ಮೇ.27 ರಂದು ಮೂಡಲಗಿ ನ್ಯಾಯಾಲಯದ ನೂತನ ಕಟ್ಟಡ ಉದ್ಘಾಟನೆ
ಮೂಡಲಗಿ: ಬೆಳಗಾವಿ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಚಿಕ್ಕೋಡಿ ಹಾಗೂ ವಕೀಲರ ಸಂಘ ಮೂಡಲಗಿ ಆಶ್ರಯದಲ್ಲಿ ಮೂಡಲಗಿ ನ್ಯಾಯಾಲಯದ ನೂತನ ಕಟ್ಟಡ ಹಾಗೂ ನ್ಯಾಯಾಧೀಶರ ವಸತಿ ಗೃಹದ ಉದ್ಘಾಟನಾ ಸಮಾರಂಭ ಮೂಡಲಗಿ ಪಟ್ಟಣದಲ್ಲಿ ಮೇ.27 ರಂದು ಮುಂಜಾಣೆ 10-30ಕ್ಕೆ ಜರುಗಲಿದೆ ಎಂದು ಮೂಡಲಗಿ ವಕೀಲರ ಸಂಘದ ಅಧ್ಯಕ್ಷ ಸುಧೀರ ಗೋಡಿಗೋಡರ ಹೇಳಿದರು.
ಗುರುವಾರದಂದು ಪಟ್ಟಣದ ಪತ್ರಿಕಾ ಕಛೇರಿಯಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮೂಡಲಗಿ ನ್ಯಾಯಾಲಯದ ನೂತನ ಕಟ್ಟಡದ ಉದ್ಘಾಟನೆ ಸಮಾರಂಭದ ಬಗ್ಗೆ ಮಾತನಾಡಿ, ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಮೂರ್ತಿಗಳಾದ ಪ್ರಸನ್ನ ಬಿ.ವರಾಳೆ ಉದ್ಘಾಟಿಸುವರು, ಬೆಳಗಾವಿ ಜಿಲ್ಲಾ ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಅಧ್ಯಕ್ಷತೆ ವಹಿಸುವರು, ಗೌರವ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸಚಿನ್ ಶಂಕರ ಮಗದುಮ್, ಶ್ರೀಮತಿ ಕೆ.ಎಸ್.ಹೇಮಲೇಖಾ, ಅನೀಲ್ ಬಿ.ಕಟ್ಟಿ, ರಾಮಚಂದ್ರ ಡಿ.ಹುದ್ದಾರ, ವಿಜಯಕುಮಾರ ಎ.ಪಾಟೀಲ ಭಾಗವಹಿಸುವರು, ವಿಶೇಷ ಆಹ್ವಾನಿತರಾಗಿ ಅರಭಾವಿ ಶಾಸಕ ಬಾಲಚಂದ್ರ ಲ.ಜಾರಕಿಹೊಳಿ, ಸಂಸದರಾದ ಮಂಗಳಾ ಅಂಗಡಿ, ಈರಣ್ಣ ಕಡಾಡಿ, ಕರ್ನಾಟಕ ಉಚ್ಚ ನ್ಯಾಯಾಲಯದ ಮಹಾವಿಲೇಖನಾಧಿಕಾರಿ ಕೆ.ಎಸ್.ಭರತಕುಮಾರ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಉಪಾಧ್ಯಕ್ಷ ವಿನಯ ಬಿ.ಮಾಂಗಲೇಕರ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಕಲ್ಮೇಶ ಟಿ.ಕಿವಡ ಭಾಗವಹಿಸುವರು ಎಂದು ಸುಧಿರ ಗೋಡಿಗೌಡರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೂಡಲಗಿ ವಕೀಲರ ಸಂಘದ ಉಪಾಧ್ಯಕ್ಷ ಎಲ್.ಬಿ.ವಡೇರ, ಕಾರ್ಯದರ್ಶಿ ಬಿ.ವಾಯ್.ಹೆಬ್ಬಾಳ, ಜಂಟಿ ಕಾರ್ಯದರ್ಶಿ ಎಸ್.ಬಿ.ತುಪ್ಪದ, ಖಜಾಂಚಿ ಎಸ್.ಎಂ.ಗಿಡೋಜಿ, ವಕೀಲರಾದ ವಿನೋಧ ಪಾಟೀಲ, ಆರ್.ಬಿ.ಪತ್ತಾರ, ವಾಯ್.ಎಲ್.ಖಾನಟ್ಟಿ, ಆರ್.ವಿ.ಗಾಡದವರ ಇದ್ದರು.