ಮೂಡಲಗಿ: ಭಾವೈಕತೆಗೆ ಹೆಸರಾಗಿರುವ ಪಟ್ಟಣದ ಆರಾಧ್ಯ ದೈವ ಶ್ರೀ ಶಿವಬೋಧಸ್ವಾಮಿಗಳ ಪುಣ್ಯರಾಧನೆ ಹಾಗೂ ಜಾತ್ರಾಮಹೋತ್ಸವ ನಿಮಿತ್ಯ ಶಿವಬೋಧರಂಗ ದೇವಸ್ಥಾನಕ್ಕೆ ಕಹಾಮ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಭೇಟಿ ನೀಡಿ ದರ್ಶನ ಪಡೆದರು.
ಬುಧವಾರದಂದು ಮೊದಲ ದಿನದ ಜಾತ್ರಾಮಹೋತ್ಸವ ಅಂಗವಾಗಿ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮಿಜಿ ಮತ್ತು ಶ್ರೀ ಶ್ರೀಧರಬೋಧ ಸ್ವಾಮಿಜಿ ಸಾನಿಧ್ಯದಲ್ಲಿ ಅಪಾರ ಜನಸ್ತೋಮ ಮಧ್ಯೆ ಪಲ್ಲಕ್ಕಿ ಉತ್ಸವ ಜರುಗಿದ ಹಿನ್ನೆಲೆ ಬುಧವಾರ ಸಂಜೆ ಶಿವಬೋಧರಂಗ ಮಠಕ್ಕೆ ಭೇಟಿ ನೀಡಿದರು.
ಶಿವಬೋಧರಂಗನ ದರ್ಶನ ಪಡೆದ ನಂತರ ಸಿದ್ದ ಸಂಸ್ಥಾನ ಮಠದ ಪೀಠಧಿಪತಿಗಳಾದ ದತ್ತಾತ್ರೇಯಬೋಧ ಸ್ವಾಮಿಜಿಗಳನ್ನು ಭೇಟಿ ಮಾಡಿ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಪುರಸಭೆ ಸದಸ್ಯರಾದ ಶಿವು ಚಂಡಕಿ, ರವಿ ಸಣ್ಣಕ್ಕಿ, ಹಾಗೂ ಅನೇಕರು ಉಪಸ್ಥಿತರಿದ್ದರು.
IN MUDALGI Latest Kannada News