ಅಪಾರ ಜನಸ್ತೋಮ ಮದ್ಯೆ ಹಗ್ಗವಿಲ್ಲದೆ ಜರುಗಿದ ಶ್ರೀ ಜಡಿಸಿದ್ಧೇಶ್ವರ ರಥೋತ್ಸವ
ಮೂಡಲಗಿ: ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಪ್ರತಿ ವರ್ಷ ದವನದ ಹುಣ್ಣಿಮೆ ಮುಗಿದ ನಾಲ್ಕನೇ ದಿನಕ್ಕೆ ಜರುಗುವ ಪವಾಡ ಪುರಷ ಶ್ರೀ ಜಡಿಸಿದ್ಧೇಶ್ವರ ಶ್ರೀಗಳ ಹಗ್ಗವಿಲ್ಲದೆ ರಥೋತ್ಸವ ಸೋಮವಾರ ಸಂಜೆ ಶ್ರೀ ಮಠದ ಶ್ರೀ ಶಿವಾನಂದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸಡಗರ ಸಂಭ್ರಮದಿಂದ ಅಪಾರ ಜನಸ್ತೋಮದ ಜಯಘೋಷಣೆಯಲ್ಲಿ ಜರುಗಿತು.
ಜಾತ್ರಾಮಹೋತ್ಸ ನಿಮಿತ್ಯವಾಗಿ ಶ್ರೀ ಮಠದಲ್ಲಿ ಮುಂಜಾನೆ ರುದ್ರಾಭಿಷೇಕ, 10 ಗಂಟೆಗೆ ಸಕಲ ವಾದ್ಯ ಮೇಳದೊಂದಿಗೆ ಗ್ರಾಮಾಂತರ ಕಳಸ ಮೇರವಣಿಗೆ ಜರುಗಿದವು, ಸಂಜೆ ಹೂ ಪುಷ್ಪಗಳಿಂದ ಶೃಂಗರಿಸಾಲಾಗಿದ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಶ್ರೀ ಶಿವಾನಂದ ಶ್ರೀಗಳೊಂದಿಗೆ ಅಪರಾ ಭಕ್ತ ಸಮೂಹ ಹರ ಹರ ಮಹಾದೇವ ಎಂಬ ಜಯಘೋಷದೊಂದಿಗೆ ಹಗ್ಗವಿಲ್ಲದೆ ಜರುಗುವ ರಥೋತ್ಸವಕ್ಕೆ ಭಕ್ತಾಧಿಗಳು ಬಾಳೆ ಹಣ್ಣು, ಬೆಂಡು-ಬೆತ್ತಾಸು, ಕಾರಿಕು, ತೆಂಗಿನಕಾಯಿ ಸಮರ್ಪಿಸಿ ತಮ್ಮ ಹರಕೆಯನ್ನು ತಿರಿಸಿ ಪುಣಿತರಾದರು.
ರಥೋತ್ಸವದಲ್ಲಿ ಸುಣಧೋಳಿ ಹಾಗೂ ವಿವಿಧ ಗ್ರಾಮಗಳ ದೇವರುಗಳ ಉತ್ಸವ ಮೂರ್ತಿ, ವಾಲಗ ಮತ್ತು ಪಲ್ಲಕ್ಕಿಗಳು ವಿಷೇಶ ಮೇರಗು ನೀಡಿದವು, ಜಡಿಸಿದ್ಧೇಶ್ವರ ಜಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಗೋವಾ, ಮಹಾರಾಷ್ಟ್ರ, ಆಂದ್ರಪ್ರದೇಶಗಳಿಂದ ಆಗಮಿಸಿದ್ದ ಭಕ್ತಾಧಿಗಳು ಹಗ್ಗವಿಲ್ಲದೆ ಜಗ್ಗುವ ತೇರನ್ನು ಕಂಡು ಪುಣಿತರಾದರು.