ಶ್ರೀ ಶಿವಬೋಧರಂಗ ಸೊಸಾಯಿಟಿಗೆ ರೂ.5.10 ಕೋಟಿ ನಿವ್ವಳ ಲಾಭ
ಮೂಡಲಗಿ: ಪಟ್ಟಣದ ಶ್ರೀ ಶಿವಬೋಧರಂಗ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ 2022-23ನೇ ಸಾಲಿನ ಅಂತ್ಯಕ್ಕೆ ರೂ. 5.10 ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸೊಸಾಯಿಟಿಯ ಅಧ್ಯಕ್ಷ ರೇವಪ್ಪ ಕುರಬಗಟ್ಟಿ ಅವರು ತಿಳಿಸಿದರು.
ಸೊಸಾಯಿಟಿಯ ಸಭಾಭನದಲ್ಲಿ ಸಂಘದ ಪ್ರಗತಿಯ ಬಗ್ಗೆ ತಿಳಿಸಲು ಮಂಗಳವಾರ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಸೊಸಾಯಿಟಿಯ ನಿರ್ದೇಶಕ ರವೀಂದ್ರ ಸೋನವಾಲ್ಕರ ಮಾತನಾಡಿ, ಸದ್ಯ ಸೊಸಾಯಿಟಿಯು ಒಟ್ಟು 14704 ಸದಸ್ಯರನ್ನು ಹೊಂದಿದ್ದು, ರೂ.5.25ಕೋಟಿ ಶೇರು ಬಂಡವಾಳ, ರೂ.22.82 ಕೋಟಿ ನಿಧಿಗಳು, ರೂ.262.36 ಕೋಟಿ ಠೇವುಗಳು, ರೂ. 312.50 ಕೋಟಿದುಡಿಯುವ ಬಂಡವಾಳ, ರೂ. 85.58 ಕೋಟಿ ಗುಂತಾವಣಿಗಳನ್ನು ಹೊಂದಿದ್ದು, ವಿವಿಧ ಕ್ಷೇತ್ರಗಳಿಗೆ ರೂ. 166.16 ಕೋಟಿ ಸಾಲಗಳನ್ನು ನೀಡಿದೆ. ಈಗಾಗಲೇ 16 ಶಾಖೆಗಳು ಪ್ರಗತಿಯಲ್ಲಿದ್ದು, ಘಟಪ್ರಭಾ, ಯರಗಟ್ಟಿಯಲ್ಲಿ ಇನ್ನೇರಡು ಶಾಖೆಗಳನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುದು ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಸುರೇಶ ನಾಶಿ ಮಾತನಾಡಿ, ಸೊಸಾಯಿಟಿಯಲ್ಲಿ ಸ್ವಂತ ಡಾಟಾ ಸೇಂಟರ ಹೊಂದಿ ಕೋರ ಬ್ಯಾಂಕಿಂಗ ಅಳವಡಿಸಿಕೊಳ್ಳಲಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪುಲಕೇಶಿ ಸೋನವಾಲ್ಕರ, ನಿರ್ದೇಶಕರಾದ ಬಸವರಾಜ ಗುಲಗಾಜಂಬಗಿ, ಡಾ.ಎಸ್.ಎಸ್.ದಂಡಪ್ಪನವರ, ಎಸ್.ಆರ್.ಸೋನವಾಲ್ಕರ, ಅಶೋಕ ಹೊಸೂರ, ವಿದ್ಯಾವತಿ ಸೋನವಾಲ್ಕರ, ಶಾರದಾ ಗುಲಗಾಜಂಬಗಿ, ಮಂಜುಳಾ ಬಳಿಗಾರ ಇದ್ದರು. .