ಮೂಡಲಗಿ: ಅಗ್ನಿಪಥ್ ಯೋಜನೆ ನರೇಂದ್ರ ಮೋದಿ ಸರ್ಕಾರದ ಕ್ರಾಂತಿಕಾರಿ ಯೋಜನೆಯಾಗಿದ್ದು, ಈ ಯೋಜನೆಯ ಮೂಲಕ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಿ ದೇಶ ಸೇವೆ ಮಾಡುವ ಮುಖಾಂತರ ವಿಶ್ವದಲ್ಲಿ ಭಾರತದ ಸೇನೆಯನ್ನು ಬಲಿಷ್ಠಗೊಳಿಸಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು.
ಜು.2 ಶನಿವಾರ ರಂದು ಕಲ್ಲೋಳಿ ಪಟ್ಟಣದ ಯೋಧ ಮಲ್ಲಪ್ಪ ಕಂಕಣವಾಡಿ ಅವರ ಸೇನಾ ನಿವೃತ್ತಿಯ ಅಭಿನಂದನಾ ಸಮಾರಂಭದಲ್ಲಿ ಅವರನ್ನು ಸತ್ಕರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರುಅಗ್ನಿಪಥ್ ಯೋಜನೆಯ ಮೂಲಕ ದೇಶದ ಯುವಕರಿಗೆ ಮೂರು ಸೇನೆಗೆ ಸೇರುವ ಅವಕಾಶ ಸಿಗಲಿದೆ. ಈ ಯೋಜನೆಯಡಿ ಆಯ್ಕೆಯಾದ ಯುವಕರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಈ ಯೋಜನೆ ಬಗ್ಗೆ ತಪ್ಪು ತಿಳುವಳಿಕೆ ಮೂಡಿಸುವ ಮೂಲಕ ಸೇನೆಗೆ ಸೇರಬಯಸುವ ಯುವಕರನ್ನು ದಾರಿ ತಪ್ಪಿಸಲಾಗುತ್ತಿದೆ. ಇಂತವರ ಬಗ್ಗೆ ಯುವಕರು ಜಾಗೃತಿಯಿಂದ ಇರಬೇಕೆಂದು ವಿನಂತಿಸಿದರು.
ಅಗ್ನಿಪಥ್ ಯೋಜನೆಯಿಂದ ದೇಶಭಕ್ತಿ ಮತ್ತು ಸದೃಢ ವ್ಯಕ್ತಿತ್ವ ನಿರ್ಮಾಣಕ್ಕೆ ಅವಕಾಶವಿದ್ದು, 5 ವರ್ಷಗಳ ಕಾಲ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ನೀಡಲಾಗುತ್ತದೆ. ಯುವಕರು ಸೇನೆಯಲ್ಲಿ ಸೇರಿ ಉತ್ತಮ ಜೀವನ ರೂಪಿಸಿಕೊಳ್ಳುವ ಅವಕಾಶವಿದೆ. ರಾಜಕೀಯ ಪ್ರೇರಿತ ಮಾತುಗಳಿಗೆ ಬಲಿಯಾಗದೇ ಅಗ್ನಿಪಥ್ ಯೋಜನೆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಯುವಕರಿಗೆ ಕರೆ ನೀಡಿದರು.
ಮಾಜಿ ಸೈನಿಕರಾದ ಹಣಮಂತ ಕುರಬೇಟ, ಪರಪ್ಪ ರಾಚನ್ನವರ, ಬಸವರಾಜ ಅಂಗಡಿ, ಶ್ರೀಶೈಲ ಮುಗಳಿ, ರಾಜು ದಬಾಡಿ, ಕೆಂಚಪ್ಪ ಡೂಗನವರ, ರಮೇಶ ಚೌಗಲಾ, ರಾಜಶೇಖರ ಮೇತ್ರಿ, ಸಲಿಂ ನದಾಫ್, ಈರಪ್ಪ ಮುತ್ನಾಳ, ರಾಮಚಂದ್ರ ಮಾಳದವರ, ಬಸವರಾಜ ಕಡಾಡಿ, ಈರಣ್ಣ ಮುನ್ನೋಳಿಮಠ, ಸುರೇಶ ಮಠಪತಿ, ಅಡಿವೆಪ್ಪ ಕುರಬೇಟ, ದಶಗೀರ ಕಮತನೂರ, ಮಹಾತೇಶ ಬಿ.ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.