Breaking News
Home / Recent Posts / ಕುರುಹಿನಶೆಟ್ಟಿ ಸೊಸೈಟಿಗೆ 3.22ಕೋಟಿ ಲಾಭ

ಕುರುಹಿನಶೆಟ್ಟಿ ಸೊಸೈಟಿಗೆ 3.22ಕೋಟಿ ಲಾಭ

Spread the love

ಕುರುಹಿನಶೆಟ್ಟಿ ಸೊಸೈಟಿಗೆ 3.22ಕೋಟಿ ಲಾಭ

ಮೂಡಲಗಿ: ಪಟ್ಟಣದ ಪ್ರತಿಷ್ಠಿತ ಕುರುಹಿನಶೆಟ್ಟಿ ಅರ್ಬನ್ ಕೋ ಆಪ್ ಕ್ರಡಿಟ್ ಸೊಸೈಟಿಯು ಮಾರ್ಚ ಅಂತ್ಯಕ್ಕೆ 3.22 ಕೋಟಿ ಲಾಭ ಗಳಿಸಿ ಸಂಘವು ಪ್ರಗತಿ ಪಥದತ್ತ ಸಾಗಿದೆ ಎಂದು ಬ್ಯಾಂಕ್ ಚೇರಮನ್ ಬಸಪ್ಪ ಮುಗುಳಖೋಡ ಹೇಳಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ,ಸಂಘವು ಪ್ರಧಾನ ಕಚೇರಿಯ ಆಧುನಿಕ ಮಾದರಿಯ ಸುಸಜ್ಜಿತ ಕಟ್ಟಡ ಹೊಂದಿ, ತುಕ್ಕಾನಟ್ಟಿ, ಯಾದವಾಡ, ಮಹಾಲಿಂಗಪೂರ, ಘಟಪ್ರಭಾ, ತೇರದಾಳ, ಬನಹಟ್ಟಿ, ಹಾರೂಗೇರಿ, ರಾಮದುರ್ಗ, ಯರಗಟ್ಟಿ, ಕೌಜಲಗಿ ಸೇರಿದಂತೆ 11 ಶಾಖೆಗಳನ್ನು ಹೊಂದಿ ಎಲ್ಲಾ ಶಾಖೆಗಳು ಲಾಭ ಹೊಂದಿ ಪ್ರಗತಿ ಪಥದಲ್ಲಿ ಸಾಗಿವೆ ಮೇ. 6ರಂದು ಮುರಗೋಡದಲ್ಲಿ ಹೊಸ ಶಾಖೆ ಆರಂಭವಾಗಲಿದ್ದು ಶೀಘ್ರ ಸೌದತ್ತಿ ಹಾಗೂ ಮುನವಳ್ಳಿಯಲ್ಲೂ ನೂತನ ಶಾಖೆಗಳನ್ನು ಪ್ರಾರಂಭಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದರು.

ಸಂಘದ ಮಾಜಿ ಅಧ್ಯಕ್ಷ ಸುಭಾಸ ಬೆಳಕೂಡ ಮಾತನಾಡಿ, ರೈತರಿಗೆ, ವ್ಯಾಪಾರ್ಥರಿಗೆ, ಕೂಲಿ,ಕಾರ್ಮಿಕರಿಗೆ ಹಾಗೂ ವಿವಿಧ ರೀತಿಯ ಜನರಿಗೆ ಸಾಲ ಸೌಲಭ್ಯ ಒದಗಿಸಿ ಗ್ರಾಮೀಣ ಜನರನ್ನು ಆರ್ಥಿಕವಾಗಿ ಅಭಿವೃದ್ದಿಪಡಿಸುವ ಮತ್ತು ಸಮಾಜದಲ್ಲಿನ ಆರ್ಥಿಕ ಅಸಮತೋಲನವನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದರ ಜೊತೆಗೆ ಸೊಸೈಟಿ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಿ ಕೇವಲ ಐದು ರೂ ನಲ್ಲಿ 20 ಲೀಟರ್ ಶುದ್ಧ ನೀರು ಪೋರೈಸಲಾಗುತ್ತಿದೆ.ಈಗಿರುವ ಬಡ್ಡಿ ದರದಲ್ಲಿ ಶೇ.1ರಷ್ಟು ಕಡಿಮೆ ಮಾಡಿ ಸಾರ್ವಜನಕರಿಗೆ ಅನಕೂಲು ಮಾಡಲಾಗುವುದು ಎಂರು
ಪ್ರಧಾನ ವ್ಯವಸ್ಥಾಪಕ ರಮೇಶ ವಂಟಗೂಡಿ ಮಾತನಾಡಿ, ಸಂಘವು ಮಾರ್ಚ ಅಂತ್ಯಕ್ಕೆ 3.8 ಕೋಟಿ ಶೇರು ಬಂಡವಾಳ ಹೊಂದಿ, 17.19 ಕೋಟಿ ನಿಧಿಗಳನ್ನು ಹೊಂದಿ ಸಾರ್ವಜನಿಕ ವಲಯದಿಂದ 147.29 ಕೋಟಿ ಠೇವು ಸಂಗ್ರಹಿಸಿ 53.30 ಗುಂತಾವಣಿ ಹಾಗೂ 103.44 ಕೋಟಿ ವಿವಿಧ ಸಾಲ ವಿತರಿಸಿ 175.55 ದುಡಿಯುವ ಬಂಡವಾಳ ಹೊಂದಿ ಒಟ್ಟು 715.83 ಕೋಟಿ ವಾರ್ಷಿಕ ವಹಿವಾಟು ನಡೆಸಿ ಗ್ರಾಹಕರಿಗೆ ತ್ವರಿತ ಗತಿಯ ಸೇವೆ ಸಲ್ಲಿಸಲು ಗಣಕೀಕೃತ ಸೇವೆಯನ್ನು ಅಳವಡಿಸಿಕೊಳ್ಳಲಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ಲಕ್ಕಪ್ಪ ಪೂಜೇರಿ, ನಿರ್ದೇಶಕರಾದ ಇಸ್ಮಾಯಿಲ್ ಕಳ್ಳಿಮನಿ, ಗೊಡಚೆಪ್ಪ ಮುರಗೋಡ, ಬಸವರಾಜ ಬೆಳಕೂಡ, ವಿಶಾಲ ಶೀಲವಂತ, ಮಾಲಾ ಬೆಳಕೂಡ, ಮಾಹಬೂಬಿ ಕಳ್ಳಿಮನಿ, ಉಮಾ ಬೆಳಕೂಡ, ಶಾಂತವ್ವ ಬೋರಗಲ್, ಶ್ಯಾಲನ್ ಕೊಡತೆ ಬ್ಯಾಂಕ ಸಿಬ್ಬಂದಿ ಇದ್ದರು.


Spread the love

About inmudalgi

Check Also

ಬಸವರಾಜ ಪಾಟೀಲ ರಾಜ್ಯ ಮಟ್ಟದ ಗುಂಡು ಎಸೆತ ಸ್ಪರ್ಧೆಗೆ ಆಯ್ಕೆ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಸ್.ವೈ.ಸಿ ಶಿಕ್ಷಣ ಸಂಸ್ಥೆಯ ಶ್ರೀ ಸದ್ಗುರು ಯಾಲ್ಲಾಲಿಂಗ ಸ್ವತಂತ್ರ ಪದವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ