Breaking News
Home / Recent Posts / ಪರಿಸರ ಸ್ನೇಹಿ ಗಣೇಶ ಮೂರ್ತಿ ಸ್ಥಾಪಿಸಲು ಸೂಚನೆ

ಪರಿಸರ ಸ್ನೇಹಿ ಗಣೇಶ ಮೂರ್ತಿ ಸ್ಥಾಪಿಸಲು ಸೂಚನೆ

Spread the love

ಪರಿಸರ ಸ್ನೇಹಿ ಗಣೇಶ ಮೂರ್ತಿ ಸ್ಥಾಪಿಸಲು ಸೂಚನೆ

ಮೂಡಲಗಿ: ಈ ಬಾರಿ ಆಚರಿಸುವ ಗಣೇಶ ಹಬ್ಬವನ್ನು ಕೋವಿಡ್-19 ಮಾರ್ಗಸೂಚಿಯೊಂದಿಗೆ ಸರಳವಾಗಿ ಆಚರಿಸುವಂತೆ ಜಿಲ್ಲಾಧಿಕಾರಿಯವರ ಆದೇಶದನ್ವಯ ಗಣೇಶ ಮೂರ್ತಿ ತಯಾರಕರು ಹಾಗೂ ಮಾರಾಟಗಾರರು ಪಿಓಪಿ ಹಾಗೂ ಬಣ್ಣ ಲೇಪಿತ ಮೂರ್ತಿ ತಯಾರಿಸುವುದು, ಮಾರಾಟ ಮಾಡುವುದನ್ನು ನಿಷೇಧಿಸಿದ್ದಾರೆ. ಅದರ ಬದಲಾಗಿ ಶೇಡಿ ಮಣ್ಣಿನಿಂದ ತಯಾರಿಸಿದ ಹಾಗೂ ನಾಲ್ಕು ಅಡಿ ಎತ್ತರದೊಳಗೆ ಮೂರ್ತಿಗಳನ್ನು ತಯಾರಿಸಿ ಬಣ್ಣ ರಹಿತ ಮೂರ್ತಿಗಳನ್ನು ಮಾರಾಟ ಮಾಡಬೇಕು ಎಂದು ಪುರಸಭೆ ಹಿರಿಯ ಆರೋಗ್ಯ ನೀರಿಕ್ಷಕ ಚಿದಾನಂದ ಮುಗಳಖೋಡ ಹೇಳಿದರು.
ಪುರಸಭೆ ಕಾರ್ಯಾಲಯದಲ್ಲಿ ಜರುಗಿದ ಗಣೇಶ ಮೂರ್ತಿ ತಯಾರಕರ ಮತ್ತು ಮಾರಾಟಗಾರರಿಗೆ ಸಲಹೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೆ ಬೇರೆ ಕಡೆಯಿಂದ ತರಿಸಿರುವ ಹಾಗೂ ಇಲ್ಲಿ ತಯಾರಿಸಿರುವ ಪಿಓಪಿ ಮತ್ತು ಬಣ್ಣ ಲೇಪಿತ ಮೂರ್ತಿಗಳನ್ನು ಮಾರಾಟ ಮಾಡಬಾರದು. ಕೋವಿಡ್-19 ಮಾರ್ಗ ಸೂಚಿಯಂತೆ ಸಾರ್ವಜನಿಕ ಮಂಟಪಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡದೇ ಹತ್ತಿರದ ದೇವಸ್ಥಾನಗಳಲ್ಲಿ ಸ್ಥಾಪಿಸಬೇಕು. ಗಣೇಶ ಮೂರ್ತಿ ತರುವ ಹಾಗೂ ವಿಸರ್ಜಿಸುವ ವೇಳೆಯಲ್ಲಿ ಮೈಕ್, ಡಿಜೆ, ಮೆರವಣಿಗೆ, ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಜರ್ ನಿಯಮಗಳನ್ನು ಅನುಸರಿಸಬೇಕು.
ಕೋವಿಡ್-19 ನಿಯಮಾವಳಿ ಶಿಷ್ಟಾಚಾರ ಉಲ್ಲಂಘಿಸುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೋಳ್ಳಲಾಗುವದು. ಪರಸರ ಸ್ನೇಹಿ ಗಣಪನ ಮೂರ್ತಿಗಳಿಗೆ ಆದ್ಯತೆ ನೀಡಿ, ಕೊರೋನಾ ಮಾಹಾಮಾರಿಯ ಅಲೆಯ ಭೀತಿ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಹಬ್ಬಗಳನ್ನು ಆಚರಿಸಿ ಮಾದರಿಯಾಗುವಂತೆ ನೋಡಿಕೊಳ್ಳ ಬೇಕು ಎಂದು ಮೂರ್ತಿ ತಯಾರಕರಲ್ಲಿ, ಮಾರಾಟಗಾರರಲ್ಲಿ ಮತ್ತು ಸಾರ್ವಜನಿಕರಿಗೆ ವಿನಂತಿ ಮಾಡಿಕೊಂಡರು.
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ತಯಾರಕರು ಹಾಗೂ ಮಾರಾಟಗಾರರಾದ ವಿಲಾಸ ಪತ್ತಾರ, ವಿಠ್ಠಲ ಪತ್ತಾರ, ಸಂತೋಷ ಪತ್ತಾರ, ತುಕಾರಾಮ ಪತ್ತಾರ, ಅಚ್ಯುತ ಪತ್ತಾರ ಮತ್ತಿತರರು ಇದ್ದರು.


Spread the love

About inmudalgi

Check Also

ನ.22 ರಂದು ಕನ್ನಡ ರಾಜ್ಯೋತ್ಸವ ಭವ್ಯ ಮೇರವಣಿಗೆ

Spread the love ಇಂದು ಕನ್ನಡ ರಾಜ್ಯೋತ್ಸವ ಭವ್ಯ ಮೇರವಣಿಗೆ ಮೂಡಲಗಿ: ಮೂಡಲಗಿ ತಾಲೂಕಾ ಕನ್ನಡ ರಾಜ್ಯೋತ್ಸ ಸಮಿತಿ ಆಶಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ