Breaking News
Home / Recent Posts / ಲಕ್ಷ್ಮೀದೇವಿ ಸಕಲ ಭಕ್ತರ ಕೋರಿಕೆಯನ್ನು ಈಡೇರಿಸುವ ಶಕ್ತಿ ದೇವಿ – ಬಾಲಚಂದ್ರ ಜಾರಕಿಹೊಳಿ

ಲಕ್ಷ್ಮೀದೇವಿ ಸಕಲ ಭಕ್ತರ ಕೋರಿಕೆಯನ್ನು ಈಡೇರಿಸುವ ಶಕ್ತಿ ದೇವಿ – ಬಾಲಚಂದ್ರ ಜಾರಕಿಹೊಳಿ

Spread the love

ಮೂಡಲಗಿ (ಧರ್ಮಟ್ಟಿ) : ಈ ಭಾಗದಲ್ಲಿ ಧರ್ಮಟ್ಟಿ ಲಕ್ಷ್ಮೀದೇವಿ ದೇವಸ್ಥಾನವು ಸಕಲ ಭಕ್ತರ ಕೋರಿಕೆಯನ್ನು ಈಡೇರಿಸುವ ಶಕ್ತಿ ದೇವಿ ಎಂದು ಕೆಎಂಎಫ್ ಅಧ್ಯಕ್ಷ, ಮಾಜಿ ಸಚಿವ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.


ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದ ಐತಿಹಾಸಿಕ ಲಕ್ಷ್ಮೀದೇವಿಯ ದರ್ಶನ ಪಡೆದು ಮಾತನಾಡಿದ ಅವರು, ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದಾಗಿನಿಂದ ಈ ದೇವಿಯ ದರ್ಶನ ಪಡೆಯುತ್ತ ನಾನು ಕೃತಾರ್ಥನಾಗಿದ್ದೇನೆ ಎಂದು ಅವರು ತಿಳಿಸಿದರು.
ಗ್ರಾಮದ ಕುಂಬಾರ ಓಣಿಯಲ್ಲಿರುವ ಸಿದ್ಧಾರೂಢ ಮಠದ ಜೀರ್ಣೋದ್ಧಾರ ಹಾಗೂ ಎಸ್‍ಸಿ ಕಾಲನಿಯಲ್ಲಿರುವ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ತಲಾ 10 ಲಕ್ಷ ರೂ.ಗಳನ್ನು ನೀಡುವುದಾಗಿ ವಾಗ್ದಾನ ಮಾಡಿದ ಅವರು, ಗ್ರಾಮಸ್ಥರ ಒಗ್ಗಟ್ಟಿನಿಂದ ಗ್ರಾಮವು ಅಭಿವೃದ್ಧಿಯಾಗುತ್ತಿದ್ದು, ಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಮಾತ್ರ ಗ್ರಾಮಾಭಿವೃದ್ಧಿ ಸಾಧ್ಯವೆಂದು ಅವರು ಹೇಳಿದರು.
ಪ್ರಭಾಶುಗರ ನಿರ್ದೇಶಕ ಶಿದ್ಲಿಂಗಪ್ಪ ಕಂಬಳಿ, ಹಳ್ಳೂರ ಗ್ರಾಮದ ಮುಖಂಡ ಹನಮಂತ ತೇರದಾಳ, ತಾಪಂ ಮಾಜಿ ಸದಸ್ಯ ಬಿ.ಬಿ. ಪೂಜೇರಿ, ಧರ್ಮಟ್ಟಿ ಗ್ರಾಪಂ ಅಧ್ಯಕ್ಷೆ ಮಕ್ತುಮಾ ಜಾತಗಾರ, ಉಪಾಧ್ಯಕ್ಷ ಕೆಂಚಪ್ಪ ತಿಗಡಿ, ಪ್ರಮುಖರಾದ ಪರಶುರಾಮ ಸನದಿ, ಶ್ರೀಕಾಂತ ಮುತಾಲಿಕದೇಸಾಯಿ, ಉದ್ದಪ್ಪ ಬಬಲಿ, ಮಹಾದೇವ ಬಡ್ಡಿ, ಲಕ್ಷ್ಮಣ ತೆಳಗಡೆ, ಲಗಮಣ್ಣಾ ಕುಟ್ರಿ, ಲಕ್ಕಪ್ಪ ತೆಳಗಡೆ, ಷಣ್ಮುಕಪ್ಪ ಕುಂಬಾರ, ಶಿವರುದ್ರಪ್ಪ ಕುಂಬಾರ, ಲಕ್ಷ್ಮಣ ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ಬಸಪ್ಪ ಕುಂಬಾರ, ಮಹಾದೇವ ಕುಂಬಾರ, ಮಂಜುನಾಥ ಕುಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About inmudalgi

Check Also

ಸಾಹಿತಿ ಚಿದಾನಂದ ಹೂಗಾರ ರವರ ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ

Spread the loveಮೂಡಲಗಿಯ ಚೈತನ್ಯ ಸೊಸೈಟಿಯಲ್ಲಿ ಮೂಡಲಗಿ ತಾಲ್ಲೂಕು ಚುಸಾಪ ಮತ್ತು ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ ಚಿದಾನಂದ ಹೂಗಾರ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ