Breaking News
Home / Recent Posts / ಎಲ್ಲ ಕ್ಷೇತ್ರಗಳಿಗೂ ಬಂಪರ್ ನೀಡಿದ ಸಿಎಂ ಬೊಮ್ಮಾಯಿ- ಶಾಸಕ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

ಎಲ್ಲ ಕ್ಷೇತ್ರಗಳಿಗೂ ಬಂಪರ್ ನೀಡಿದ ಸಿಎಂ ಬೊಮ್ಮಾಯಿ- ಶಾಸಕ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

Spread the love

ಎಲ್ಲ ಕ್ಷೇತ್ರಗಳಿಗೂ ಬಂಪರ್ ನೀಡಿದ ಸಿಎಂ ಬೊಮ್ಮಾಯಿ- ಶಾಸಕ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

ಗೋಕಾಕ್- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಎಲ್ಲ ಕ್ಷೇತ್ರಗಳಿಗೆ ಅನುದಾನದ ಮಹಾಪೂರವೇ ಹರಿದು ಬಂದಿದೆ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಕೃಷಿ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದ್ದು, ಇದೊಂದು ಜನಪರ ಹಾಗೂ ರೈತ ಪರ ಬಜೆಟ್ ಆಗಿದೆ.
೯ ಲಕ್ಷ ಹಾಲು ಉತ್ಪಾದಕರಿಗೆ ೧೦೬೭ ಕೋಟಿ ರೂ. ಪ್ರೋತ್ಸಾಹ ಧನ, ರೈತರಿಗಾಗಿ ಭೂಸಿರಿ ಯೋಜನೆ, ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ೧೦ ಸಾವಿರ ರೂ. ಹೆಚ್ಚಿನ ಸಹಾಯಧನ, ಕ್ರೀಮಿ ನಾಶಕ, ರಸಗೊಬ್ಬರ, ಬೀಜ ಖರೀದಿಗೆ ಅನುಕೂಲವಾಗಲಿದ್ದು, ೫೦ ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ರೈತರಿಗೆ ರೂ. ೫ ಲಕ್ಷ ತನಕ ಶೂನ್ಯ ಬಡ್ಡಿ ದರ, ಮಹಿಳೆಯರ ಅಭಿವೃದ್ಧಿ ಗೆ ಗೃಹಿಣಿ ಶಕ್ತಿ, ಶ್ರಮ ಶಕ್ತಿ ಯೋಜನೆ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಪಜಾ.ಪಪಂ ಬಿಪಿಎಲ್ ಅಮೃತ ಕಾಲ,ನಿರುದ್ಯೋಗ ಯುವಕರಿಗೆ ಯುವ ಸ್ನೇಹಿ, ಗ್ರಾ.ಪಂ‌ಸದಸ್ಯರ ಗೌರವ ಧನ ಹೆಚ್ಚಳ, ಕಿತ್ತೂರ ಕರ್ನಾಟಕ ಅಭಿವೃದ್ಧಿ ಮಂಡಳಿ ಸೇರಿದಂತೆ ಎಲ್ಲ ವರ್ಗಗಳಿಗೆ ಈ ಬಜೆಟ್ ಪೂರಕವಾಗಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.


Spread the love

About inmudalgi

Check Also

ಆರ್.ಡಿ.ಎಸ್. ಪಿಯು ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುವ ಸಮಾರಂಭ

Spread the love  ಮೂಡಲಗಿ : ದಿನಾಂಕ 19-01-2026 ರಂದು ಇಲ್ಲಿನ ಶೈಕ್ಷಣಿಕ ಸಂಸ್ಥೆಯಾದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ