ಮೇ 5ರಂದು ಲಿಂ. ಸಿದ್ದಾರಾಮೇಶ್ವರ ಸ್ವಾಮೀಜಿ ಪುಣ್ಯಾರಾಧನೆ
ಗೋಕಾಕ: ತಾಲ್ಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಪೀಠದ 14ನೇ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಜಗದ್ಗುರು ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿಯವರ 44ನೇ ಪುಣ್ಯಾರಾಧನೆ ಕಾರ್ಯಕ್ರಮವು ಮೇ 5ರಂದು ಜರುಗಲಿದೆ.
ಮೇ 5ರಂದು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಸನ್ನಿಧಿಗೆ ರುದ್ರಾಭೀಷೇಕ, ಬೆಳಿಗ್ಗೆ 10ಕ್ಕೆ ಮಹಾಪೂಜೆ ಹಾಗೂ ಬೆಳಿಗ್ಗೆಯಿಂದ ರಾತ್ರಿಯವರೆಗೆ ಮಹಾಪ್ರಸಾದ ಇರುವುದು.
ಸಂಜೆ 7.30ಕ್ಕೆ ಜರುಗುವ ವೇದಿಕೆ ಸಮಾರಂಭದ ಸಾನ್ನಿಧ್ಯವನ್ನು ವಹಿಸುವ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಕಾರ್ಯಕ್ರಮವನ್ನು ಉದ್ಘಾಟಿಸುವರು.
ಸಮಾರಂಭದ ಅಧ್ಯಕ್ಷತೆಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ವಹಿಸಿಕೊಳ್ಳುವರು. ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ. ಸರಜೂ ಕಾಟಕರ ಹಾಗೂ ಸಾಹಿತಿ, ನ್ಯಾಯವಾದಿ ರವೀಂದ್ರ ತೋಟಿಗೇರ ಭಾಗವಹಿಸುವರು.
ಕೀರ್ತನ, ಸಂಗೀತ: ಕಡಣಿಯ ಚನ್ನವೀರಸ್ವಾಮಿ ಹಿರೇಮಠ ಅವರಿಂದ ಕೀರ್ತನ ಇರುವುದು. ಚಿಕ್ಕಹೆಸರೂರಿನ ಶಿವಕುಮಾರ ಗವಾಯಿಗಳು ಹಾಗೂ ಗದಗದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ವೀರೇಶ ಕಿತ್ತೂರ ಹಾಗೂ ಸಂಗೀತ ಕಲಾವಿದರಿಂದ ಸಂಗೀತ ಗೋಷ್ಠಿ ಇರುವುದು ಎಂದು ಸಂಚಾಲಕ ಬಾಲಶೇಖರ ಬಂದಿ ತಿಳಿಸಿದ್ದಾರೆ.
IN MUDALGI Latest Kannada News