ನಿಧನ ವಾರ್ತೆ
ಕೆಂಚಪ್ಪ ಸಿದ್ದಯ್ಯ ವಡೇರ

ಬೆಟಗೇರಿ : ರಾಷ್ಟ್ರಮಟ್ಟದ ಶೌರ್ಯ ಪ್ರಶಸ್ತಿ ವಿಜೇತ, ಈಗ ಸವದತ್ತಿ ಅಗ್ನಿಶ್ಯಾಮಕ ಇಲಾಖೆಯಲ್ಲಿ ಅಗ್ನಿಶ್ಯಾಮಕನಾಗಿ ಸೇವೆ ಸಲ್ಲಿಸುತ್ತಿರುವ ಅಶೋಕ ವಡೇರ ಅವರ ತಂದೆಯವರಾದ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಪಂ ಮಾಜಿ ಸದಸ್ಯ, ಸ್ಥಳೀಯ ವಡೇರ ಸಮುದಾಯದ ಹಿರಿಯರಾದ ಕೆಂಚಪ್ಪ ಸಿದ್ದಯ್ಯ ವಡೇರ(75)ಇವರು ಫೆ.14ರಂದು ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ನಾಲ್ಕುಜನ ಪುತ್ರಿಯರು, ಸಹೋದರರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂದು-ಬಳಗ ಇದೆ.
ಸಂತಾಪ: ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ರಾಜಕೀಯ ಮುಖಂಡರು, ಸಂತ-ಶರಣರು, ಸರ್ವ ಸಮುದಾಯದ ಹಿರಿಯ ನಾಗರಿಕರು, ಸ್ಥಳೀಯರು ಕೆಂಚಪ್ಪ ವಡೇರ ಅವರ ನಿಧನಕ್ಕೆ ತೀವ್ರ ಸಂತಾಪ ಶೋಕ ವ್ಯಕ್ತಪಡಿಸಿದ್ದಾರೆ.
IN MUDALGI Latest Kannada News