Breaking News
Home / Recent Posts / ಅರಭಾವಿ ಕೃಷಿ ಸಂಶೋಧನಾ ಕೇಂದ್ರದ ಶತಮಾನೋತ್ಸವ

ಅರಭಾವಿ ಕೃಷಿ ಸಂಶೋಧನಾ ಕೇಂದ್ರದ ಶತಮಾನೋತ್ಸವ

Spread the love

ಮೂಡಲಗಿ: ದೇಶದಲ್ಲಿ ಎರಡು ಸಂಸ್ಕøತಿಗಳಿಗೆ, ಜನ ಗೌರವ ನೀಡುತ್ತಾರೆ. ಒಂದು ಋಷಿ ಸಂಸ್ಕøತಿ ಇನ್ನೊಂದು ಕೃಷಿ ಸಂಸ್ಕøತಿ. ಋಷಿ ಜನರ ಒಳತಿಗಾಗಿ ಭೋದನೆ ಮಾಡಿದರೆ ಕೃಷಿ ಜನರ ಹೊಟ್ಟೆ ತುಂಬುವ ಕಾಯಕ ಮಾಡುತ್ತಿದೆ. ಅಂತಹ ಸಂಸ್ಕøತಿಗಳನ್ನು ಭಾರತದಲ್ಲಿ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.


ಮಂಗಳವಾರ ಜ.24 ರಂದು ಅರಭಾವಿ ಕೃಷಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ದೇಶವು ಸ್ವಾತಂತ್ರದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪ್ರಧಾನ ನರೇಂದ್ರ ಮೋದಿ ಆತ್ಮನಿರ್ಭರ ಭಾರತದ ಕರೆ ನೀಡಿದ್ದಾರೆ.

ದೇಶ ಆತ್ಮನಿರ್ಭರವಾಗಬೇಕಾದರೆ ಶೇ 48% ರಷ್ಟು ಜನ ತೊಡಗಿರುವ ಕೃಷಿ ಕ್ಷೇತ್ರ ಕೂಡ ಆತ್ಮನಿರ್ಭರವಾಗುವ ಅಗತ್ಯತೆ ಇದೆ ಎಂದರು.
ಕಳೆದ 100 ವರ್ಷಗಳಿಂದ ಅರಭಾವಿ ಕೃಷಿ ಸಂಶೋಧನಾ ಕೇಂದ್ರವು ರೈತರ ಬದುಕಿನ ಬದಲಾವಣೆಗೆ ಪ್ರಯತ್ನಿಸಿದೆ ಎಂದು ಕೃಷಿ ಸಂಶೋಧನಾ ಕೇಂದ್ರಕ್ಕೆ ಶುಭ ಹಾರೈಸಿದರು. ರೈತರ ಆದಾಯ ದ್ವಿಗುಣ ಮಾಡುವ ಪ್ರಧಾನಿಯವರ ಕನಸನ್ನು ನನಸು ಮಾಡಲು ಕೃಷಿ ವಿಶ್ವವಿಧ್ಯಾನಿಲಯಗಳು, ಕೃಷಿ ಸಂಶೋಧನಾ ಕೇಂದ್ರಗಳು, ಕೃಷಿ ವಿಜ್ಞಾನ ಕೇಂದ್ರಗಳು, ಎಲ್ಲ ವಿಜ್ಞಾನಿಗಳು ಸೇರಿ ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸುವ ಅಗತ್ಯತೆ ಇದೆ ಎಂದು ಹೇಳಿದರು.
ಕೃಷಿ ವಿಶ್ವ ವಿದ್ಯಾಲಯ ಢಾರವಾಡದ ಉಪಕುಲಪತಿ ಡಾ. ಪಿ.ಎಲ್.ಪಾಟೀಲ, ಮಧ್ಯಪಾನ ಸಯಂ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ, ಕೃಷಿ ವಿಶ್ವ ವಿದ್ಯಾಲಯ ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಎಲ್.ಎಸ್. ಅಜಗಣ್ಣವರ, ಶ್ರೀನಿವಾಸ ಕೋಟ್ಯಾನ್, ಮಲ್ಲೇಶ ಪಿ, ವಾಯ್.ಎನ್ ಪಾಟೀಲ, ಡಾ. ಬಿ.ಡಿ. ಬಿರಾದಾರ, ಡಾ ಅಶೋಕ ಸಜ್ಜನ, ಡಾ. ಎಚ್.ಬಿ. ಬಬಲಾದ, ಶಿವಾನಂದ ಕರಾಳೆ ಬಿ.ಬಿ. ಬೆಳಕೂಡ ಶಂಕರ ಬಿಲಕುಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ