Breaking News
Home / Recent Posts / ಹನಿ ಹನಿ ನೀರನ್ನೂ ಪೋಲು ಮಾಡದೆ ನೀರನ್ನು ಸರಿಯಾಗಿ ಸಂರಕ್ಷಿಸಿ

ಹನಿ ಹನಿ ನೀರನ್ನೂ ಪೋಲು ಮಾಡದೆ ನೀರನ್ನು ಸರಿಯಾಗಿ ಸಂರಕ್ಷಿಸಿ

Spread the love

ಮೂಡಲಗಿ: ಹನಿ ಹನಿ ನೀರನ್ನೂ ಪೋಲು ಮಾಡದೆ ನೀರನ್ನು ಸರಿಯಾಗಿ ಸಂರಕ್ಷಿಸುವುದು, ಮಿತವಾಗಿ ಬಳಸುವುದು ಮತ್ತು ನೀರಿನ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ರಾಜ್ಯ ಯುವ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ಹೇಳಿದರು.
ಅವರು ಹಳ್ಳೂರು ಗ್ರಾಮದ ದೇವರಾಜ ಅರಸು ವಸತಿ ನಿಲಯದಲ್ಲಿ ಗಿಡಗಳಿಗೆ ನೀರು ಉಳಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ನೀರು ಅಮೂಲ್ಯವಾದದ್ದು ನೀರನ್ನು ಹಿತವಾಗಿ ಮಿತವಾಗಿ ಬಳಸಬೇಕು ಬೇಸಿಗೆ ಕಾಲದಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರಿನ ದಾಹ ನೀಗಿಸಲು ಅಲ್ಲಲ್ಲಿ ನೀರಿನ ವ್ಯವಸ್ಥೆ ಮಾಡಬೇಕು ಭೂಮಿ ಫಲವತ್ತತೆ ಕಾಯ್ದುಕೊಳ್ಳಲು ಭೂಮಿಗೆ ಬೇಕಾದಷ್ಟು ನೀರನ್ನು ಬಳಸಬೇಕು ಅμÉ್ಟೀ ಅಲ್ಲದೆ ಸುಂದರ ಪರಿಸರ ನಿರ್ಮಾಣ ಮಾಡಲು ಪ್ರತಿಯೊಬ್ಬರು ನೀರು ಸರಿಯಾಗಿ ಉಪಯೋಗಿಸಬೇಕು ಇಲ್ಲದಿದ್ದರೆ ಮುಂದೊಂದು ದಿನ ನೀರಿನ ಅಭಾವ ಎದುರಿಸಬೇಕಾಗುತ್ತದೆ ಆದ್ದರಿಂದ ಈಗಿನಿಂದಲೇ ಎಚ್ಚೆತ್ತುಕೊಂಡು ನೀರನ್ನು ಸರಿಯಾಗಿ ಉಪಯೋಗಿಸಿ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾರ್ಮಿಕವಾಗಿ ನುಡಿದರು.
ಬಿಸಿಎಂ ಸಿಬ್ಬಂದಿ ವಿವೇಕ ಬನಹಟ್ಟಿ ಮಾತನಾಡಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷÀ ಸಿದ್ದಣ್ಣ ದುರದುಂಡಿ ಅವರು ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘವನ್ನು ಹುಟ್ಟುಹಾಕಿ ಅದರ ಮುಖಾಂತರ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಮೂಡಿಸುತ್ತಾ ಈ ಸಮಾಜದಲ್ಲಿ ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ ಅವರ ಕಾರ್ಯ ನಿಜವಾಗಲೂ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಕ್ಕಣ್ಣ ಕಿರಣಗಿ ಮಹೇಶ ಹೆಬ್ಬಾಳ ರೇವಣ್ಣ ಆನೆಪನವರ ಶ್ರೀಶೈಲ ಕಾಂಬಳೆ ರಾಕೇಶ ದೇವಮಾನ ರಾಕೇಶ ನಾಯಕ ಗಿರೀಶ ಕಾಡಸೆಟ್ಟಿ ಮುತ್ತು ಬಿಸನಕೊಪ್ಪ ಮುಂತಾದವರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ