ಮೂಡಲಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರಿಕ್ಷೆಯಲ್ಲಿ ಶೇ 90ಕ್ಕೂ ಹೆಚ್ಚು ಅಂಕಗಳಿಸಿರುವ ಸರ್ಕಾರಿ ನೌಕರರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನಿಸಲಾಗಿದೆ ಎಂದು ಮೂಡಲಗಿ ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆನಂದ ಹಂಜಾಗೋಳ ತಿಳಿಸಿದ್ದಾರೆ,
ಆನಲೈನ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಮಕ್ಕಳ ತಂದೆ ಅಥವಾ ತಾಯಿ ಕಡ್ಡಾಯವಾಗಿ ಸರ್ಕಾರಿ ನೌಕರಾಗಿರಬೇಕು ಹಾಗೂ ಅರ್ಜಿಯ ಜೊತೆಗೆ ಸೇವಾ ದೃಡಿಕರಣ ಪ್ರಮಾಣ ಪತ್ರದಲ್ಲಿ ತಾಲೂಕಾ ಅಧ್ಯಕ್ಷರ ಸಹಿ ಇರಬೇಕು. ದೃಡಿಕರಣ ಇಲ್ಲದ ಆನಲೈನ ಮೂಲಕ ಸಲ್ಲಿಸಲ್ಪಡುವ ಅರ್ಜಿ ಪರಿಗಣಿಸಲಾವುದಿಲ್ಲ ಎಂದು ತಿಳಿಸಿದ್ದಾರೆ,
ಆನಲೈನ ಅರ್ಜಿ ಸಲ್ಲಿಸುವರು ಇದೆ ತಿಂಗಳು 15-07-2022 ವರೆಗೆ ಅವಕಾಶ ಇದೆ ಎಂದು ಪ್ರಧಾನ ಕಾರ್ಯದರ್ಶಿ ಕೆ ಆರ್ ಅಜ್ಜಪ್ಪನವರ ತಿಳಿಸಿದ್ದಾರೆ
ಸಂಘದ ಖಜಾಂಚಿ ಎ ಎಮ್ ಮೋಡಿ, ಪರಿಷತ್ ಸದಸ್ಯ ಆರ್ ಎಮ್ ಮಹಾಲಿಂಗಪೂರ, ಉಪಾಧ್ಯಕ್ಷ ವಿ ಎ ಹುಲ್ಲಾರ, ಶ್ರೀಶೈಲ ಜಾಗನೂರ ಹಾಗೂ ಪಧಾದಿಕಾರಿಗಳು ಇದ್ದರು,