂ. ಸಿದ್ಧರಾಮೇಶ್ವರ ಜಗದ್ಗುರುಗಳು ಶಿವಯೋಗ ತತ್ವ ಬೆಳೆಸಿದರು

  ಸಾವಳಗಿಯ ಲಿಂ. ಸಿದ್ಧರಾಮೇಶ್ವರ ಜಗದ್ಗುರುಗಳು ಶಿವಯೋಗ ತತ್ವ ಬೆಳೆಸಿದರು ಸಾವಳಗಿ : ‘ಸಾವಳಗಿಯ ಲಿಂಗೈಕ್ಯ ಸಿದ್ಧರಾಮೇಶ್ವರ ಜಗದ್ಗುರುಗಳು ಶಿಕ್ಷಣ ಮತ್ತು ಸಂಸ್ಕøತಿಯ ಆರಾಧಕರಾಗಿದ್ದು, ಶಿವಯೋಗ ತತ್ವ, ಪರಂಪರೆಯನ್ನು ಬೆಳೆಸಿದ ಮಹಾ ಮಹಿಮಾ ಸತ್ಪುರುಷರು’ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹೇಳಿದರು. ಗೋಕಾಕ ತಾಲ್ಲೂಕಿನ ಸಾವಳಗಿಯ ಜಗದ್ಗುರ ಶಿವಲಿಂಗೇಶ್ವರ ಪೀಠದಲ್ಲಿ ಜರುಗಿದ ಲಿಂಗೈಕ್ಯ ಸಿದ್ಧರಾಮೇಶ್ವರ ಜಗದ್ಗುರುಗಳ 44ನೇ ಪುಣ್ಯಾರಾಧನೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು …

Read More »

*ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ*

*ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ* *ಜನರ, ಕಾರ್ಯಕರ್ತರ ಆಸೆಯಂತೆ ಗೆಲುವಿನ ಅಂತರ ಹೆಚ್ಚಿನ ಪ್ರಮಾಣದಲ್ಲಾಗಲೆಂದು ದೇವರಲ್ಲಿ ಪ್ರಾರ್ಥನೆ: ಬಾಲಚಂದ್ರ ಜಾರಕಿಹೊಳಿ* ಗೋಕಾಕ: ಜಿಲ್ಲೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಬಂದು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುತ್ತದೆ ಎಂದು ಕೆಎಂಎಫ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಹೊಸಪೇಟ ಗಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ‌೩ ಮತಗಟ್ಟೆ …

Read More »

ಕಲ್ಲೋಳಿಯ ಬಸಗೌಡ ಪಾಟೀಲ ಅವರಿಗೆ ಮಾತೃವಿಯೋಗ

ಕಲ್ಲೋಳಿಯ ಬಸಗೌಡ ಪಾಟೀಲ ಅವರಿಗೆ ಮಾತೃವಿಯೋಗ ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಬಸಗೌಡ ಪಾಟೀಲ ಅವರ ತಾಯಿ ಶತಾಯುಷಿ ಅಲ್ಲವ್ವ ಶಿವಗೌಡ ಪಾಟೀಲ ಬುಧವಾರ ಬೆಳಿಗ್ಗೆ ನಿಧನರಾದರು. ಅವರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಕಲ್ಲೋಳಿಯ ಅಕ್ಕಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷರಾಗಿ 50 ವರ್ಷಗಳ ವರೆಗೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಬುಧವಾರ ಬೆಳಿಗ್ಗೆ ತೋಟದಲ್ಲಿ ಜರುಗಿದ ಅಂತ್ಯಕ್ರಿಯೆಯಲ್ಲಿ …

Read More »

ನನಗೇ ಮೊದಲ ಸ್ಥಾನ ನೀಡಲು ಮತದಾರರ ನಿರ್ಧಾರ —–

ನನಗೇ ಮೊದಲ ಸ್ಥಾನ ನೀಡಲು ಮತದಾರರ ನಿರ್ಧಾರ —– ಎರಡನೇ ಸ್ಥಾನಕ್ಕೆ ಯಾರು ಬರುತ್ತಾರೆಂದು ವಿರೋಧಿಗಳಿಬ್ಬರೂ ಪೈಪೋಟಿ ನಡೆಸಿದ್ದಾರೆ: ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ಕ್ಷೇತ್ರದ ಮತದಾರರು ಈಗಾಗಲೇ ನಿರ್ಧಾರ ಮಾಡಿದ್ದು, ನನಗೆ ಮೊದಲ ಸ್ಥಾನ ನೀಡಲಿದ್ದಾರೆ. ಆದರೆ, ವಿರೋಧ ಪಕ್ಷದ ಅಭ್ಯರ್ಥಿಗಳು ಎರಡನೇ ನಂಬರ್‌ಗೆ ಯಾರು ಬರುತ್ತಾರೆ ಎಂದು ಸ್ಪರ್ಧೆ ಮಾಡುತ್ತಿದ್ದಾರೆ. ಮೊದಲ ಸ್ಥಾನ ದೂರದ ಮಾತು. ನನ್ನನ್ನು ನೀವೇ ಮೊದಲ ಸ್ಥಾನದಲ್ಲಿ ಕೂರಿಸಿದ್ದಿರಿ. ನಾನು ಅದಕ್ಕೆ ಆಭಾರಿಯಾಗಿದ್ದೇನೆ. ತಾವೆಲ್ಲ …

Read More »

ಎಮ್.ಡಿ.ಆರ್.ಎಸ್ ಕಲ್ಲೋಳ್ಳಿ ವಸತಿ ಶಾಲೆಯ ಪೂಜಾ ಗಂಗನ್ನವರ 622 ಅಂಕಗಳನ್ನು ಪಡೆಯುವ ಮೂಲಕ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ

ಮೂಡಲಗಿ: ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಮೂಡಲಗಿ ಶೈಕ್ಷಣಿಕ ವಲಯದ 7175 ವಿದ್ಯಾರ್ಥಿಗಳ ಪೈಕಿ 6916 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ. 96.39 ಫಲಿತಾಂಶದೊಂದಿಗೆ ಶೈಕ್ಷಣಿಕ ವಲಯವು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಹಾಗೂ ಎಮ್.ಡಿ.ಆರ್.ಎಸ್ ಕಲ್ಲೋಳ್ಳಿ ವಸತಿ ಶಾಲೆಯ ಪೂಜಾ ಗಂಗನ್ನವರ 622 ಅಂಕಗಳನ್ನು ಪಡೆಯುವ ಮೂಲಕ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆಂದು ಬಿಇಒ ಅಜಿತ ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೋಮವಾರ ಪ್ರಕಟಗೊಂಡ ಎಸ್.ಎಸ್.ಎಲ್.ಸಿ ಪಲಿತಾಂಶದಲ್ಲಿ ಮೂಡಲಗಿ ಶೈಕ್ಷಣಿಕ …

Read More »