ಗ್ರಾ.ಪಂ ಅಧ್ಯಕ್ಷೆಯಾಗಿ ಶೋಭಾ ಅಶೋಕ ಪೂಜೇರಿ ಅವಿರೋಧ ಆಯ್ಕೆ
ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಗ್ರಾಮ ಪಂಚಾಯತ ನೂತನ ಅಧ್ಯಕ್ಷೆಯಾಗಿ ಶೋಭಾ ಅಶೋಕ ಪೂಜೇರಿ ಅವಿರೋಧ ಆಯ್ಕೆಯಾಗಿದ್ದಾರೆ.
ಹಿಂದೆ ಅಧ್ಯಕ್ಷೆಯಾದ ವಿಮಲಾ ಸಸಾಲಟ್ಟಿ ಇವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು ಶೋಭಾ ಇವರು ಅವಿರೋಧ ಆಯ್ಕೆಯಾಗಿದ್ದಾರೆ.
ಗ್ರಾಮದ ಅಭಿವೃದ್ದಿ ಗಮನದಲ್ಲಿ ಇಟ್ಟುಕೊಂಡು ಮೊದಲ ಅವಧಿಯ ಉಳಿದ ದಿನಕ್ಕೆ ಅಧ್ಯಕ್ಷರ ಆಯ್ಕೆ ಅವಶ್ಯವಿದ್ದು ಇಂದು ಸರ್ವ ಸದಸ್ಯರು ಹಾಗೂ ಚುನಾವಣಾಧಿಕಾರಿಗಳ ಸಮ್ಮೂಖದಲ್ಲಿ ಅಧ್ಯಕ್ಷೆ ಆಯ್ಕೆ ಮಾಡಲಾಯಿತು ಎಂದು ಮಾಜಿ ಜಿಪಂ ಸದಸ್ಯ ಗೋವಿಂದ ಕೊಪ್ಪದ ಮಾತನಾಡುತ್ತಾ ತಿಳಿಸಿದರು.
ಈ ಸಂದರ್ಭದಲ್ಲಿ ಟಿ.ಎ.ಪಿ.ಸಿ.ಎಮ್.ಎಸ್ ಅಧ್ಯಕ್ಷೆ ಅಶೋಕ ನಾಯಿಕ.ಮಾಜಿ ಗ್ರಾಪಂ ಅಧ್ಯಕ್ಷ ಬಸನಗೌಡ ಪಾಟೀಲ. ಮಾಜಿ ತಾಪಂ ಸದಸ್ಯ ಸುಭಾಸ ವಂಟಗೋಡಿ. ಪಿ.ಡಿ.ಓ ಸದಾಶಿವ ದೇವರ. ಭೀಮಶಿ ಪೂಜೇರಿ. ರಾಮಣ್ಣಾ ಬೈರನಟ್ಟಿ. ತಮ್ಮಣ್ಣಾ ದೇವರ. ಪ್ರಕಾಶ ಬೀಸನಕೊಪ್ಪ. ಬಸು ಯರಗಟ್ಟಿ. ನಾಗೇಶ ವಂಡಿವಡ್ಡರ. ಸೋಮಲಿಂಗ ಮೀಕಲಿ. ವಿಜಯ ಜಡ್ಲಿ.ಬಸು ಬಿಲಕುಂದಿ ಹಾಗೂ ಗ್ರಾಪಂ ಸದಸ್ಯರು, ಗ್ರಾಮ ಮುಖಂಡರು ಇದ್ದರು.
IN MUDALGI Latest Kannada News