*ಕ್ರಿಕೆಟ್ ಆಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ*
ಮೂಡಲಗಿ: ನಾಗನೂರ ಪ್ರಿಮಿಯರ್ ಲೀಗ್ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕ್ರಿಕೆಟ್ ಆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮೊದಲಿಂದಲೂ ಕ್ರಿಕೆಟ್ ಬಗ್ಗೆ ಅಪಾರ ಅಭಿಮಾನವನ್ನು ಜೊತೆಗೆ ಕ್ರಿಕೆಟ್ ಆಟಗಾರರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರು ಅಭಿಮಾನಿಗಳ ಒತ್ತಾಯದ ಮೇರೆಗೆ ಬ್ಯಾಟಿಂಗ್ ಮಾಡುವ ಮೂಲಕ ನೆರೆದ ಸಭಿಕರನ್ನು ರಂಜಿಸಿದರು.
ಹಿರಿಯ ಸಹಕಾರಿ ಬಿ.ಆರ್. ಪಾಟೀಲ ಹಾಗೂ ಮಾಜಿ ಸಚಿವ ಆರ್. ಎಂ. ಪಾಟೀಲ್ ಸೇರಿದಂತೆ ನಾಗನೂರು ಪಟ್ಡಣದ ಅನೇಕ ಮುಖಂಡರು ಕ್ರಿಕೆಟ್ ಆಟಕ್ಕೆ ಸಾಕ್ಷಿಯಾದರು.
IN MUDALGI Latest Kannada News