ಬೆಟಗೇರಿ:ಗ್ರಾಮದ ಚೈತನ್ಯ ಗ್ರಪ್ಸ್‍ನ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಆ.15ರಂದು ನಡೆದ 75ನೇ ವರ್ಷದ ಸ್ವಾತ್ರಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮ ಸಡಗರದಿಂದ ನಡೆಯಿತು.
ಉಭಯ ಮಾಧ್ಯಮ ಪ್ರಾಥಮಿಕ ಶಾಲೆಯ ಮಕ್ಕಳು ದೇಶಕ್ಕಾಗಿ ತಮ್ಮ ಬದುಕನ್ನೆ ತ್ಯಾಗಗೈದ ಮಹಾನ್ ವೀರ ಪುರುಷ ಮತ್ತು ಮಹಿಳೆಯರ ರೂಪಕದ ವೇಷಭೂಷಣ ತೊಟ್ಟು ಎಲ್ಲರ ಗಮನ ಸೆಳೆದರು. ತಾಪಂ ಮಾಜಿ ಸದಸ್ಯ ಈರಪ್ಪ ದೇಯಣ್ಣವರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮಹಾತ್ಮಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ ಭಾವ ಚಿತ್ರಕ್ಕೆ ಪೂಜೆ, ಪುಷ್ಪ ಸಮರ್ಪನೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಸಡಗರದಿಂದ ನಡೆಯಿತು.
ಸ್ಥಳೀಯ ಶಿಕ್ಷಣಪ್ರೇಮಿಗಳಾದ ಬಸಪ್ಪ ಮೇಳೆಣ್ಣವರ, ರಮೇಶ ನಾಯ್ಕ, ಚೈತನ್ಯ ಗ್ರುಪ್ಸ್‍ನ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕಮಲಾಕ್ಷಿ ನಾಯ್ಕ, ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಂಜಯ ಮೆಳವಂಕಿ, ಆಡಳಿತಾಧಿಕಾರಿ ರವಿ ಭರಮನಾಯ್ಕ, ನಭಿಸಾಬ ನದಾಫ್, ಉಭಯ ಮಾಧ್ಯಮ ಪ್ರಾಥಮಿಕ ಶಾಲೆಯ ಶಿಕ್ಷಕರು, ಶಿಕ್ಷಕಿಯರು, ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಇದ್ದರು.