30ಕ್ಕೆ ಜಿಲ್ಲಾ ಮಟ್ಟದ ಕಬ್ಬು, ಅರಿಷಿನ್, ಸೋಯಾಬಿನ್ ಕ್ಷೇತ್ರೋತ್ಸವ
ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಪ್ರಗತಿಪರ ರೈತ ಬಸವರಾಜ ಬಾಳಪ್ಪ ಬೆಳಕೂಡ ಅವರ ತೋಟದಲ್ಲಿ ಬೆಂಗಳೂರಿನ ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಬೆಳಗಾವಿ ಜಿಲ್ಲಾ ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಸೆ. 30ರಂದು ಬೆಳಿಗ್ಗೆ 10ರಿಂದ ಸಂಜೆ 4ರ ವರೆಗೆ ಕಬ್ಬು, ಅರಿಷಿನ ಹಾಗೂ ಸೋಯಾಬಿನ ಬೆಳೆಗಳ ಜಿಲ್ಲಾ ಮಟ್ಟದ ಕ್ಷೇತ್ರೋತ್ಸವ ಮತ್ತು ಕಿಸಾನಗೋಷ್ಠಿಯನ್ನು ಆಯೋಜಿಸಿರುವರು.
ಅರಭಾವಿಯ ಕಿತ್ತೂರ ರಾಣಿ ಚನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಎಂ.ಜಿ. ಕೆರುಟಗಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಬೆಳಗಾವಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಟಿ.ಎಸ್. ಮೋರೆ ಅಧ್ಯಕ್ಷತೆವಹಿಸುವರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಾಳಪ್ಪ ಬಿ. ಬೆಳಕೂಡ, ಬೆಳಗಾವಿಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಚಿಕ್ಕೋಡಿಯ ಕೃಷಿ ಇಲಾಖೆಯ ಉಪನಿರ್ದೇಶಕ ಎಲ್.ಐ. ರೂಡಗಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಹಾಂತೇಶ ಮುರಗೋಡ ಭಾಗವಹಿಸುವರು.
ಉಪನ್ಯಾಸಗಳು: ತುಕ್ಕಾನಟ್ಟಿ ಬಡ್ರ್ಸ ಸಂಸ್ಥೆಯ ಐಸಿಎಆರ್ ಹಿರಿಯ ವಿಜ್ಞಾನಿ ಡಾ. ಡಿ.ಎ. ಮೇತ್ರೆ, ಅರಭಾವಿ ಕಿತ್ತೂರ ರಾಣಿ ಚನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯದ ಡಾ. ಕಾಂತರಾಜ ವಿ, ಬೆಲ್ಲದ ಬಾಗೇವಾಡಿಯ ಸುಧೀರ ಕತ್ತಿ, ಗೋಕಾಕದ ನಿತೀನಕುಮಾರ ಬಿ. ಪಾಟೀಲ, ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಎಸ್.ಎಂ. ಹುಕ್ಕೇರಿ, ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ವಿ.ಟಿ. ಕುಲಕರ್ಣಿ, ಸಮೀರವಾಡಿಯ ಆರ್.ವಿ. ಕುಲಕರ್ಣಿ, ಗೋಕಾಕದ ಸಿ.ಬಿ. ಪಾಶ್ಚಾಪುರ ಇವರು ಕಬ್ಬು, ಅರಿಷಿನ್ ಹಾಗೂ ಸೋಯಾಬಿನ್ ಬೆಳೆಗಳ ಬಗ್ಗೆ ಉಪನ್ಯಾಸ ಹಾಗೂ ರೈತರೊಂದಿಗೆ ಚರ್ಚೆ ಮಾಡುವರು.
ತಾಲ್ಲೂಕಾ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಂ. ನದಾಫ, ತೋಟಗಾರಿಕೆ ಸಹಾಯಕ ನಿರ್ದೇಶಕ ಎಂ.ಎಲ್. ಜನಮಟ್ಟಿ, ಕೃಷಿ ಅಧಿಕಾರಿ ರುಬೀನಾ ಖಾಜಾ, ಗೋಕಾಕ ತಾಲ್ಲೂಕು ಕೃಷಿಕ ಸಮಾಜ ಅಧ್ಯಕ್ಷ ಅಶೋಕ ಗದಾಡಿ ಹಾಗೂ ಕೃಷಿ ವಿಜ್ಞಾನಿಗಳು, ಸಾಧಕ ಕೃಷಿಕರು ಭಾಗವಹಿಸಲಿದ್ದಾರೆ.
ಬೆಳಗಾವಿ ಜಿಲ್ಲೆಯಾದ್ಯಂತ ಬರುವ ರೈತರಿಗೆ ಬೆಳಿಗ್ಗಿನ ಉಪಹಾರ, ಮಧ್ಯಾಹ್ನ ಊಟ, ಸಂಜೆ ಅಲ್ಪೋಪಹಾರದ ವ್ಯವಸ್ಥೆ ಇರುವುದು.
ದಾಖಲೆ ಇಳುವರಿ: ಪ್ರಸಕ್ತ ಸಾಲಿನಲ್ಲಿ ಪ್ರಗತಿಪರ ರೈತರಾದ ಬೆಳಕೂಡ ಮತ್ತು ಕಡಾಡಿ ಬಂಧುಗಳು ಪ್ರತಿ ಎಕರೆಗೆ 125 ಟನ್ ಕಬ್ಬು, ಪ್ರತಿ ಎಕರೆಗೆ ಅರಿಷಿನ್ 50 ಕ್ವಿಂಟಲ್ ಹಾಗೂ ಪ್ರತಿ ಎಕರೆಗೆ 18 ಕ್ವಿಂಟಲ್ ಸೋಯಾಬಿನ್ ಬೆಳೆದಿದ್ದು ಅದರ ಪ್ರಾತ್ಯಕ್ಷತೆ ಇರುವುದು.
ಬೆಳಗಾವಿ ಜಿಲ್ಲೆಯ ರೈತರು ಕ್ಷೇತ್ರೋತ್ಸವದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕ್ಷೇತ್ರೋತ್ಸವದ ಆತಿಥ್ಯವಹಿಸಿರುವ ಬಸವರಾಜ ಬಾಳಪ್ಪ ಬೆಳಕೂಡ ತಿಳಿಸಿದ್ದಾರೆ.