Breaking News
Home / Recent Posts / ಪ್ರತಿಯೊಬ್ಬರೂ ದೇಶಿ ಕ್ರೀಡೆಗಳನ್ನು ಉಳಿಸಿ ಬೆಳಸಬೇಕಾಗಿದೆ: ಬಸವಂತ ಕೋಣಿ

ಪ್ರತಿಯೊಬ್ಬರೂ ದೇಶಿ ಕ್ರೀಡೆಗಳನ್ನು ಉಳಿಸಿ ಬೆಳಸಬೇಕಾಗಿದೆ: ಬಸವಂತ ಕೋಣಿ

Spread the love

ಪ್ರತಿಯೊಬ್ಬರೂ ದೇಶಿ ಕ್ರೀಡೆಗಳನ್ನು ಉಳಿಸಿ ಬೆಳಸಬೇಕಾಗಿದೆ: ಬಸವಂತ ಕೋಣಿ

ಬೆಟಗೇರಿ:ಇಂದಿನ ಯುಗದಲ್ಲಿ ನಮ್ಮ ದೇಶಿಕ್ರೀಡೆಗಳು ಅವನತಿ ಅಂಚಿನಲ್ಲಿವೆ. ಪ್ರತಿಯೊಬ್ಬರೂ ದೇಶಿ ಕ್ರೀಡೆಗಳನ್ನು ಉಳಿಸಿ ಬೆಳಸಬೇಕಾಗಿದೆ ಎಂದು ಬೆಟಗೇರಿ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜೈ ದುರ್ಗಾದೇವಿ ಕಬಡ್ಡಿ ತಂಡದ ಸಹಯೋಗ ಹಾಗೂ ಅರಭಾಂವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೀಡಿದ ನಗದು ಬಹುಮಾನ ಪ್ರಾಯೋಜಕತ್ವದಲ್ಲಿ ಫೆ.19ರಂದು ಸ್ಥಳೀಯ ಯಲ್ಲಾಲಿಂಗ ಮಹಾರಾಜರ ಮಠದ ಆವರಣದಲ್ಲಿ ನಡೆದ 38 ರಿಂದ 40 ಕೆ.ಜಿ. ಕಬಡ್ಡಿ ಪಂದ್ಯಾವಳಿ ಉದ್ಘಾಟನೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಮಾತನಾಡಿ, ದೇಶಿ ಕ್ರೀಡಾಕೂಟಗಳಲ್ಲಿ ಮಕ್ಕಳು, ಯುವಕರು ಪಾಲ್ಗೊಳ್ಳುವುದರಿಂದ ಶಾರೀರಕ ಸದೃಢತೆ ಹೆಚ್ಚುತ್ತದೆ ಎಂದರು.
ಬಹುಮಾನ ವಿತರಣೆ: ವಿವಿಧ ಕಬಡ್ಡಿ ತಂಡಗಳ ಪಂದ್ಯಾವಳಿ ಸ್ಪರ್ಧೆ ನಡೆದ ಬಳಿಕ ಸ್ಥಳೀಯ ಜೈ ದುರ್ಗಾದೇವಿ ಕಬಡ್ಡಿ ತಂಡ ಪ್ರಥಮ, ಶ್ರೀ ಬಸವೇಶ್ವರ ಕಬಡ್ಡಿ ತಂಡ ದ್ವಿತೀಯ, ಗೆಳೆಯರ ಬಳಗ ತೃತೀಯ ಸ್ಥಾನ ಪಡೆದು ನಗದು ಬಹುಮಾನ, ಪ್ರಶಸ್ತಿ ಪಡೆದುಕೊಂಡಿವೆ ಎಂದು ಕಬಡ್ಡಿ ಪಂದ್ಯಾವಳಿ ಆಯೋಜಕ ಸಮಿತಿ ಸಂಚಾಲಕ ಮುತ್ತು ತೋಟಗಿ ತಿಳಿಸಿದ್ದಾರೆ.
ಸುಭಾಷ ಕರೆಣ್ಣವರ, ಭರಮಣ್ಣ ಪೂಜೇರಿ, ರಾಮಣ್ಣ ಕತ್ತಿ, ಪ್ರಕಾಶ ಗುಡದಾರ, ಬಸಪ್ಪ ಚಂದರಗಿ, ಮಲ್ಲಪ್ಪ ಪೇದನ್ನವರ, ಸಿದ್ದಪ್ಪ ಬಾಣಸಿ, ಹನುಮಂತ ವಗ್ಗರ, ಬಸವರಾಜ ಯಡ್ರಾಂವಿ, ಚಿದಾನಂದ ಮೇಲೆಣ್ಣವರ, ರಾಜಕೀಯ ಮುಖಂಡರು, ಕಬಡ್ಡಿ ಪಂದ್ಯಾವಳಿ ಆಯೋಜಕ ಸಮಿತಿ ಸದಸ್ಯರು, ವಿವಿಧ ಕಬಡ್ಡಿ ತಂಡಗಳ ನಾಯಕರು, ಕ್ರೀಡಾಪಟುಗಳು, ಗಣ್ಯರು, ಯುವಕರು, ಗ್ರಾಮಸ್ಥರು, ಇತರರು ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ