ಬಸವ ಸೇವಾ ಯುವಕ ಸಂಘದಿಂದ ಬಸವ ಜಯಂತಿ ಆಚರಣೆ
ಮೂಡಲಗಿ: ಆನೆ ಮೇಲೆ ಬಸವೇಶ್ವರರ ಭಾವಚಿತ್ರ ಮೆರವಣಿಗೆ
ಮೂಡಲಗಿ: ಇಲ್ಲಿಯ ಬಸವ ಸೇವಾ ಯುವಕ ಸಂಘದಿಂದ ಆನೆ ಮೇಲೆ ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಇಟ್ಟು ಮೆರವಣಿಗೆ ಮಾಡುವ ಮೂಲಕ ಮಂಗಳವಾರ ಸಂಭ್ರಮದಿಂದ ಬಸವ ಜಯಂತಿಯನ್ನು ಆಚರಿಸಿದರು.
ಬೆಳಿಗ್ಗೆ ಬಸವೇಶ್ವರ ಕಲ್ಯಾಣ ಮಂಟಪದ ಬಳಿಯಲ್ಲಿ ಜೋಡೆತ್ತುಗಳಿಗೆ ಪೂಜೆಯನ್ನು ಸಲ್ಲಿಸಿ ವಿವಿದ ಸಮಾಜದ ಹಿರಿಯರು ಮೆರವಣಿಗೆಗೆ ಚಾಲನೆ ನೀಡಿದರು. 251 ಮಹಿಳೆರ ಪೂರ್ಣಕುಂಭ ಮೇಳದೊಂದಿಗೆ ವಿವಿಧ ವಾದ್ಯವೃಂದಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಆಕರ್ಷಣೀಯವಾಗಿತ್ತು. ಜಗಜ್ಯೋತಿ ಬಸವೇಶ್ವರರಿಗೆ ಜಯಘೋಷಗಳು ಮೆರವಣಿಗೆಯುದ್ದಕ್ಕೂ ಮೊಳಗಿದವು.
ನಿಂಗಪ್ಪ ಟಿ. ಪಿರೋಜಿ, ಬಸವ ಸೇವಾ ಯುವಕ ಸಂಘದ ಅಧ್ಯಕ್ಷ ಕಲ್ಮೇಶ ಗೋಕಾಕ, ಉಪಾಧ್ಯಕ್ಷ ಪ್ರವೀಣ ಕುರಬಗಟ್ಟಿ, ಕಾರ್ಯದರ್ಶಿ ಉಮೇಶ ಶೆಕ್ಕಿ, ಭೀಮಪ್ಪ ಗಡಾದ, ಎಂ.ಎಚ್. ಸೋನವಾಲಕರ, ಬಿ.ಬಿ. ಹಂದಿಗುಂದ, ಆರ್.ಪಿ. ಸೋನವಾಲಕರ, ಶಿವನಿಂಗ ಗೋಕಾಕ, ಸಂತೋಷ ಸೋನವಾಲಕರ, ಮಹಾದೇವ ಗೋಕಾಕ, ಗುರಲಿಂಗ ಗೋಕಾಕ,
ವಿಜಯಕುಮಾರ ಸೋನವಾಲಕರ, ಬಸವರಾಜ ಕುರಬಗಟ್ಟಿ, ತಿಪ್ಪಣ್ಣ ಕುರುಬಗಟ್ಟಿ, ರೇವಪ್ಪ ಕೋರಿಶೆಟ್ಟಿ, ಮಹಾದೇವ ಶೆಕ್ಕಿ, ರವಿ ನಾಗನೂರ, ಗುರುಸಿದ್ದ ಶೆಕ್ಕಿ, ಬಸವರಾಜ ಶೆಕ್ಕಿ, ಈರಣ್ಣ ಕೊಣ್ಣೂರ, ಮಲ್ಲಪ್ಪ ಮದಗುಣಕಿ, ರುದ್ರಪ್ಪ ಬಳಿಗಾರ, ಭರಮಪ್ಪ ಬಳಿಗಾರ, ಬಸು ಬಳಿಗಾರ, ಸದಾಶಿವ ತಳವಾರ, ಭೀಮಶಿ ಪಿರೋಜಿ, ಪ್ರಶಾಂತ ನಿಡಗುಂದಿ, ಲಕ್ಕಪ್ಪ ನಿಡಗುಂದಿ, ಈರಪ್ಪ ಭಾಗೋಜಿ, ಸುಭಾಷ ಭಾಗೋಜಿ,, ಮುತ್ತಪ್ಪ ಮಾಲಗಾರ, ಶಿವಬಸು ಖಾನಟ್ಟಿ, ಪ್ರಕಾಶ ಕಾಳಪ್ಪಗೋಳ ಸೇರಿದಂತೆ ವಿವಿಧ ಸಂಘಟನೆಗಳ ಮುಖಸ್ಥರು ಇದ್ದರು.