ದಿ. ಸಿದ್ದಣ್ಣ ಹೊರಟ್ಟಿಯವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ
ಮೂಡಲಗಿ: ಸ್ಥಳೀಯ ಚೈತನ್ಯ ಆಶ್ರಮ ವಸತಿ ಶಾಲೆ, ಮೂಡಲಗಿಯಲ್ಲಿ ಇಂದು ಚೈತನ್ಯ ಗ್ರುಪ್‍ನ ಸಂಸ್ಥಾಪಕರಾದ ಶ್ರೀ ಸಿದ್ದಣ್ಣ ಹೊರಟ್ಟಿಯವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಸರಕಾರಿ ನಿವೃತ್ತ ನೌಕರರ ಸಂಘ, ಹಿರಿಯ ನಾಗರಿಕರ ಸಂಘ, ಚೈತನ್ಯ ಅರ್ಬನ್ ಬ್ಯಾಂಕ್ ಹಾಗೂ ಚೈತನ್ಯ ಆಶ್ರಮ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸದರಿ ಕಾರ್ಯಕ್ರಮದಲ್ಲಿ ದಿ. ಸಿದ್ದಣ್ಣ ಹೊರಟ್ಟಿಯವರ ಭಾವಚಿತ್ರಕ್ಕೆ ಪೂಜಿಸಿ ಪುಷ್ಪಾರ್ಪಣೆ ಮಾಡಿ ನಮಸ್ಕರಿಸಿದರು.
ಶ್ರೀ ಸಿದ್ದಣ್ಣ ಹೊರಟ್ಟಿಯವರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಗೈದ ಸಾಧನೆಗಳನ್ನು ಮೆಲಕು ಹಾಕುತ್ತಾ, ಅವರ ಆದರ್ಶ ವಿಚಾರಗಳನ್ನು ಹಾಗೂ ಆಶಯಗಳನ್ನು ಇಡೇರಿಸಲು ಚೈತನ್ಯ ಗ್ರುಪ್ ಕಾರ್ಯತತ್ಪರಾಗಿಬೇಕೆಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಎಮ್. ಕಮದಾಳ ಹೇಳಿದರು.
ಮುಖ್ಯ ಅತಿಥಿಗಳ ಸ್ಥಾನ ವಹಿಸಿದ್ದ ಚೈತನ್ಯ ಅರ್ಬನ್ ಬ್ಯಾಂಕ್‍ನ ಅಧ್ಯಕ್ಷರಾದ ಟಿ.ಬಿ. ಕೆಂಚರಡ್ಡಿಯವರು ಮಾತನಾಡುತ್ತಾ ಹೊರಟ್ಟಿಯವರು ಈ ನಾಡು ಕಂಡ ಮಹಾನ್ ದೀಮಂತ ವ್ಯಕ್ತಿ ಸರಳ ಸಜ್ಜನಿಕೆಯನ್ನು ಹೊಂದಿ ಸಮಾಜ ಸೇವಕರಾಗಿ ಮಾಡಿದ ಕಾರ್ಯಗಳನ್ನು ತುಂಬು ಹೃದಯದಿಂದ ಶ್ಲಾಘಿಸಿದರು.
ಅತಿಥಿಗಳಾಗಿ ವಾಯ್.ಬಿ. ಪಾಟೀಲ, ಎಸ್.ಟಿ. ಜಡ್ಲಿಯವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶ್ರೀ ಸಿದ್ದಣ್ಣ ಹೊರಟ್ಟಿಯವರ ಪತ್ನಿಯಾದ ಶ್ರೀಮತಿ ರುಕ್ಮವ್ವಾ ಹೊರಟ್ಟಿ, ಮಗಳಾದ ವಿದ್ಯಾ ಮಗನಾದ ವಿಜಯ ಉಪಸ್ಥಿತರಿದ್ದರು.
ಎಮ್.ಎಚ್. ಚಿಪ್ಪಲಕಟ್ಟಿ ಸರ್, ಬಿ.ಬಿ. ನಾರಿ ಸರ್, ಯು.ಆರ್. ಜೋಕಿ ವಕೀಲರು, ಆರ್.ಟಿ. ಲಂಕೆಪ್ಪನವರ, ಚಂದ್ರು ಹಾಲೊಳ್ಳಿ, ಶ್ರೀಶೈಲ್ ಚೌಗಲಾ, ಮಹಾಂತೇಶ ತ್ಯಾಪಿ, ಶಿವಾನಂದ ಪಟ್ಟಿಹಾಳ, ಕಾರ್ಯಕ್ರಮದಲ್ಲಿ ಬಾಗಿಯಾಗಿ ಅನಿಸಿಕೆ ಹಂಚಿಕೊಂಡರು.
ಶಾಲೆಯ ಉಭಯ ಮಾಧ್ಯಮಗಳ ಮುಖ್ಯೋಪಾಧ್ಯಾಯರು, ಎಲ್ಲ ಸರ್ವ ಸದಸ್ಯರು ಹಾಜರಿದ್ದರು. ಕಾರ್ಯಕ್ರಮವನ್ನು ಎ.ಎಚ್. ಒಂಟಗೋಡಿ ನಿವೃತ್ತ ಮುಖ್ಯೋಪಾಧ್ಯಾಯರು ನಿರೂಪಿಸಿ, ಸ್ವಾಗಸಿದರು, ಶ್ರೀಮತಿ ಸಂಧ್ಯಾ ಪಾಟೀಲ ವಂದಿಸಿದರು.