ಮೂಡಲಗಿ ಬಿ.ಪಿ.ಇಡಿ ಕಾಲೇಜಿಗೆ ಉತ್ತಮ ಫಲಿತಾಂಶ
ಮೂಡಲಗಿ: ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯದ 2021-22ನೇ ಸಾಲಿನ ಬಿ.ಪಿಇಡಿ ಅಚಿತಿಮ ಮತ್ತು ಎರಡನೇ ಸೆಮಿಸ್ಟರ್‍ದಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡಿದೆ.
ನಾಲ್ಕನೇ ಅಂತಿಮ ಸೆಮಿಸ್ಟರ್‍ದಲ್ಲಿ
ಬಾಹುಬಲಿ ಕಡಹಟ್ಟಿ ಶೇ.85.08 ಅಂಕಗಳನ್ನು ಪಡೆದು ಮಹಾವಿದ್ಯಾಲಯಕ್ಕೆ ಪ್ರಥಮ,
ಶಿವಬಸು ಮಿರ್ಜಿ ಶೇ. 85.04 ಅಂಕಗಳನ್ನು ಪಡೆದುಕೊಂಡು ದ್ವಿತೀಯ
ರಂಗವ್ವ ಪಾಟೀಲ ಶೇ. 85.01 ಅಂಕ ಪಡೆದುಕೊಂಡು ತೃತೀಯ ಸ್ಥಾನ ಪಡೆದುಕೊಂಡಿರುವರು.
ದ್ವಿತೀಯ ಸೆಮಿಸ್ಟರ್ ಫಲಿತಾಂಶ:
ಸೌರಭ ಪೂಜಾರಿ ಶೇ. 84.57 (ಪ್ರಥಮ),
ಲಲಿತಾ ಹಗರಗಿ ಶೇ. 84.43 (ದ್ವಿತೀಯ)
ಶ್ರೀದೇವಿ ಕುರಣಿ ಶೇ. 83.86 (ತೃತೀಯ) ಸ್ಥಾನವನ್ನು ಪಡೆದುಕೊಂಡಿರುವರು.
ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಉಪಾಧ್ಯಕ್ಷ ಎಸ್.ಆರ್. ಸೋನವಾಲಕರ, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಡಾ. ಎಂ.ಕೆ. ಕಂಕಣವಾಡಿ, ಸಿಬ್ಬಂದಿಯವರು ಅಭಿನಂದಿಸಿದ್ದಾರೆ.