Breaking News
Home / Recent Posts / ಕುಲಗೋಡ ಉಪ ರೈತ ಸಂಪರ್ಕ ಕೇಂದ್ರ ಉದ್ಘಾಟಿಸುತ್ತಿರುವ ಸರ್ವೋತ್ತಮ ಜಾರಕಿಹೊಳಿ

ಕುಲಗೋಡ ಉಪ ರೈತ ಸಂಪರ್ಕ ಕೇಂದ್ರ ಉದ್ಘಾಟಿಸುತ್ತಿರುವ ಸರ್ವೋತ್ತಮ ಜಾರಕಿಹೊಳಿ

Spread the love

ಕುಲಗೋಡ: ಕುಲಗೋಡ ಸುತ್ತಮುತ್ತಲಿನ ರೈತರ ಅನಕೂಲಕ್ಕಾಗಿ ಉಪ ಕೇಂದ್ರ ತೆರೆಯಲಾಗಿದೆ. ರೈತರು ಆಧುನಿಕ ಕೇಷಿ ಯಂತ್ರೋಪಕರಣಗಳ ಉಪಯೋಗಿಸಿ ಉತ್ತಮ ಇಳುವರಿ ಪಡೆಯಲು ಮುಂದಾಗಿ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಅವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಅರಭಾವಿಯ ಉಪ ಕೇಂದ್ರ ಕುಲಗೋಡ ಉದ್ಘಾಟಿಸಿ ಮಾತನಾಡಿ ರೈತರ ಕೃಷಿ ಇಲಾಖೆಯ ಯೋಜನೆ ಮತ್ತು ರಸಗೊಬ್ಬರ, ಬೀಜಕ್ಕಾಗಿ ಅರಭಾವಿಯ ಕೇಂದ್ರಕ್ಕೆ ಅಲೇದಾಡುವದನ್ನು ತಪ್ಪಿಸಲು ಮಾನ್ಯ ಬಾಲಚಂದ್ರ ಜಾರಕಿಹೊಳಿ ಇವರ ಮಾರ್ಗದರ್ಶನದಂತೆ ಇಂದು ಕೇಂದ್ರ ಉದ್ಘಾಟನೆಯಾಗಿದೆ. ರೈತರು ಇಲಾಖೆಯ ಲಾಭ ಪಡೆಯಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕರು ಎಮ್.ಎಮ್. ನದಾಫ್  ಮಾತನಾಡಿ ಮೂಡಲಗಿ ತಾಲೂಕು ಹೊಸದಾಗಿ ರಚನೆಯಾಗಿರುವದರಿಂದ ಕೌಜಲಗಿ ಹೊಬಳಿಯ 8 ಗ್ರಾ.ಪಂ ಗಳು ಮೂಡಲಗಿ ತಾಲೂಕಿನ ಅರಭಾವಿ ಹೊಬಳಿಗೆ ಸೇರಿರುವದರಿಂದ ಅರಭಾವಿ ಕೇಂದ್ರ ಕುಲಗೋಡ ಸುತ್ತಲಿನ ಸುಮಾರ 16 ಗ್ರಾಮಗಳಿಗೆ 30 ಕಿ.ಮೀ ದೂರ ಇರುವದರಿಂದ ರೈತರ ಹಿತಕ್ಕಾಗಿ ಉಪ ಕೇಂದ್ರ ತರೆಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ಟಿ.ಎ.ಪಿ.ಸಿ.ಎಮ್.ಎಸ್ ಅಧ್ಯಕ್ಷರು ಅಶೋಕ ನಾಯಿಕ. ಶಾಸಕರ ಆಪ್ತ ಕಾರ್ಯದರ್ಶಿ ನಿಂಗಪ್ಪ ಕುರಬೇಟ. ಜಿಪಂ ಸದಸ್ಯ ಗೋವಿಂದ ಕೊಪ್ಪದ. ಬಸನಗೌಡ ಪಾಟೀಲ್. ಸುಭಾಸ ವಂಟಗೋಡಿ. ಅಜ್ಜಪ್ಪ ಗಿರಡ್ಡಿ. ಭೀಮಶಿ ಪೂಜೇರಿ. ಗ್ರಾಪಂ ಅಧ್ಯಕ್ಷೆ ವಿಮಲಾ ಸಸಾಲಟ್ಟಿ. ಪ್ರಶಾಂತ ವಂಟಗೋಡಿ. ತಮ್ಮಣ್ಣಾ ದೇವರ. ಈರಣ್ಣಾ ಸಸಾಲಟ್ಟಿ. ಹಾಗೂ ರೈತ ಸಂಘದ ಸದಸ್ಯರು. ಗ್ರಾಪಂ ಸದಸ್ಯರು. ಗ್ರಾಮಸ್ಥರು ಇದ್ದರು.
ರವಿರಾಜ ತಿಪ್ಪಿಮನಿ ನಿರೂಪಿಸಿ ವಿನೋದ ಬಾಗಿಮನಿ ಸ್ವಾಗತಿಸಿದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ