ಮಾ.14ರಿಂದ ಗೋಸಬಾಳ ಗ್ರಾಮದ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ
ಬೆಟಗೇರಿ:ಗೋಕಾಕ ತಾಲೂಕಿನ ಗೋಸಬಾಳ ಗ್ರಾಮದಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಇಲ್ಲಿಯ ಗ್ರಾಮದೇವತೆ ಶ್ರೀದ್ಯಾಮವ್ವದೇವಿ ಜಾತ್ರಾಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಾ.14ರಿಂದ ಮಾ.17ರವರೆಗೆ ನಡೆಯಲಿವೆ.
ಮಾ.14ರಂದು ಮುಂಜಾನೆ 9ಗಂಟೆಗೆ ಸುಮಂಗಲೆಯರಿಂದ ಕುಂಭ, ಆರತಿ, ಸಕಲವಾದ್ಯಮೇಳಗಳೊಂದಿಗೆ ಸ್ಥಳೀಯ ಬಸ್ ತಂಗುದಾಣಕ್ಕೆ ಹೋಗುವುದು. ಜಾತ್ರಾಮಹೋತ್ಸವ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸುಣಧೋಳಿ ಅಭಿನವ ಶಿವಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಶ್ರೀದೇವಿಗೆ ಪೂಜೆ ಸಲ್ಲಿಸುವರು, ಉದ್ಘಾಟಕರಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಶ್ರೀದೇವಿಗೆ ಪುಷ್ಪಾರ್ಚನೆ ಮಾಡಿದ ನಂತರ ಅಗಸಿಯ ಮೂಲಕ ಗೌಡರ ಕಟ್ಟೆಗೆ ಶ್ರೀದೇವಿ ತಂದು ಕೂಡ್ರಿಸುವುದು. ಪುರಜನರಿಂದ ಶ್ರೀದೇವಿಗೆ ಪೂಜೆ ಪುನಸ್ಕಾರ, ಉಡಿತುಂಬುವದು, ನೈವೇದ್ಯ ಸಮರ್ಪನೆ ನಡೆದ ಬಳಿಕ 11 ಗಂಟೆಗೆ ಶ್ರೀಗಳಿಗೆ ಗಣ್ಯರಿಗೆ ಸತ್ಕಾರ ಸಮಾರಂಭ ನಡೆಯಲಿದೆ.
ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಗ್ರಾಪಂ ಅಧ್ಯಕ್ಷೆ ಆಶವ್ವ ಡಬರಿ ಸೇರಿದಂತೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ರಾಜಕೀಯ ಮುಖಂಡರು, ಜಿಪಂ, ತಾಪಂ, ಗ್ರಾಪಂ, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಸಂತ ಶರಣರು ಮುಖ್ಯಅತಿಥಿಗಳಾಗಿ ಉಪಸ್ಥಿತರಿರುವರು.
ಗೌಡರಕಟ್ಟೆಯಿಂದ ಸಾಯಂಕಾಲ 4 ಗಂಟೆಗೆ ಸಕಲವಾದ್ಯಮೋಳಗಳೊಂದಿಗೆ ಶ್ರೀ ಬೀರಸಿದ್ದೇಶ್ವರ ದೇವಸ್ಥಾನದಲ್ಲಿ ಕೂಡ್ರಿಸಿ ಪೂಜೆ, ಉಡಿತುಂಬುವದು, ನೈವೇದ್ಯ ಸಮರ್ಪನೆ ನಡೆಯುವುದು. ರಾತ್ರಿ 10 ಗಂಟೆಗೆ ಹೊನ್ನಾಟದೊಂದಿಗೆ ಮತ್ತು ಸಕಲ ವಾದ್ಯಮೇಳಗಳೊಂದಿಗೆ ಶ್ರೀದೇವಿಯನ್ನು ಶ್ರೀ ಬೀರಸಿದ್ಧೇಶ್ವರ ದೇವಸ್ಥಾನದಿಂದ ಶ್ರೀ ತಳದಮ್ಮ ದೇವಸ್ಥಾನಕ್ಕೆ ತಂದು ಕೂಡ್ರಿಸುವದು. ರಾತ್ರಿ 10.30 ಗಂಟೆಗೆ ಮೆಟಗುಡ್ಡದ ಶ್ರೀ ದುರ್ಗಾದೇವಿ ಚೌಡಕಿ ಗಾಯನ ಸಂಘ ಹಾಗೂ ಸ್ಥಳೀಯ ಬೀರಸಿದ್ಧೇಶ್ವರ ಡೊಳ್ಳಿನ ಗಾಯನ ಸಂಘದವರಿಂದ ಗಾಯನ ಕಾರ್ಯಕ್ರಮಗಳು ಜರುಗಲಿವೆ.
ಮಾ.15ರಂದು ಮುಂಜಾನೆ 10ಗಂಟೆಗೆ ಶ್ರೀ ತಳದಮ್ಮ ದೇವಸ್ಥಾನದಿಂದ ಶ್ರೀದೇವಿಯನ್ನು ಸಕಲ ವಾದ್ಯಮೇಳಗಳೊಂದಿಗೆ ವಡ್ಡರ ಓಣಿಯ ಲಕ್ಷ್ಮೀ ದೇವಸ್ಥಾನಕ್ಕೆ ತಂದು ಕೂಡ್ರಿಸಿ, ಪೂಜೆ, ಉಡಿತುಂಬುವದು, ನೈವೇದ್ಯ ಅರ್ಪಿಸುವದು, ಮದ್ಯಾಹ್ನ 12 ಗಂಟೆಗೆ 4 ಗಾಲಿಯ 4 ಡಬ್ಬಿ ಮರಳು ತುಂಬಿ ಟ್ಯಾಕ್ಟರ್ ಜಗ್ಗುವ ಸ್ಪರ್ಧೆ, ಮದ್ಯಾಹ್ನ 3 ಗಂಟೆಗೆ ಸ್ಪೀಡ್ ಸೃಕಲ್ ಸ್ಪರ್ಧೆ, ಸಾಯಂಕಾಲ 5 ಗಂಟೆಗೆ ವಡ್ಡರ ಓಣಿಯ ಲಕ್ಷ್ಮೀ ದೇವಸ್ಥಾನದಿಂದ ಕೆÀಳಗಿನ ಓಣಿಯ ಮೂಲಕ ಸಕಲ ವಾದ್ಯಮೇಳಗಳೊಂದಿಗೆ ಶ್ರೀ ದುಗಾದೇವಿ ದೇವಸ್ಥಾನಕ್ಕೆ ಶ್ರೀದೇವಿ ತಂದು ಕೂಡ್ರಿಸಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಮರ್ಪನೆ ಜರುಗಲಿದೆ. ರಾತ್ರಿ 10.30 ಗಂಟೆಗೆ ಸ್ಥಳೀಯ ದ್ಯಾಮವ್ವದೇವಿ ನಾಟ್ಯ ಸಂಘದವರಿಂದ ಮದನ ಮೋಹನ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಮಾ.16 ರಂದು ಬೆಳಗ್ಗೆ ಶ್ರೀದೇವಿಗೆ ವಿಶೇಷ ಪೂಜೆ, ಪುರಜನರಿಂದ ಉಡಿತುಂಬುವದು, ನೃವೇದ್ಯ ಅರ್ಪನೆ ಹಾಗೂ ವಿವಿದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಮುಂಜಾನೆ 9 ಗಂಟೆಗೆ ಜೋಡು ಎತ್ತಿನ ನಿಮೀಷದ ಬಂಡಿ ಶರ್ತು, ಮದ್ಯಾಹ್ನ 12 ಗಂಟೆಗೆ ಓಪನ್ ಟಗರಿನ ಕಾಳಗ ಸ್ಪರ್ಧೆ, ಮದ್ಯಾಹ್ನ 2 ಗಂಟೆಗೆ ದುರ್ಗಾದೇವಿ ದೇವಸ್ಥಾನದಿಂದ ಶ್ರೀದೇವಿಯನ್ನು ಸಕಲ ವಾದ್ಯ ಮೇಳಗಳೊಂದಿಗೆ ಲಕ್ಷ್ಮೀ ದೇವಿ ದೇವಸ್ಥಾನಕ್ಕೆ ತಂದು ಕೂಡ್ರಿಸಿದ ಬಳಿಕ ಸ್ಥಳೀಯರಿಂದ ಶ್ರೀದೇವಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಮರ್ಪನೆ, ರಾತ್ರಿ 10.30ಗಂಟೆಗೆ ಸ್ಥಳೀಯ ಶ್ರೀರಾಮ ನಾಟ್ಯ ಸಂಘದವರಿಂದ ತುತ್ತುಕೊಟ್ಟ ರೈತನಿಗೆ ಕುತ್ತು ತಂದ ಸರ್ಕಾರ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಮಾ.17 ರಂದು ಬೆಳಗ್ಗೆ ಸ್ಥಳೀಯ ಎಲ್ಲಾ ಜನರಿಂದ ಶ್ರೀದೇವಿಗೆ ಉಡಿತುಂಬುವದು, ಪೂಜೆ, ಅಭಿಷೇಕ, ನೆೃವೇದ್ಯ ಸಮರ್ಪನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ ನಂತರ ಮುಂಜಾನೆ 9 ಗಂಟೆಗೆ ಜೋಡೆತ್ತಿನ ತೆರೆ ಬಂಡಿ ಶರ್ತು, ಮದ್ಯಾಹ್ನ 12 ಗಂಟೆಗೆ ಜೋಡು ಕುದುರೆ ಬಂಡಿ ಶರ್ತು ನಡೆಯಲಿವೆ. ಅದೇ ದಿನ ರಾತ್ರಿ ಶ್ರೀದೇವಿಯನ್ನು ಸೀಮೆಗೆ ಕಳುಹಿಸುವ ಕಾರ್ಯಕ್ರಮ ನಡೆದು ಸ್ಥಳೀಯ ಗ್ರಾಮದೇವತೆ ದ್ಯಾಮವ್ವದೇವಿ ಪ್ರಸಕ್ತ ಜಾತ್ರಾಮಹೋತ್ಸವ ಸಮಾರೊಪಗೊಳ್ಳಲಿದೆ ಎಂದು ಶ್ರೀ ದ್ಯಾಮವ್ವದೇವಿ ಜಾತ್ರಾಮಹೋತ್ಸವ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.