Breaking News
Home / Recent Posts / ಕೌಜಲಗಿ- ಮನ್ನಿಕೇರಿ ನಡುವಿನ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ

ಕೌಜಲಗಿ- ಮನ್ನಿಕೇರಿ ನಡುವಿನ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ

Spread the love

ಗೋಕಾಕ್- ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಕೌಜಲಗಿ ಭಾಗವು ಸಮೃದ್ಧಿಯ ಬೀಡಾಗಿ ಪರಿವರ್ತನೆಯಾಗುತ್ತಿದೆ. ಜೊತೆಗೆ ಹಸಿರುಮಯವಾಗಿ ಕಂಗೋಳಿಸುತ್ತಿದೆ ಎಂದು ಯುವ ಮುಖಂಡ ಸರ್ವೋತ್ತಮ ಭೀಮಶಿ ಜಾರಕಿಹೊಳಿ ತಿಳಿಸಿದರು.
ಬುಧವಾರದಂದು ತಾಲೂಕಿನ ಕೌಜಲಗಿ- ಮನ್ನಿಕೇರಿ ನಡುವಿನ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕ್ಷೇತ್ರದ ಸಮಗ್ರ ಅಭಿವೃದ್ಧಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾಣಿಕೆ ಅಪಾರವಾಗಿದೆ ಎಂದು ಹೇಳಿದರು.
ಕೌಜಲಗಿ- ಮನ್ನಿಕೇರಿ ರಸ್ತೆ ಸುಧಾರಣೆಗೆ ೮ ಕೋ. ರೂ ಗಳ ಅನುದಾನವನ್ನು ಮಂಜೂರು ಮಾಡಿಸಿದ್ದಾರೆ. ಜನವರಿ ತಿಂಗಳ ಅಂತ್ಯದಲ್ಲಿ ಈ ಕಾಮಗಾರಿ ಮುಗಿಯಲಿದೆ. ಇದರಿಂದ ಉಭಯ ಗ್ರಾಮಗಳ ಮಧ್ಯ ರಸ್ತೆ ಸಂಚಾರ ಯಾವುದೇ ಅಡಚಣೆ ಇಲ್ಲದೇ ಸಾಗಲಿದೆ. ಉತ್ತಮ ಗುಣಮಟ್ಟದ ರಸ್ತೆ
ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಮನ್ನಿಕೇರಿ ಗ್ರಾ. ಪಂ. ಅಧ್ಯಕ್ಷ ಬಾಳಪ್ಪ ಗೌಡರ ಹಾಗೂ ಕೌಜಲಗಿ ಗ್ರಾ.ಪಂ. ಅಧ್ಯಕ್ಷೆ ಜೈಬನಬೀ ನಗಾರ್ಚಿ ಅವರು ಕೌಜಲಗಿ- ಮನ್ನಿಕೇರಿ ನಡುವಿನ ೫ ಕಿ.ಮೀ. ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ವಿಜಯ ಸಿದ್ಧೇಶ್ವರ ಸ್ವಾಮಿಗಳು, ಶಾಸಕರ ಆಪ್ತ ಸಹಾಯಕ ಸಿ.ಪಿ.ಯಕ್ಸಂಬಿ, ಮನ್ನಿಕೇರಿ ಗ್ರಾ.ಪಂ.ಮಾಜಿ ಅಧ್ಯಕ್ಷ ಮುದುಕಪ್ಪ ಗೋಡಿ, ಪಾಂಡುರಂಗ ಪಾಟೀಲ್, ಸುಭಾಸ ಕೌಜಲಗಿ, ಪುಂಡಲೀಕ ದಳವಾಯಿ, ಮಹಾಂತೇಶ ಮೆಟ್ಟಿನ, ಮುತ್ತಪ್ಪ ನಾವಿ, ಎರಡೂ ಗ್ರಾಮಗಳ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.
.


Spread the love

About inmudalgi

Check Also

ಆರ್.ಡಿ.ಎಸ್. ಪಿಯು ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುವ ಸಮಾರಂಭ

Spread the love  ಮೂಡಲಗಿ : ದಿನಾಂಕ 19-01-2026 ರಂದು ಇಲ್ಲಿನ ಶೈಕ್ಷಣಿಕ ಸಂಸ್ಥೆಯಾದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ