ಮಮದಾಪೂರ ಮೌನಮಲ್ಲಿಕಾರ್ಜುನ ಮಠದಲ್ಲಿ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮ ಬೆಟಗೇರಿ:ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಮೌನ ಮಲ್ಲಿಕಾರ್ಜುನ ಮಠದಲ್ಲಿ ಅ.15ರಂದು ನವರಾತ್ರಿಯ ಅಂಗವಾಗಿ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು. ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ ದೀಪ ಹಚ್ಚುವುದರ ಮೂಲಕ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ಥಳೀಯ ಶ್ರೀಮಠದ ಮೌನಮಲ್ಲಿಕಾರ್ಜುನ ಮಹಾಶಿವಯೋಗಿಗಳು ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ …
Read More »Yearly Archives: 2023
ಸಿದ್ದಲಿಂಗ ಶ್ರೀಗಳ ಅಗಲಿಕೆಗೆ ನಿರಾಣಿ ಶೋಕ
ಸಿದ್ದಲಿಂಗ ಶ್ರೀಗಳ ಅಗಲಿಕೆಗೆ ನಿರಾಣಿ ಶೋಕ ಮುಧೋಳ: ಅರಭಾವಿ ದುರದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ನಿಧನಕ್ಕೆ ವಿಧಾನಪರಿಷತ್ ಸದಸ್ಯ ಹನುಮಂತ ಆರ್ ನಿರಾಣಿ ತೀವ್ರ ಶ್ಲೋಕ ವ್ಯಕ್ತಪಡಿಸಿದ್ದಾರೆ ,ಅವರು ಇಂದು ದುರದುಂಡಿ ಮಠಕ್ಕೆ ಭೇಟಿ ನೀಡಿ ಅಗಲಿದ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದರು. ನಂತರ ನಡೆದ ದುಃಖ ಸೂಚಕ ಸಭೆಯಲ್ಲಿ ಮಾತನಾಡಿದ ನಿರಾಣಿಯವರು ಸಿದ್ದಗಂಗಾ ಸ್ವಾಮೀಜಿ ಈ ಭಾಗದಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದ್ದರು. ಬಸವ ತತ್ವ ಪ್ರಚಾರಕ್ಕೆ …
Read More »ನವರಾತ್ರಿ ಉತ್ಸವ ಕಾರ್ಯಕ್ರಮ ಧ್ಯಾನ ಪ್ರಾರ್ಥನೆ ಭಕ್ತಿ ಶೃದ್ದೆಯಿಂದ ದೇವಿ ಆರಾಧನೆ ಮಾಡಬೇಕು : ಚಿಕ್ಕೋಡಿ ಜಿಲ್ಲಾ ಉಪ ಯೋಜನಾಧಿಕಾರಿ ರೇವತಿ ಮಠದ
ಮೂಡಲಗಿ: ಶಕ್ತಿ ಅಂದರೆ ನವ ದೇವತೆಗಳ ದರ್ಬಾರ ಈ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಧ್ಯಾನ ಪ್ರಾರ್ಥನೆ ಭಕ್ತಿ ಶೃದ್ದೆಯಿಂದ ದೇವಿ ಆರಾಧನೆ ಮಾಡಬೇಕು ಎಂದು ಚಿಕ್ಕೋಡಿ ಜಿಲ್ಲಾ ಉಪ ಯೋಜನಾಧಿಕಾರಿ ರೇವತಿ ಮಠದ ಹೇಳಿದರು. ಅವರು ಹಳ್ಳೂರ ಗ್ರಾಮದ ಶ್ರೀ ಧ್ಯಾಮವ್ವಾ ತಾಯಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ನಿಮಿತ್ಯವಾಗಿ 9 ದಿವಸಗಳ ವರಗೆ ನಡೆಯುವ ಶ್ರೀ ದೇವಿ ಪುರಾಣ ಕಾರ್ಯಕ್ರಮವನ್ನು ಸಸಿಗೆ ನೀರು ಉನಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಮಕ್ಕಳ …
Read More »ಅರಭಾವಿ ಶ್ರೀಗಳ ಲಿಂಗೈಕ್ಯ – ಸಂಸದ ಈರಣ್ಣ ಕಡಾಡಿ ಸಂತಾಪ
ಅರಭಾವಿ ಶ್ರೀಗಳ ಲಿಂಗೈಕ್ಯ – ಸಂಸದ ಈರಣ್ಣ ಕಡಾಡಿ ಸಂತಾಪ ಘಟಪ್ರಭಾ: ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಅಪಾರ ಕೊಡುಗೆಗಳನ್ನು ನೀಡಿದ ಅರಭಾವಿ ದುರದುಂಡೇಶ್ವರ ಸಿದ್ದಸಂಸ್ಥಾನ ಮಠದ 11ನೇ ಪೀಠಾಧಿಪತಿಗಳಾಗಿದ್ದ ಪರಮಪೂಜ್ಯ ಶ್ರೀ ಸಿದ್ಧಲಿಂಗೇಶ್ವರ ಮಹಾ ಸ್ವಾಮೀಜಿಗಳು ಲಿಂಗೈಕ್ಯರಾದ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ದುಃಖವಾಗಿದೆ ಮತ್ತು ನಾಡಿನ ಭಕ್ತ ಸಮೂಹಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ರಾಜ್ಯಸಭಾ ಸಂಸದ ಹಾಗೂ ಶ್ರೀಮಠದ ಸದ್ಭಕ್ತರಾದ ಈರಣ್ಣ ಕಡಾಡಿ …
Read More »*ಶಿವನ ಪಾದ ಸೇರಿದ ಅರಭಾವಿ ದುರದುಂಡೀಶ್ವರ ಪೀಠದ ಶಿವಯೋಗಿ* *ಪರಮಪೂಜ್ಯರ ಅಗಲಿಕೆಗೆ ಕಂಬನಿ ಮಿಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ*
*ಮೂಡಲಗಿ*- ಗೋಕಾವಿ ನೆಲದ ಪಂಚ- ಪೀಠಗಳಲ್ಲಿ ಒಂದಾಗಿರುವ ತಾಲ್ಲೂಕಿನ ಅರಭಾವಿ ದುರದುಂಡೀಶ್ವರ ಪೀಠದ ಜಗದ್ಗುರು ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು (೭೫) ರವಿವಾರ ರಾತ್ರಿ ಲಿಂಗೈಕ್ಯೆರಾಗಿದ್ದಾರೆ. ಪರಮ ಪೂಜ್ಯರ ಅಗಲಿಕೆಗೆ ಶಾಸಕರೂ ಆಗಿರುವ ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಅರಭಾವಿ ಭಾಗದಲ್ಲಿ ಭಕ್ತರ ಪಾಲಿನ ದೇವರು ಆಗಿದ್ದ ಸದಾ ಸೌಮ್ಯ ಹಾಗೂ ಶಾಂತ ಸ್ವಭಾವದ ಸಾಕಾರ ಮೂರ್ತಿಯಾಗಿದ್ದ ಪೂಜ್ಯರ ಅಗಲಿಕೆಯಿಂದ ನಮ್ಮ ನಾಡಿಗೆ ಅಪಾರ ಹಾನಿಯಾಗಿದೆ. …
Read More »ಡಾ.ಎ.ಪಿ.ಜಿ ಅಬ್ದುಲ್ ಕಲಾಂ ಜಯಂತಿ ಆಚರಣೆ
ಡಾ.ಎ.ಪಿ.ಜಿ ಅಬ್ದುಲ್ ಕಲಾಂ ಜಯಂತಿ ಆಚರಣೆ ಮೂಡಲಗಿ: ಪಟ್ಟಣದ ಶಿವಾಪೂರ(ಹ) ರಸ್ತೆಯಲ್ಲಿರುವ ಡಾ.ಎ.ಪಿ.ಜಿ ಅಬ್ದುಲ್ ಕಲಾಂ ವೃತ್ತದಲ್ಲಿ ಭಾರತ ರತ್ನ ಹಾಗೂ ಮಾಜಿ ರಾಷ್ಟ್ರಪತಿಗಳಾ ಡಾ.ಎ.ಪಿ.ಜಿ.ಅಬ್ದುಲ್ ಕಲಾಂ ಅವರ 92ನೇ ಜಯಂತಿಯನ್ನು ಆಚರಿಸಲಾಯಿತು. ಮೂಡಲಗಿ ಪಿಎಸ್‍ಐ ಎಚ್.ವಾಯ್ ಬಾಲದಂಡಿ ಅವರು ಡಾ.ಎ.ಪಿ.ಜಿ.ಅಬ್ದುಲ್ ಕಲಾಂ ಅವರ ಭಾವ ಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡಿ, ಡಾ.ಎ.ಪಿ.ಜಿ.ಅಬ್ದುಲ್ ಕಲಾಂ ಅವರು ವಿಶ್ವ ಮಟ್ಟದಲ್ಲಿ ಭಾರತದ ಕಿರ್ತಿ ಎತ್ತಿ ಹಿಡಿದ್ದಾರೆ. ಬಲಿಷ್ಠ ರಾಷ್ಟ್ರಗಳ ಜತೆ ಭಾರತ ಪೈಪೋಟಿ …
Read More »ಸಾವಳಗಿಯ ದಸರಾ ಉತ್ಸದಲ್ಲಿ ವೈವಿದ್ಯಮಯವಾದ ಉಪನ್ಯಾಸಗಳು
ಸಾವಳಗಿಯ ದಸರಾ ಉತ್ಸದಲ್ಲಿ ವೈವಿದ್ಯಮಯವಾದ ಉಪನ್ಯಾಸಗಳು ಗೋಕಾಕ: ತಾಲ್ಲೂಕಿನ ಸುಕ್ಷೇತ್ರ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಪೀಠದಲ್ಲಿ ಅ.15ರಂದು ಭಾನುವಾರ ಬೆಳಿಗ್ಗೆ ದಸರಾ ಉತ್ಸವವಕ್ಕೆ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಚಾಲನೆ ನೀಡಿದರು. ಅ.16ರಿಂದ ಸಂಜೆ 7.30ಕ್ಕೆ ದಸರಾ ಉತ್ಸವದಲ್ಲಿ ಜಗದ್ಗುರುಗಳ ಸನ್ನಿಧಿಯಲ್ಲಿ ವಿವಿಧ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಿರುವರು. ಅ.16ರಂದು ಜಿನರಾಳದ ಡಾ. ಶ್ರೀಶೈಲ್ ಮಠಪತಿ ಅವರು ‘ಜಾನಪದ ಮತ್ತು ಗ್ರಾಮೀಣ ಸಂಸ್ಕøತಿ’ ವಿಷಯ, ಅ. 17ರಂದು ಬೆಳಗಾವಿಯ ಮ.ನ.ರ.ಸ. ಶಿಕ್ಷಣ …
Read More »ಭಾವೈಕ್ಯತೆ ಬಿಂಬಿಸುವ ಸಾವಳಗಿಯ ದಸರಾ ಉತ್ಸವ ರವಿವಾರ ಪ್ರಾರಂಭ
ಭಾವೈಕ್ಯತೆ ಬಿಂಬಿಸುವ ಸಾವಳಗಿಯ ದಸರಾ ಉತ್ಸವ ರವಿವಾರ ಪ್ರಾರಂಭ ಗೋಕಾಕ: ‘ಕಾಶಿ ಕಾಬಾ ಒಂದೇ, ಪುರಾಣ ಕುರಾನ್ ಒಂದೇ, ಈಶ್ವರ ಅಲ್ಲ ಒಬ್ಬನೇ’ ಎನ್ನುವ ಹಿಂದೂ ಮುಸ್ಲಿಂ ಸಾಮರಸ್ಯೆಯನ್ನು ಸಾರುವ, ಭಾವೈಕ್ಯತೆಗೆ ಹೆಸರಾಗಿರುವ ಗೋಕಾಕ ತಾಲ್ಲೂಕಿನ ಸಾವಳಗಿಯ ಜಗದ್ಗುರು ಪೀಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅ.15ರಿಂದ ಅ.24ರ ವರೆಗೆ ದಸರಾ ಉತ್ಸವವು ಸಿಂಹಾಸನಾಧೀಶ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿಧಿಯಲ್ಲಿ ಸಂಭ್ರಮದಿಂದ ಜರುಗಲಿವೆ. ಅ.15ರಂದು …
Read More »ಗೋಕಾಕ ಮಹಾಲಕ್ಷ್ಮೀ ದೇವಸ್ಥಾನದ ಜಾತ್ರಾ ಕಮೀಟಿ ಸದಸ್ಯರ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ
*ಬರುವ ರವಿವಾರದಿಂದಲೇ ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳನ್ನು ಆರಂಭಿಸಿ – ಶಾಸಕ ಬಾಲಚಂದ್ರ ಜಾರಕಿಹೊಳಿ* *ಗೋಕಾಕ ಮಹಾಲಕ್ಷ್ಮೀ ದೇವಸ್ಥಾನದ ಜಾತ್ರಾ ಕಮೀಟಿ ಸದಸ್ಯರ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ* ಗೋಕಾಕ- ಗೋಕಾವಿ ನೆಲದ ಇತಿಹಾಸ ಪ್ರಸಿದ್ಧ ಮಹಾಲಕ್ಷ್ಮೀ ಎರಡೂ ದೇವಸ್ಥಾನಗಳ ಜೀರ್ಣೋದ್ಧಾರ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜಾತ್ರಾ ಕಮೀಟಿಗೆ ಸೂಚನೆ ನೀಡಿದರು. ಗುರುವಾರ ಸಂಜೆ ತಮ್ಮ ಗೃಹ ಕಚೇರಿಯಲ್ಲಿ ಮಹಾಲಕ್ಷ್ಮೀ ದೇವಸ್ಥಾನದ ಜಾತ್ರಾ ಕಮೀಟಿ …
Read More »ಯಾದವಾಡದಲ್ಲಿ ಶ್ರೀ ದ್ಯಾಮವ್ವ ಮತ್ತು ಶ್ರೀ ದುರ್ಗಮ್ಮದೇವಿಯರ ಜಾತ್ರೆ ಆರಂಭ
ಯಾದವಾಡದಲ್ಲಿ ಶ್ರೀ ದ್ಯಾಮವ್ವ ಮತ್ತು ಶ್ರೀ ದುರ್ಗಮ್ಮದೇವಿಯರ ಜಾತ್ರೆ ಆರಂಭ ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದಲ್ಲಿ ಹಲವು ವರ್ಷಗಳಿಂದ ನಡಯದೇ ಇರುವ ಶ್ರೀ ದ್ಯಾಮವ್ವದೇವಿ ಮತ್ತು ಶ್ರೀ ದುರ್ಗಮ್ಮದೇವಿಯರ ಅ.11ರಿಂದ 13ರವರೆಗೆ ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಪ್ರಥಮ ದಿನವಾದ ಬುಧವಾರದಂದು ಯುವಕರು ಮತ್ತು ಭಕ್ತರು ಬಂಡಾರದಲ್ಲಿ ಮಿಂದದ್ದೆರು. ಬುಧವಾರದಂದು ಯಾದವಾಡ ಗ್ರಾಮದ ಸೀಮೆಯಲ್ಲಿ ದೇವಸ್ಥಾನದ ಅರ್ಚಕರು ಶ್ರೀ ದ್ಯಾಮವ್ವದೇವಿ ಮತ್ತು ಶ್ರೀ ದುರ್ಗಮ್ಮದೇವಿಯರ ಮೂರ್ತಿಗಳಿಗೆ ಪೂಜೆ …
Read More »