Breaking News
Home / Recent Posts / ಬದುಕಿನಲ್ಲಿ ಆನಂದಕ್ಕಾಗಿ ಆಧ್ಯಾತ್ಮ ಅವಶ್ಯ – ಆಧ್ಯಾತ್ಮಿಕ ಚಿಂತಕ ಚಿದಂಬರ ದೇಶಪಾಂಡೆ

ಬದುಕಿನಲ್ಲಿ ಆನಂದಕ್ಕಾಗಿ ಆಧ್ಯಾತ್ಮ ಅವಶ್ಯ – ಆಧ್ಯಾತ್ಮಿಕ ಚಿಂತಕ ಚಿದಂಬರ ದೇಶಪಾಂಡೆ

Spread the love

 

ಬದುಕಿನಲ್ಲಿ ಆನಂದಕ್ಕಾಗಿ ಆಧ್ಯಾತ್ಮ ಅವಶ್ಯ

ಗೋಕಾಕ: ‘ಮನುಷ್ಯನ ಬದುಕು ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಆಧ್ಯಾತ್ಮವು ಜೀವನದ ಒಂದು ಭಾಗವಾದಾಗ ಮಾತ್ರ ಬದುಕು ಸುಂದರ ಮತ್ತು ಆನಂದಮಯವಾಗಿರುತ್ತದೆ’ ಎಂದು ಪಾಶ್ವಾಪುರದ ಆಧ್ಯಾತ್ಮಿಕ ಚಿಂತಕ ಚಿದಂಬರ ಶ್ರೀಪಾದ ದೇಶಪಾಂಡೆ ಹೇಳಿದರು.
ತಾಲ್ಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಜಾತ್ರಾ ಮಹೋತ್ಸವದ ಸಾಹಿತ್ಯ, ಸಾಂಸ್ಕøತಿಕ ಸೌರಭ ಕಾರ್ಯಕ್ರಮದಲ್ಲಿ ‘ಬದುಕು ಮತ್ತು ಆಧ್ಯಾತ್ಮಿಕತೆ’ ಕುರಿತು ಉಪನ್ಯಾಸ ನೀಡಿದ ಅವರು ಆಧ್ಯಾತ್ಮವು ಮನುಷ್ಯ ತನ್ನ ಅಂತರಂಗವನ್ನು ಅರಿಯಲು ಪ್ರೇರಣೆ ನೀಡುತ್ತದೆ ಎಂದರು.
ಮನುಷ್ಯ ಪ್ರಸ್ತುತ ದಿನಮಾನದಲ್ಲಿ ಆಧುನಿಕತೆಯ ಒತ್ತಡಕ್ಕೆ ಸಿಲುಕಿ ತನ್ನ ಇರುವಿಕೆಯನ್ನು ಮರೆತಿದ್ದಾನೆ. ಕಾಲಚಕ್ರಕ್ಕೆ ಸಿಕ್ಕು ಗೋಳಾಡುವಂತಾಗಿದೆ. ಇದಕ್ಕೆಲ್ಲ ಪರಿಹಾರವು ಕೇವಲ ಆಧ್ಯಾತ್ಮದಿಂದ ಮಾತ್ರ ಸಾಧ್ಯ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಬೆಳಗಾವಿಯ ಸಾಹಿತಿ, ನ್ಯಾಯವಾದಿ ರವೀಂದ್ರ ತೋಟಗೇರಿ ಮಾತನಾಡಿ ಮಾನವ ಧರ್ಮವು ಎಲ್ಲ ಧರ್ಮಗಳಿಗಿಂತ ಶ್ರೇಷ್ಠವಾದದ್ದು. ಸ್ನೇಹ, ಸೌಹಾರ್ದತೆ, ಭ್ರಾತೃತ್ವದಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಪ್ರಗತಿ ಇರುತ್ತದೆ ಎಂದರು.
ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿ ಅವರು ಸಾನ್ನಿಧ್ಯವಹಿಸಿದ್ದರು.
ಕಡಣಿ ಶಾಂತವೀರಸ್ವಾಮಿ ಅವರು ಜಗದ್ಗುರು ಸಿದ್ದಲಿಂಗೇಶ್ವರ ಪುರಾಣವನ್ನು ಹೇಳಿದರು.
ಗಾನಭೂಷಣ ವೀರೇಶ ಕಿತ್ತೂರ, ಮಲ್ಲಿಕಾರ್ಜುನ ಹರತಿ, ರಾಘವೇಂದ್ರ ಕೃಷ್ಣಾ, ಶಾಮರಾವ ಪುಲಾರೆ, ವಿಜಯ ದೊಡ್ಡಣ್ಣವರ ಅವರಿಂದ ಜರುಗಿದ ಸಂಗೀತ ಗೋಷ್ಠಿ ಜರುಗಿತು.
ಶಿಕ್ಷಕ ಎಂ.ಎಸ್. ತೋಡಕರ ಮತ್ತು ರೋಹಿಣಿ ನಿರೂಪಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ