Breaking News
Home / Recent Posts / ಮಕ್ಕಳು ಸಂಸ್ಕಾರ ರೂಪಿಸುವ ಶಿಕ್ಷಣದ ತತ್ವಗಳನ್ನು ಬೆಳಸಿಕೊಳ್ಳಬೇಕು – ಚಿದಾನಂದ ಹೂಗಾರ

ಮಕ್ಕಳು ಸಂಸ್ಕಾರ ರೂಪಿಸುವ ಶಿಕ್ಷಣದ ತತ್ವಗಳನ್ನು ಬೆಳಸಿಕೊಳ್ಳಬೇಕು – ಚಿದಾನಂದ ಹೂಗಾರ

Spread the love

 

ಮೂಡಲಗಿ : ಮಕ್ಕಳು ಸಂಸ್ಕಾರ ರೂಪಿಸುವ ಶಿಕ್ಷಣದ ತತ್ವಗಳನ್ನು ಬೆಳಸಿಕೊಳ್ಳಬೇಕು ಕೇವಲ ಪಠ್ಯವಿಷಯಗಳನ್ನು ಮಾತ್ರ ಕಲಿಯದೇ ಪಠ್ಯೇತರ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳಸುವ ಜ್ಞಾನವನ್ನು ನಿರಂತರವಾಗಿ ಸಂಪಾಧಿಸಿ ಸರಳ ಸಜ್ಜನಿಕೆಯ ವಕ್ತಿತ್ವ ರೂಪಿಸಿಕೊಳ್ಳಬೇಕು. ಸಂಸ್ಕಾರಯುತವಾದ ಶಿಕ್ಷಣ ಆದರ್ಶ ವ್ಯಕ್ತಿಯನ್ನು ನಿರ್ಮಾಣ ಮಾಡುತ್ತದೆ ಅಂತಹ ಶಿಕ್ಷಣ ಪಡೆದುಕೊಂಡು ತಂದೆ ತಾಯಿ ಮತ್ತು ಗುರುಗಳ ಹೆಸರನ್ನು ತರುವಂತಹ ಸಾಧನೆ ಮಾಡಿದಾಗ ಮನುಷ್ಯನ ಜೀವನ ಸ್ವಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಶಿವಾಪೂರ (ಹ) ಅಡವಿಸಿದ್ದೇಶ್ವರ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯರಾದ ಮತ್ತು ಸಾಹಿತಿಗಳಾದ ಚಿದಾನಂದ ಹೂಗಾರ ಹೇಳಿದರು.

ಅವರು ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಗಳು ಹಾಗೂ ಎನ್. ಎಸ್.ಎಸ್. ಘಟದ ಉದ್ಘಾಟನಾ ಸಮಾರಂಭದ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ವಿದ್ಯಾರ್ಥಿ ಜೀವನ ಅಮೂಲ್ಯವಾದ ಜೀವನವಾಗಿದ್ದು ಸರಿಯಾದ ಮಾರ್ಗದಲ್ಲಿ ಅದರ ಸದ್ಬಳಿಕೆ ಮಾಡಿಕೊಂಡರೆ ಮುಂದಿನ ಜೀವನ ಪವಿತ್ರವಾಗುವುದು ಆಧುನಿಕ ಜೀವನ ಶೈಲಿಗಳಾದ ಮೊಬೈಲ್, ಟಿವಿ, ಮತ್ತು ದುಶ್ಚಟಗಳು ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದ್ದು ಅದರ ಬಗ್ಗೆ ಎಚ್ಚರಿಕೆ ವಹಿಸಿ ಕಲಿಕೆ ಜ್ಞಾರ್ನಜನೆ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ವಿದ್ಯಾರ್ಥಿಗಳು ಬೆಳಸಿಕೊಳಬೇಕೆಂದರು.
ಕಾಲೇಜು ಪ್ರಾಚಾರ್ಯ ಸಂಜೀವ ವಾಲಿ ಮಾತನಾಡಿ ಮಕ್ಕಳು ಭವಿಷ್ಯದ ಬಗ್ಗೆ ಚಿಂತೆನೆ ಮಾಡಿದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಅಧ್ಯಯನ ಶೀಲತೆ ತತ್ವಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿದೆ ಶೃದ್ದೆ ಮತ್ತು ನಿಷ್ಠೆಯಿಂದ ಅಧ್ಯಯನ ಮಾಡಿ ಉತ್ತಮ ಫಲಿತಾಂಶ ಪಡೆದುಕೊಳ್ಳಲು ಪ್ರಯತ್ನಿಸಬೇಕೆಂದರು.
ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನು ಇಟ್ಟುಕೊಂಡು ಅಧ್ಯಯನದ ಕಡೆಗೆ ಗಮನಹರಿಸಬೇಕು ಅಂದಾಗ ಅವರು ಯಶಸ್ವಿ ವ್ಯಕ್ತಿಗಳಾಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾಮಪಂಚಾಯತ ಸದಸ್ಯರಾದ ರಮೇಶ ಪಾಟೀಲ ಉಪನ್ಯಾಸಕರಾದ ಜಿ.ಎಸ್. ಮನ್ನಾಪೂರ, ಎಂ.ಬಿ. ಸಿದ್ನಾಳ, ರವಿ ಕಟಗೇರಿ, ಸಂತೋಷ ಲಟ್ಟಿ, ಹಣಮಂತ ಚಿಕ್ಕೋಡಿ, ಎಂ.ಎಸ್. ಮುನ್ಯಾಳ ಜಿ.ಎಚ್. ಕಡಪಟ್ಟಿ ಗಿರೀಶ ಬಳಿಗಾರ ಇನ್ನುಳಿದವರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋದಿಸಲಾಯಿತು ಕಾರ್ಯಕ್ರಮಕ್ಕೆ ಉಪನ್ಯಾಸಕರಾದ ಎಸ್.ಎನ್. ಕುಂಬಾರ ಸ್ವಾಗತಿಸಿದರು. ಉಪನ್ಯಾಸಕರಾದ ಎಂ. ಆಯ್. ಜಾಡರ ನಿರೂಪಿಸಿ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ