ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಸದ್ಭಾವನಾ ದಿನ ಆಚರಣೆ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು.

ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅವರು, ಸದ್ಭಾವನಾ ದಿ, ಪ್ರತಿಜ್ಞಾ ವಿಧಿ ಸ್ವೀಕಾರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ವಿದ್ಯಾರ್ಥಿಗಳಿಗೆ, ಶಿಕ್ಷಕರು, ಸಿಬ್ಬಂದಿಗೆ ಜಾತಿ, ಮತ, ಧರ್ಮ, ಪ್ರದೇಶ ಹಾಗೂ ಭಾಷೆಯಬೇಧ ಭಾವವಿಲ್ಲದೇ ಸೌಹಾರ್ದಕ್ಕಾಗಿ ಕಾರ್ಯನಿರ್ವಹಿಸುವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಮೋಹನ ತುಪ್ಪದ, ರಾಕೇಶ ನಡೋಣಿ, ವಿ.ಬಿ.ಬಿರಾದಾರ, ಶುಭಾ.ಬಿ., ಎ.ಬಿ.ತಾಂವಶಿ, ಈಶ್ವರ ಮುನವಳ್ಳಿ, ಜಿ.ಆರ್.ಬಾಗೋಜಿ, ವೈ.ಎಮ್.ವಗ್ಗರ, ಪ್ರಕಾಶ ಕುರಬೇಟ, ಈರಣ್ಣ ಪಟಗುಂದಿ, ಪ್ರೌಢ ಶಾಲೆಯ ಶಿಕ್ಷಕರು, ಶಿಕ್ಷಕಿಯರು, ಸಿಬ್ಬಂದಿವರ್ಗ, ವಿದ್ಯಾರ್ಥಿಗಳು, ಇತರರಿದ್ದರು.
IN MUDALGI Latest Kannada News