Breaking News
Home / Recent Posts / ಸಣ್ಣ -ಸಣ್ಣ ಸಮಾಜಗಳು ಒಂದಾಗಿ, ಒಗ್ಗಟ್ಟಾದರೇ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ-ಬಾಲಚಂದ್ರ ಜಾರಕಿಹೊಳಿ

ಸಣ್ಣ -ಸಣ್ಣ ಸಮಾಜಗಳು ಒಂದಾಗಿ, ಒಗ್ಗಟ್ಟಾದರೇ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ-ಬಾಲಚಂದ್ರ ಜಾರಕಿಹೊಳಿ

Spread the love

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ 2 ಕ್ವಿಂಟಲ್ ಬೃಹತ್ ಸೇಬು ಹಣ್ಣಿನ ಹಾರ ಹಾಕಿ ಸ್ವಾಗತಿಸಿಕೊಂಡ ವಿಶ್ವಕರ್ಮ ಸಮುದಾಯ.

ಸಣ್ಣ -ಸಣ್ಣ ಸಮಾಜಗಳು ಒಂದಾಗಿ, ಒಗ್ಗಟ್ಟಾದರೇ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ-ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಕುಶಲಕರ್ಮಿಗಳು ಮತ್ತು ವಾಸ್ತುಶಿಲ್ಪಿಗಳ ಪ್ರಧಾನ ದೇವರಾಗಿರುವ ವಿಶ್ವಕರ್ಮನು ಜಗತ್ತಿನ ಸೃಷ್ಠಿಕರ್ತನೆಂದು ಶಾಸಕ, ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.


ಮಂಗಳವಾರದಂದು ಪಟ್ಟಣದ ಬಸವ ಮಂಟಪದಲ್ಲಿ ಜರುಗಿದ ವಿರಾಟ ವಿಶ್ವಕರ್ಮ ಸಮಾಜದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಸೃಷ್ಟಿಯ ನಿರ್ಮಾಣದಲ್ಲಿ ವಿಶ್ವಕರ್ಮನ ಪಾತ್ರ ಮಹತ್ವರವಾಗಿದೆ ಎಂದು ತಿಳಿಸಿದರು.
ವಿಶ್ವಕರ್ಮನು ಬ್ರಹ್ಮಾಂಡದ ಪ್ರಧಾನ ವಾಸ್ತುಶಿಲ್ಪಿಯಾಗಿದ್ದಾನೆ. ಧರ್ಮ, ಸಂಸ್ಕøತಿ, ಪರಂಪರೆ ಉಳಿಯಲು ವಿಶ್ವಕರ್ಮರ ಕೊಡುಗೆ ಅನನ್ಯವಾಗಿದೆ. ವಿಶ್ವಕರ್ಮನು ಈ ಭೂಮಿಯಲ್ಲಿ ಪ್ರಥಮವಾಗಿ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡ ವಿಶ್ವದ ಮೊದಲ ವ್ಯಕ್ತಿ ಎಂದು ಬಣ್ಣಿಸಿದ ಅವರು, ಭೂಮಿ, ಬೆಳಕು, ಗಾಳಿ, ಜಲ, ಮತ್ತು ಆಕಾಶ ತ್ರಿಮೂರ್ತಿಗಳು ಯಾವುದು ಇಲ್ಲದಿದ್ದಾಗ ತನ್ನನ್ನು ತನ್ನಿಂದಲೇ ಸೃಷ್ಠಿಸಿಕೊಂಡನು ಎಂದು ವೇದ-ಪುರಾಣಗಳು ಹೇಳುತ್ತವೆ ಎಂದು ಹೇಳಿದರು.
ಹಿಂದುಳಿದ ವರ್ಗದಲ್ಲಿ ಸಣ್ಣ ಜನಾಂಗವಾಗಿರುವ ವಿಶ್ವಕರ್ಮ ಜನಾಂಗದವರು ಸಂಘಟಿತರಾಗಿ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು.

ಸಾಮಾಜಿಕ ನ್ಯಾಯದ ತತ್ವದಡಿ ಅದು ಸಣ್ಣ ಸಮಾಜವಿರಲಿ, ದೊಡ್ಡ ಸಮಾಜವಿರಲಿ ಎಲ್ಲ ಸಮಾಜಗಳಿಗೆ ಸಾಮಾಜಿಕ ನ್ಯಾಯವನ್ನು ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಅದರಂತೆ ಸಣ್ಣ ಸಮಾಜಗಳು ಸಹ ಮುಖ್ಯವಾಹಿನಿಗೆ ಬರಬೇಕು. ಒಗ್ಗಟ್ಟಿನಿಂದ ಸಂಘಟನೆ ನಡೆಯಬೇಕು. ಮುಂದಿನ ದಿನಗಳಲ್ಲಿ ಸಣ್ಣ-ಸಣ್ಣ ಸಮಾಜಗಳು ಒಂದಾಗಬೇಕು. ತಮ್ಮಗಳ ಶಕ್ತಿಯನ್ನು ತೋರಿಸಿಕೊಡಬೇಕು. ಒಗ್ಗಟ್ಟಾದರೇ ಮಾತ್ರ ರಾಜಕೀಯ ಅಧಿಕಾರ ಪಡೆಯಲಿಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿಶ್ವಕರ್ಮ ಸಮಾಜ ಬಾಂಧವರು ನಿವೇಶನವನ್ನು ಗುರುತಿಸಿಕೊಟ್ಟರೇ ಸರ್ಕಾರದಿಂದ ಸಭಾ ಭವನ ನಿರ್ಮಿಸಲು ಸಿದ್ದನಿದ್ದೇನೆ. ಅಂದಾಜು 50ಲಕ್ಷ ರೂಗಳ ತನಕ ಅನುದಾನವನ್ನು ಈ ಸಮಾಜಕ್ಕೆ ನೆರವು ನೀಡುತ್ತೇನೆ. ಮೂಡಲಗಿಯ ಕಾಳಿಕಾದೇವಿ ದೇವಸ್ಥಾನದ ಅಭಿವೃದ್ದಿಗೆ 20ಲಕ್ಷ ರೂಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿಯೂ ಸಮಾಜಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶಿರಸಂಗಿ ವಿಶ್ವಕರ್ಮ ವಿಕಾಸ ಸಂಸ್ಥೆಯ ಅಧ್ಯಕ್ಷ ಪ್ರೋ.ಪಿ.ಬಿ.ಬಡಿಗೇರ ಮಾತನಾಡಿ, ವ್ಯಕ್ತಿಯಲ್ಲಿ ಪರೋಪಕಾರಿ, ಜನಸಾಮಾನ್ಯರ ನಾಡಿ ಮಿಡಿತ ಅರ್ಥ ಮಾಡಿಕೊಳ್ಳುವ ಸಂವೇಧನಾಶೀಲತೆ ಇರುವಂತಹ ಜನಪ್ರೀಯ ನೇತಾರರೇ ಬಾಲಚಂದ್ರ ಜಾರಕಿಹೊಳಿ ಅವರು. ನಮ್ಮ ಸಮಾಜವನ್ನು ಒಗ್ಗೂಡಿಸಿದ, ಸಂಘಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ನಮ್ಮ ಜನಾಂಗದವರ ಬುದ್ದಿವಂತಿಕೆಯು ನಮಗೆ ವರದಾನವಾಗಬೇಕಿತ್ತು. ಆದರೆ ನಮ್ಮಲ್ಲಿರುವ ಅಹಂಕಾರವೇ ನಮಗೆ ಶಾಪವಾಗಿ ಪರಿಣಮಿಸಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು, ನಮ್ಮ ವಿಶ್ವಕರ್ಮ ಸಮಾಜವನ್ನು ಗುರುತಿಸಿವ ಕಾರ್ಯವನ್ನು ಮಾಡುತ್ತಿದ್ದಾರೆ. ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ನಮ್ಮ ಜನಾಂಗದ ಅಭಿವೃದ್ದಿಗೆ ಶ್ರಮಿಸುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರ ಬೆನ್ನಿಗೆ ಇಡೀ ಸಮಾಜವೇ ನಿಲ್ಲಬೇಕು. ಅವರ ದಾಖಲೆಯ ವಿಜಯಕ್ಕೆ ನಾವುಗಳು ಮುನ್ನುಡಿ ಬರೆಯಬೇಕೆಂದು ಸಮಾಜ ಬಾಂಧವರಲ್ಲಿ ಕೋರಿದರು.
ದಿವ್ಯ ಸಾನಿಧ್ಯ ಚಿಕ್ಕುಂಬಿಯ ಅಭಿನವ ನಾಗಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಶಿರಸಂಗಿ ವಿಶ್ವಕರ್ಮ ವಿಕಾಸ ಸಂಸ್ಥೆಯ ಉಪಾಧ್ಯಕ್ಷ ಭಗವಂತ ಪತ್ತಾರ ವಹಿಸಿದ್ದರು.
ವೇದಿಕೆಯಲ್ಲಿ ಈಶ್ವರ ಬಡಿಗೇರ, ಶ್ರೀಕಾಂತ ಪತ್ತಾರ, ವೀರುಪಾಕ್ಷಿ ಪತ್ತಾರ, ವಂದನಾ ಸೋನಾರ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಮುಖಂಡ ಸಂತೋಷ ಸೋನವಾಲ್ಕರ, ಮಹಾದೇವ ಪತ್ತಾರ, ಈರಪ್ಪ ಬಡಿಗೇರ, ಡಿ.ಕೆ.ಬಡಿಗೇರ, ಪ್ರಕಾಶ ಪತ್ತಾರ, ರಾಮಚಂದ್ರ ಪತ್ತಾರ, ವಾಸುದೇವ ಬಡಿಗೇರ, ನಾಗಲಿಂಗ ಪೋತದಾರ, ಮೌನೇಶ ಬಡಿಗೇರ, ಡಾ|| ರಾಘವೇಂದ್ರ ಪತ್ತಾರ, ವಿರೇಂದ್ರ ಪತ್ತಾರ, ಮುರಳಿ ಬಡಿಗೇರ, ಮಲ್ಲಪ್ಪ ಬಡಿಗೇರ, ಶಿವರಾಜ ಪತ್ತಾರ, ಅನಂತ ಸತ್ತಿಗೇರಿ, ಚಿದಂಬರ ಪತ್ತಾರ ಉಪಸ್ಥಿತರಿದ್ದರು. ಗಜಾನನ ಪತ್ತಾರ ಪ್ರಾಸ್ಥಾವಿಕವಾಗಿ ಮಾತನಾಡಿದರು.
2 ಕ್ವಿಂಟಲ್ ಸೇಬು ಹಣ್ಣಿನ ಹಾರ: ಸಮಾವೇಶಕ್ಕೆ ಆಗಮಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ವಿಶ್ವಕರ್ಮ ಸಮಾಜ ಬಾಂಧವರು ಕಲ್ಮೇಶ್ವರ ವೃತ್ತದಲ್ಲಿ 2 ಕ್ವಿಂಟಲ್ ಸೇಬು ಹಣ್ಣಿನ ಹಾರವನ್ನು ಕ್ರೇನ್ ಸಹಾಯದಿಂದ ಹಾಕಿ ಅದ್ದೂರಿಯಾಗಿ ಬರಮಾಡಿಕೊಂಡರು. ಕುಂಭಮೇಳದೊಂದಿಗೆ ಭವ್ಯವಾದ ಮೆರವಣಿಗೆ ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸಿ ಸಮಾವೇಶದ ಸ್ಥಳಕ್ಕೆ ಆಗಮಿಸಿತ್ತು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ