*ಮೋದಿ ಜನ್ಮ ದಿನದ ನಿಮಿತ್ತ ಮರ ನೆಡುವ ಚಾಲನೆ ನೀಡಿದ ಸೋನಾಲಿ*
ಖಾನಾಪೂರ- ನರೇಂದ್ರ ಮೋದಿಯವರ 72ನೇ ಜನ್ಮದಿನದ ನಿಮಿತ್ತ. ಖಾನಾಪುರದಲ್ಲಿ ಬಿಜೆಪಿ ಕುಂದುಕೊರತೆ ನಿವಾರಣಾ ಕೇಂದ್ರದ ಕಾರ್ಯಕರ್ತರು ಡಾ.ಸೋನಾಲಿ ಸರ್ನೋಬತ್ (ಬಿಜೆಪಿ ಮಹಿಳಾ ಮೋರ್ಚಾ ಗ್ರಾಮಾಂತರ ಉಪಾಧ್ಯಕ್ಷೆ) ಹಣ್ಣು ಮತ್ತು ಹೂವಿನ ಗಿಡಗಳನ್ನು ನೆಟ್ಟರು.
ಅವರು ಮೋದಿಜಿಯವರು ಮಾಡಿದ ಯೋಜನೆಗಳು ಮತ್ತು ಹಲವಾರು ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿದರು.
ಭಾರತಮಾತೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತು.
ಈ ಸಂದರ್ಭದಲ್ಲಿ ಬಸವರಾಜ ಕಡೇಮನಿ, ಬಾಳೇಶ ಚವ್ವಣ್ಣವರ, ಪರಶ್ರಾಮ ಕೋಲ್ಕಾರ, ಕುಶ ಅಂಬೋಜಿ, ಕಲ್ಲಪ್ಪ ಕಂಗ್ರಾಳಕರ, ವೈಷ್ಣವಿ ಭೋಸಲೆ, ದೀಪಕ ಚೌಗುಲೆ, ಶಶಿಕಾಂತ ನಾಯಿಕ, ವೈಷ್ಣವಿ ಭೋಸಲೆ, ನಾಗೇಶ ರಾಮಜಿ, ವಿನಾಯಕ ನಾಯ್ಕ, ವಿನೋದ ಪಾವಲೆ, ಅಕ್ಷಯ ಕುಸ್ತಿ ಉಪಸ್ಥಿತರಿದ್ದರು.