ಮೂಡಲಗಿ : ಉಪ್ಪಾರ ಸಮುದಾಯ ಮತ್ತು ವಿವಿಧ ಸಮುದಾಯ ಜನರಿಂದ ಅದ್ದೂರಿಯಾಗಿ ಭಗೀರಥ ಜಯಂತೋತ್ಸವ ಆಚರಿಸಲಾಯಿತು. ಪಟ್ಟಣದ ಸರ್ಕಾರಿ ಕನ್ನಡ ಶಾಲೆಯಲ್ಲಿ ಭಗೀರಥ ಭಾವಚಿತ್ರಕ್ಕೆ ಪಟ್ಟಣದ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿಗಳಾದ ದತ್ತಾತ್ರೇಯಬೋಧ ಸ್ವಾಮಿಜಿಯವರು ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಇದೇ ವೇಳೆ ತಹಶೀಲ್ದಾರ ಡಿ ಜಿ ಮಹಾತ್ ಮಾತನಾಡಿ, ಗಂಗೆಯನ್ನು ಧರೆಗೆ ಇಳಿಸಿದ ಮಹಾನ್ ತಪಸ್ವಿ ಭಗೀರಥ ಮಹರ್ಷಿ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸಿದಾಗ ಮಾತ್ರ ಅವರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ. ಪ್ರಯತ್ನಕ್ಕೆ ಮತ್ತೊಂದು ಹಸರೇ ಭಗೀರಥ. ಅಸಾಮನ್ಯವಾದ ಕೆಲಸವನ್ನು ಛಲ ಬಿಡದೆ ಕಾರ್ಯರೂಪಕ್ಕೆ ತಂದವರು ಭಗೀರಥರು ಎಂದರು.
ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಭಗೀರಥ ಮಹರ್ಷಿಗಳ ಕೊಡುಗೆ ಅಪಾರವಾದದ್ದು, ಶಿವನನ್ನು ಆರಾಧಿಸಿ ತೀವ್ರ ತಪಸ್ಸು ಮಾಡಿ ಶಿವನಿಂದ ಪಡೆದ ವರದ ಪ್ರತಿಫಲವೇ ಗಂಗಾ ದೇವಿಯ ನದಿಯ ರೂಪದಲ್ಲಿ ಭೂಮಿಗೆ ಇಳಿಯಲು ಕಾರಣವಾಯಿತು. ಮನುಷ್ಯರಾದವರು ಸಮಾಜಕ್ಕೆ ಏನಾದರು ಕೊಡುಗೆ ನೀಡಿದರೇ ಮಾತ್ರ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಎಂದರು.
ಮೆರವಣಿಗೆಯೂ ಸರ್ಕಾರಿ ಕನ್ನಡ ಶಾಲೆಯಿಂದ ಕಲ್ಮೇಶ್ವರ ವೃತ್ತದ ಮೂಲಕ ಪಟ್ಟಣದ ಪ್ರಮುಖದ ವೃತ್ತಗಳ ಮಾರ್ಗವಾಗಿ ತೆರಳಿ ಕಲ್ಮೇಶ್ವಕ್ಕೆ ವೃತ್ತಕ್ಕೆ ತಲುಪಿತು. ಮೆರವಣಿಗೆಯಲ್ಲಿ ಶಿವ ಹಾಗೂ ಭಗೀರಥ ಮಹರ್ಷಿ ವೇಷಭೂಷಣ ಮತ್ತು ಸುಮಂಗಲೆಯರ ಆರತಿ, ಕುಂಭ, ಕರಡಿ ಮಜಲು ಹೀಗೆ ಅನೇಕ ಮಂಗಲ ವಾದ್ಯ ಮೇಳಗಳು ಮೆರವಣಿಗೆಗೆ ಕಳೆ ತಂದವು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಪಿಎಸ್‍ಐ ಎಚ್ ವೈ ಬಾಲದಂಡಿ, ಉಪ್ಪಾರ ಸಮಾಜದ ಹಿರಿಯ ಮುಖಂಡ ಬಿ ಬಿ ಹಂದಿಗುಂದ, ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ, ಉಪ್ಪಾರ ಸಮಾಜದ ತಾಲೂಕಾಧ್ಯಕ್ಷ ರಾಮಣ್ಣ ಹಂದಿಗುಂದ, ಕಾಂಗ್ರೇಸ್ ಮುಖಂಡರಾದ ಅಶೋಕ ಪೂಜೇರಿ, ಲಕ್ಕಣ್ಣ ಸವಸುದ್ದಿ, ಪಂಚಮಸಾಲಿ ಸಮಾಜದ ಜಿಲ್ಲಾ ಕಾರ್ಯದರ್ಶಿ ನಿಂಗಪ್ಪ ಪಿರೋಜಿ, ಶ್ರೀ ಭಗೀರಥ ಉಪ್ಪಾರ ಸಮಾಜದ ಅಧ್ಯಕ್ಷ ಶಿವಬಸು ಹಂದಿಗುಂದ, ಪ್ರಕಾಶ ಮಾದರ, ಅನ್ವರ ನದಾಫ್, ಈರಪ್ಪ ಬನ್ನೂರ, ಹಣಮಂತ ಪೂಜೇರಿ, ಲಕ್ಷ್ಮಣ ಅಡಿಹುಂಡಿ ಹಾಗೂ ಪುರಸಭೆ ಸದಸ್ಯರು, ವಿವಿಧ ಸಮಾಜದ ಮಹಿಳೆಯರು ಉಪಸ್ಥಿತರಿದ್ದರು.