ನಿಧನ ವಾರ್ತೆ
ಬೆಟಗೇರಿ ಗ್ರಾಮದ ಆಧ್ಯಾತ್ಮಜೀವಿ ಪುಂಡಲೀಕಪ್ಪ ಪಾರ್ವತೇರ ಇನ್ನಿಲ್ಲಾ.!
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಲಿಂಗಾಯತ ಸಮಾಜದ ಹಿರಿಯ ನಾಗರಿಕ, ಸಾಮಾಜಿಕ, ಶೈಕ್ಷಣಿಕ ವಲಯದ ಚಿಂತಕ ಹಾಗೂ ಆಧ್ಯಾತ್ಮಜೀವಿ, ಶರಣರಾದ ಪುಂಡಲೀಕಪ್ಪ ರತ್ನಪ್ಪ ಪಾರ್ವತೇರ (71) ಇವರು ನ.28ರಂದು ನಿಧನರಾದರು. ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಮೊಮ್ಮಕ್ಕಳು, ಅಳಿಯಂದಿರು, ಸಹೋದರರು ಸೇರಿದಂತೆ ಅಪಾರ ಬಂಧು-ಬಳಗವನ್ನಗಲಿದ್ದಾರೆ.
ಸಂತಾಪ: ಇಂಚಲದ ಡಾ..ಶಿವಾನಂದ ಭಾರತಿ ಮಹಾಸ್ವಾಮೀಜಿ, ನಾಡಿನ ವಿವಿಧ ಮಠ-ಮಾನ್ಯಗಳ ಶ್ರೀಗಳು, ಹರ,ಗುರು, ಚರಮೂರ್ತಿಗಳು, ಸಂತ-ಶರಣರು ಸೇರಿದಂತೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು ರಾಜಕೀಯ ಮುಖಂಡರು, ಬೆಟಗೇರಿ ಗ್ರಾಮದ ಆಧ್ಯಾತ್ಮಜೀವಿ, ಶರಣರಾದ ಪುಂಡಲೀಕಪ್ಪ ಪಾರ್ವತೇರ ನಿಧನಕ್ಕೆ ತೀವ್ರ ಸಂತಾಪ ಶೋಕ ವ್ಯಕ್ತಪಡಿಸಿದ್ದಾರೆ.
IN MUDALGI Latest Kannada News