ಶ್ರೀ ಸತ್ಯ ಸಾಯಿಬಾಬಾರ 16ನೇ ವಾರ್ಷಿಕೋತ್ಸವ ಮಾ.5ರಂದು
ಮೂಡಲಗಿ : ಪಟ್ಟಣದ ಶ್ರೀ ಸತ್ಯ ಸಾಯಿಬಾಬಾ ಸೇವಾ ಸಮಿತಿ ಆಶ್ರಯದಲ್ಲಿ ಶ್ರೀ ಸತ್ಯ ಸಾಯಿಬಾಬಾರ 16ನೇ ವಾರ್ಷಿಕೋತ್ಸವ ಸಮಾರಂಭವು ಮಾ.5 ರಂದು ಆರ್.ಡಿ.ಎಸ್. ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ನಡೆಯಲಿದೆ.
ಸಮಾರಂಭದ ಸಾನಿದ್ಯವನ್ನು ಸ್ಥಳೀಯ ಶ್ರೀ ಶಿವಬೋಧರಂಗ ಮಠದ ಶ್ರೀ ದತ್ತಾತ್ರೇಯಬೋಧ, ಶ್ರೀ ಶ್ರೀಧರಬೋಧಬೋಧ ಸ್ವಾಮೀಜಿಗಳು, ಸುಣಧೋಳಿ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿಗಳು, ಶಿರೂಂಜದ ಶ್ರೀ ಬಸವ ಸಮರ್ಥ ಸ್ವಾಮಿಗಳು ವಹಿಸುವರು.
ಶ್ರೀ ಸತ್ಯ ಸಾಯಿಬಾಬಾ ಸೇವಾ ಸಮಿತಿ ಬೆಳಗಾವಿ ಜಿಲ್ಲಾ ಅಧ್ಯಕ್ಷ ವಸಂತ ಬಾಳಿಗಾ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಬೆಳಗಾವಿ ವಿಭಾಗ ಸುರೇಶ ಕಬ್ಬೂರ, ಆರ್.ಡಿ.ಎಸ್. ಸಂಸ್ಥೆಯ ಅಧ್ಯಕ್ಷ ಸಂತೋಷ ಪಾರ್ಶಿ, ಬಿಇಒ ಅಜಿತ ಮನ್ನಿಕೇರಿ ಆಗಮಿಸುವರು.
ಮಾ.5 ರಂದು 4-45 ಗಂಟೆಯಿಂದ ಓಂಕಾರ, ಸುಪ್ರಭಾತ, ನಗರ ಸಂಕೀರ್ತನೆ, ಶ್ರೀ ಸತ್ಯ ನಾರಾಯಣ ಪೂಜಾ ಸೇವೆ, ಮಹಾನಾರಾಣ ಸೇವೆ, ಪ್ರಶಾಂತಿ ಧ್ವಜಾರೋಹಣ, ಶ್ರೀ ಸತ್ಯಸಾಯಿ ಭಜನೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಚಾಲಕರು ಶ್ರೀ ಸತ್ಯ ಸಾಯಿಬಾಬಾ ಸೇವಾ ಸಮಿತಿಯವರು ತಿಳಿಸಿದ್ದಾರೆ.
IN MUDALGI Latest Kannada News